|
ಎಬಿ ಡಿವಿಲಿಯರ್ಸ್ ಗುಣಗಾನ
ಆರ್‌ಸಿಬಿ ಪರ 40 ಎಸೆತಗಳಲ್ಲಿ 57 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪ ತಂದ ಎಬಿ ಡಿವಿಲಿಯರ್ಸ್ ಕುರಿತು ಟ್ವಿಟ್ಟಿಗರು ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ. ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿ ಪಂಜಾಬ್ ರನ್ ವೇಗಕ್ಕೆ ಕಡಿವಾಣ ಹಾಕಿದ ವೇಗದ ಬೌಲರ್ ಉಮೇಶ್ ಯಾದವ್ ಅವರಿಗೆಗೂ ಹೊಗಳಿಕೆ ವ್ಯಕ್ತವಾಗಿದೆ.
|
ಗೆಲುವಿನ ರನ್ ಹೊಡೆದ ತಮಿಳಿಗ
ಕೊನೆಯ ಓವರ್‌ನಲ್ಲಿ ಆರ್‌ಸಿಬಿಗೆ ಗೆಲ್ಲಲು ಐದು ರನ್ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗಟ್ಟಿದ ವಾಷಿಂಗ್ಟನ್ ಸುಂದರ್, ಸ್ಕೋರ್‌ಅನ್ನು ಸಮಬಲಗೊಳಿಸಿದರು. ಮೂರನೇ ಎಸೆತವನ್ನು ಮತ್ತೆ ಬೌಂಡರಿಗೆ ಅಟ್ಟಿ ಗೆಲುವಿನ ದಡ ಮುಟ್ಟಿಸಿದರು.
ಆರ್‌ಸಿಬಿ ತಂಡ ಗೆಲುವಿನ ರನ್‌ಅನ್ನು ಬಾರಿಸಿದ್ದು ತಮಿಳಿನ ಹುಡುಗ. ಇದು ಕ್ರೀಡೆಯ ವಿಶೇಷ. ಶೂಗಳನ್ನು ಎಸೆಯುವ ದುಷ್ಕರ್ಮಿಗಳು ಮತ್ತು ಕಿಡಿಗೇಡಿ ಮಕ್ಕಳು ಇದನ್ನು ಅರ್ಥಮಾಡಿಕೊಳ್ಳಲಾರರು ಎಂದು ದಿಲೀಪ್ ಪ್ರೇಮಚಂದ್ರನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ರಾಹುಲ್ ಆಟಕ್ಕೆ ಮನಸೋತರು
ಮೊದಲ ಪಂದ್ಯದಲ್ಲಿ ದಾಖಲೆಯ ಅರ್ಧ ಶತಕ ಗಳಿಸಿದ್ದ ಕೆ.ಎಲ್. ರಾಹುಲ್, ಆರ್‌ಸಿಬಿ ವಿರುದ್ಧವೂ ನಾಲ್ಕು ಸಿಕ್ಸರ್ ಸಿಡಿಸಿ ರಂಜಿಸಿದರು. ಆದರೆ ಈ ಬಾರಿ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ರಾಹುಲ್ ಅವರನ್ನು ಆರ್‌ಸಿಬಿ ತಂಡದಲ್ಲಿ ಉಳಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
|
ಅನುಷ್ಕಾ ಫೋಟೊ ಹಾವಳಿ
ಆರ್‌ಸಿಬಿ ತಂಡದ ಆಟಗಾರರಿಗಿಂತಲೂ ಅನುಷ್ಕಾ ಶರ್ಮಾ ಫೋಟೊಗಳೇ ಟ್ವಿಟರ್‌ನಲ್ಲಿ ಹೆಚ್ಚಾಗಿ ಹರಿದಾಡುತ್ತಿವೆ. ತಂಡಕ್ಕೆ ಹುರುಪು ತುಂಬುತ್ತಿರುವ ಅನುಷ್ಕಾರ ಉತ್ಸಾಹವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.
|
ಪಂದ್ಯ ನೋಡಿದ ಶಿವಣ್ಣ, ಅಂಬರೀಶ್
ಆರ್‌ಸಿಬಿಯ ರಾಯಭಾರಿಯಾಗಿರುವ ಶಿವರಾಜ್‌ಕುಮಾರ್ ನಿನ್ನೆ ನಡೆದ ಪಂದ್ಯ ವೀಕ್ಷಿಸಿದರು. ಅಂಬರೀಶ್ ಮತ್ತು ಸುಮಲತಾ ದಂಪತಿ ಸಹ ಪಂದ್ಯ ನೋಡಿ ಖುಷಿಪಟ್ಟರು.