ಟಿ20ಯಲ್ಲಿ ಅತಿಹೆಚ್ಚು ರನ್ ಕಲೆ ಹಾಕಿರುವ ಟಾಪ್ 5 ಡೇಂಜರಸ್ ಬ್ಯಾಟ್ಸ್‌ಮನ್‌ ಇವರೇ; ಇಬ್ಬರು ಭಾರತೀಯರು!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‍ಗಿಂತ ಅತಿ ಹೆಚ್ಚು ಸದ್ದು ಮಾಡುತ್ತಿರುವ ಕ್ರಿಕೆಟ್ ಸ್ವರೂಪವೆಂದರೆ ಅದು ಟಿ ಟ್ವೆಂಟಿ ಕ್ರಿಕೆಟ್ ಎಂಬುದನ್ನು ಎಲ್ಲರೂ ಸ್ವೀಕರಿಸಲೇಬೇಕು. ಈ ಟಿ ಟ್ವೆಂಟಿ ಕ್ರಿಕೆಟ್ ಕೇವಲ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮಾತ್ರ ಸೀಮಿತವಾಗಿರದೇ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳ ಮೂಲಕ ವಿಶ್ವದಾದ್ಯಂತ ಪಸರಿಸಿದೆ ಹಾಗೂ ಅಪಾರವಾದ ವೀಕ್ಷಕರ ಬಳಗವನ್ನು ಹೊಂದಿದೆ.

ಕಾಮನ್‍ವೆಲ್ತ್: ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನೂ ಆಡಿರದ ತಂಡದ ವಿರುದ್ಧ ಸೋತ ಪಾಕಿಸ್ತಾನ!ಕಾಮನ್‍ವೆಲ್ತ್: ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನೂ ಆಡಿರದ ತಂಡದ ವಿರುದ್ಧ ಸೋತ ಪಾಕಿಸ್ತಾನ!

ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ ಯಶಸ್ಸು ಸಾಧಿಸಿದ ನಂತರ ಟಿ ಟ್ವೆಂಟಿ ಕ್ರಿಕೆಟ್ ಸ್ವರೂಪದಲ್ಲಿ ವಿಶ್ವದಾದ್ಯಂತ ಹಲವಾರು ವಿಭಿನ್ನ ಫ್ರಾಂಚೈಸಿ ಲೀಗ್‌ ಟೂರ್ನಿಗಳು ಆರಂಭವಾದವು. ಇನ್ನು ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಟಿ ಟ್ವೆಂಟಿ ಕ್ರಿಕೆಟ್ ಎದುರು ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್ ಮಂಕಾಗುತ್ತಿದೆ, ಏಕದಿನ ಕ್ರಿಕೆಟ್ ಓವರ್ ಮಿತಿಯನ್ನು ಕೊಂಚ ತಗ್ಗಿಸಬೇಕು ಎಂಬ ಅಭಿಪ್ರಾಯಗಳನ್ನು ಸಹ ಕೆಲ ಹಿರಿಯ ಕ್ರಿಕೆಟಿಗರು ವ್ಯಕ್ತಪಡಿಸಿದ್ದರು.

ಕಾಮನ್‍ವೆಲ್ತ್ 2022: ಮೊದಲ ದಿನದ ಮುಕ್ತಾಯಕ್ಕೆ ಯಾವ ದೇಶ ಎಷ್ಟು ಪದಕ ಗೆದ್ದಿದೆ? ಇಲ್ಲಿದೆ ಪದಕ ಪಟ್ಟಿಕಾಮನ್‍ವೆಲ್ತ್ 2022: ಮೊದಲ ದಿನದ ಮುಕ್ತಾಯಕ್ಕೆ ಯಾವ ದೇಶ ಎಷ್ಟು ಪದಕ ಗೆದ್ದಿದೆ? ಇಲ್ಲಿದೆ ಪದಕ ಪಟ್ಟಿ

ಹೀಗೆ ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿರುವ ಈ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಹಲವಾರು ಸ್ಟಾರ್ ಕ್ರಿಕೆಟಿಗರು ತಮ್ಮದೇ ಆದ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಆರಂಭವಾದ ಕೆಲ ಸಮಯದಲ್ಲಿಯೇ ಹಲವಾರು ಕ್ರಿಕೆಟ್ ದಿಗ್ಗಜರು ನಿವೃತ್ತಿ ಹೊಂದಿದ ಕಾರಣ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಬೃಹತ್ ದಾಖಲೆಗಳನ್ನು ನಿರ್ಮಿಸಿರುವ ಆಟಗಾರರ ಹೆಸರುಗಳು ಈ ಟಿ ಟ್ವೆಂಟಿ ಕ್ರಿಕೆಟ್ ದಾಖಲೆಗಳಡಿಯಲ್ಲಿ ಹೆಚ್ಚೇನೂ ಕೇಳಿಬರುವುದಿಲ್ಲ. ಅಂದಹಾಗೆ ಈ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಯಾರ ಹೆಸರಿನಲ್ಲಿದೆ ಮತ್ತು ಅತಿ ಹೆಚ್ಚು ರನ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ. ( ಜುಲೈ 29, 2022ರವರೆಗಿನ ಪಟ್ಟಿ )

5. ಆ್ಯರನ್ ಫಿಂಚ್

5. ಆ್ಯರನ್ ಫಿಂಚ್

ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಆ್ಯರನ್ ಫಿಂಚ್ ಇಲ್ಲಿಯವರೆಗೂ ಒಟ್ಟು 92 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದು, ಈ ಪೈಕಿ 2855 ರನ್‌ಗಳನ್ನು ಕಲೆಹಾಕಿ ಅತಿ ಹೆಚ್ಚು ಅಂತರರಾಷ್ಟ್ರೀಯ ಟಿ ಟ್ವೆಂಟಿ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಆ್ಯರನ್ ಫಿಂಚ್ 2 ಶತಕ ಮತ್ತು 17 ಅರ್ಧಶತಕಗಳನ್ನು ಈ ಮಾದರಿಯಲ್ಲಿ ಬಾರಿಸಿದ್ದು, 172 ಗರಿಷ್ಠ ರನ್ ಹೊಂದಿದ್ದಾರೆ.

4. ಪೌಲ್ ಸ್ಟರ್ಲಿಂಗ್

4. ಪೌಲ್ ಸ್ಟರ್ಲಿಂಗ್

ಐರ್ಲೆಂಡ್ ಕ್ರಿಕೆಟ್ ತಂಡದ ಅಪಾಯಕಾರಿ ಆಟಗಾರ ಪೌಲ್ ಸ್ಟರ್ಲಿಂಗ್ 107 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳ ಪೈಕಿ 106 ಇನ್ನಿಂಗ್ಸ್ ಆಡಿ 2894 ರನ್ ಬಾರಿಸಿದ್ದು, ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ ಟ್ವೆಂಟಿ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪೌಲ್ ಸ್ಟರ್ಲಿಂಗ್ ಈ ಮಾದರಿಯಲ್ಲಿ 1 ಶತಕ ಮತ್ತು 20 ಅರ್ಧಶತಕಗಳನ್ನು ಬಾರಿಸಿದ್ದಾರೆ.

3. ವಿರಾಟ್ ಕೊಹ್ಲಿ

3. ವಿರಾಟ್ ಕೊಹ್ಲಿ

99 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿ 91 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 3308 ರನ್ ದಾಖಲಿಸಿದ್ದು, ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ ಟ್ವೆಂಟಿ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಈ ಮಾದರಿಯಲ್ಲಿ ಒಟ್ಟು 30 ಅರ್ಧಶತಕಗಳನ್ನು ಬಾರಿಸಿದ್ದು, ಗಳಿಸಿರುವ ಗರಿಷ್ಠ ರನ್ ಅಜೇಯ 94.

2. ಮಾರ್ಟಿನ್ ಗಪ್ಟಿಲ್

2. ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ 116 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳ ಪೈಕಿ 112 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸುವ ಅವಕಾಶವನ್ನು ಪಡೆದಿದ್ದು, 3399 ರನ್ ಕಲೆಹಾಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ ಟ್ವೆಂಟಿ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ಮಾದರಿಯಲ್ಲಿ ಒಟ್ಟು 2 ಶತಕ ಮತ್ತು 20 ಅರ್ಧಶತಕಗಳನ್ನು ಬಾರಿಸಿರುವ ಗಪ್ಟಿಲ್ ಗರಿಷ್ಟ 105 ರನ್ ಕಲೆಹಾಕಿದ್ದಾರೆ.

DK ಆಟಕ್ಕೆ ಸುಸ್ತಾದ ವೆಸ್ಟ್ ಇಂಡೀಸ್: ಮೊದಲ T20 ಯಲ್ಲಿ ಟೀಮ್ ಇಂಡಿಯಾ ಜಯಭೇರಿ | OneIndia Kannada
1. ರೋಹಿತ್ ಶರ್ಮಾ

1. ರೋಹಿತ್ ಶರ್ಮಾ

129 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿ 121 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ರೋಹಿತ್ ಶರ್ಮಾ 3443 ರನ್ ಕಲೆಹಾಕಿ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಈ ಮಾದರಿಯಲ್ಲಿ 4 ಶತಕಗಳನ್ನು ಬಾರಿಸಿರುವ ರೋಹಿತ್ ಶರ್ಮಾ 25 ಅರ್ಧಶತಕಗಳನ್ನು ಬಾರಿಸಿದ್ದಾರೆ ಹಾಗೂ ರೋಹಿತ್ ಶರ್ಮಾ ಕಲೆಹಾಕಿರುವ ಗರಿಷ್ಠ ರನ್ 118.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, July 30, 2022, 18:53 [IST]
Other articles published on Jul 30, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X