ಗದ್ದಲದ ನಡುವೆಯೂ ಗೆದ್ದ ಚೆನ್ನೈ ಸೂಪರ್ ಆಟ: ಟ್ವಿಟ್ಟಿಗರ ಮೆಚ್ಚುಗೆ

Posted By:
twitterians hails chennai super kings batting

ಬೆಂಗಳೂರು, ಏಪ್ರಿಲ್ 11: ಚೆನ್ನೈನ ಚೆಪಾಕ್ ಅಂಗಳದಲ್ಲಿ ಇತ್ತ ಕಾವೇರಿ ನೀರಿಗಾಗಿ ಕಿಡಿ ಹೆಚ್ಚುತ್ತಿದ್ದರೆ, ಅತ್ತ ಬ್ಯಾಟ್ಸ್‌ಮನ್‌ಗಳು ರನ್ ಹೊಳೆ ಹರಿಸುತ್ತಿದ್ದರು. ಕೆಕೆಆರ್ ನೀಡಿದ ಬೃಹತ್ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್ ಉತ್ತಮ ಆರಂಭ ಪಡೆದರೂ ನಡುವೆ ರನ್ ರೇಟ್ ತುಸು ನಿಧಾನವಾಗಿದ್ದರಿಂದ ಸೋಲುವ ಭೀತಿ ಎದುರಿಸಿತ್ತು. ಅಂತಿಮವಾಗಿ ಡ್ವೇಯ್ನ್ ಬ್ರಾವೋ ಮತ್ತು ರವೀಂದ್ರ ಜಡೇಜಾ ತಂಡವನ್ನು ರೋಚಕವಾಗಿ ಗೆಲುವಿನ ದಡಕ್ಕೆ ಮುಟ್ಟಿಸಿದರು.

ಕೆಕೆಆರ್‌ನ ಆಂಡ್ರೆ ರಸೆಲ್ ಮತ್ತು ಚೆನ್ನೈನ ಸ್ಯಾಮ್ ಬಿಲ್ಲಿಂಗ್ಸ್, ಶೇನ್ ವಾಟ್ಸನ್, ಅಂಬಟಿ ರಾಯುಡು ಬ್ಯಾಟಿಂಗ್ ಅಬ್ಬರದ ಬಗ್ಗೆ ಟ್ವಿಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದರೆ, ಕೊನೆಯ ಓವರ್‌ನಲ್ಲಿ 17 ರನ್‌ಗಳನ್ನು ಎದುರಾಳಿಗಳಿಗೆ ಕೊಡುಗೆಯಾಗಿ ನೀಡಿದ ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್ ಅವರನ್ನು ಲೇವಡಿ ಮಾಡುವ ಟ್ವೀಟ್‌ಗಳನ್ನು ಹರಿಬಿಟ್ಟಿದ್ದಾರೆ.

ಸ್ಕೋರ್ ಕಾರ್ಡ್, ಗ್ರಾಫಿಕ್ಸ್, ಕಾಮೆಂಟ್ರಿ

ಮೂರು ವರ್ಷ ಕಾದಿದ್ದ ಪ್ರೇಕ್ಷಕರು

ಪಂದ್ಯದಲ್ಲಿ 400ಕ್ಕೂ ಅಧಿಕ ರನ್ ದಾಖಲಾಯಿತು. ಮೂರು ವರ್ಷ ಕಾದಿದ್ದ ಚೆನ್ನೈ ಪ್ರೇಕ್ಷಕರು ಇದಕ್ಕೆ ಅರ್ಹರಾಗಿದ್ದರು. ರಸೆಲ್ ಹೊಡೆತಗಳು ಅಮೋಘವಾಗಿದ್ದವು. ಆದರೆ, ಕೊನೆಯಲ್ಲಿ ಒತ್ತಡದ ನಡುವೆಯೂ ಸ್ಯಾಮ್ ಬಿಲ್ಲಿಂಗ್ಸ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಚೆನ್ನೈ ಎರಡೂ ಪಂದ್ಯಗಳನ್ನು ಸಂಕಷ್ಟದ ಸ್ಥಿತಿಯ ನಡುವೆಯೇ ಗೆದ್ದುಕೊಂಡಿದೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

ಸೂಪರ್ ಸ್ಯಾಮ್, ಕೆಕೆಆರ್ ವಿರುದ್ಧ ಚೆನ್ನೈಗೆ ಭರ್ಜರಿ ಜಯ

ಸೀಟಿನ ಅಂಚಿನಲ್ಲಿ ಕುಳಿತಿದ್ದೆ

ಎಂತಹ ತೀವ್ರತೆಯ ಪಂದ್ಯ! ಅದ್ಭುತ ರೋಮಾಂಚಕ. ನನ್ನನ್ನು ಸದಾ ಸೀಟಿನ ಅಂಚಿನಲ್ಲಿ ಕೂರುವಂತೆ ಮಾಡಿತು ಎಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಹೇಳಿದ್ದಾರೆ.

ವಿನಯ್ ಕುಮಾರ್ ಕಾಲೆಳೆದ ಟ್ವಿಟ್ಟಿಗರು
ಚೆನ್ನೈ ತಂಡದ ಬ್ಯಾಟ್ಸ್‌ಮನ್‌ಗಳು ಬಿರುಸಾದ ಬ್ಯಾಟಿಂಗ್ ನಡೆಸಿದರೂ ಕೊನೆಯ ಓವರ್‌ವರೆಗೂ ಪಂದ್ಯ ಕೆಕೆಆರ್ ಹಿಡಿತದಿಂದ ಕೈತಪ್ಪಿರಲಿಲ್ಲ. ಅಂತಿಮ ಓವರ್‌ನಲ್ಲಿ 17 ರನ್ ಬೇಕಿದ್ದಾಗ ನಾಯಕ ದಿನೇಶ್ ಕಾರ್ತಿಕ್, ತಂಡದ ಅನುಭವಿ ಬೌಲರ್ ವಿನಯ್ ಕುಮಾರ್ ಹೆಗಲಿಗೆ ಜವಾಬ್ದಾರಿ ವಹಿಸಿದ್ದರು.

ಮೊದಲ ಓವರ್‌ನಲ್ಲಿ 16 ರನ್ ನೀಡಿದ್ದ ವಿನಯ್ ಕುಮಾರ್, ಕೊನೆಯ ಓವರ್‌ನಲ್ಲಿ ಬ್ರಾವೋ ಮತ್ತು ಜಡೇಜಾರನ್ನು ಕಟ್ಟಿಹಾಕಲಿದ್ದಾರೆ ಎಂಬ ವಿಶ್ವಾಸ ಕೆಕೆಆರ್‌ನಲ್ಲಿತ್ತು. ಆದರೆ ಮೊದಲ ಎಸೆತವನ್ನೇ ನೋಬಾಲ್ ಹಾಕಿ ಸಿಕ್ಸರ್ ಹೊಡೆಸಿಕೊಂಡ ವಿನಯ್ ಕುಮಾರ್, ಚೆನ್ನೈ ತಂಡಕ್ಕೆ ಬೇಕಿದ್ದ ಗೆಲುವಿನ ರನ್‌ಗಳನ್ನು ಸುಲಭವಾಗಿ ಬಿಟ್ಟುಕೊಟ್ಟರು.

ಐಪಿಎಲ್ ವಿಶೇಷ ಪುಟ | ಚೆನ್ನೈ ವೇಳಾಪಟ್ಟಿ

ಟ್ವಿಟರ್‌ನಲ್ಲಿ ಚೆನ್ನೈ ತಂಡದ ಆಟಗಾರರ ಬ್ಯಾಟಿಂಗ್‌ಗಿಂತಲೂ ವಿನಯ್ ಕುಮಾರ್ ಬೌಲಿಂಗ್ ಬಗ್ಗೆ ಹೆಚ್ಚಿನ ಟ್ವೀಟ್‌ಗಳು ಹರಿದಾಡುತ್ತಿವೆ. ವಿನಯ್ ಕುಮಾರ್ ಅವರನ್ನು ಅಣಕವಾಡುವ ಟ್ವೀಟ್‌ಗಳು, ಮೀಮ್‌ಗಳನ್ನು ಮಾಡುತ್ತಿದ್ದಾರೆ.

ತಮಿಳುನಾಡಿಗೆ ನೀರು ಸಿಕ್ಕಿತು!

ಸಿಎಸ್‌ಕೆ ವಿನಯ್ ಕುಮಾರ್ ಅಳುವಂತೆ ಮಾಡಿತು. ಕೊನೆಗೂ ತಮಿಳುನಾಡಿಗೆ ಕರ್ನಾಟಕದಿಂದ ನೀರು ಸಿಕ್ಕಿತು ಎಂದು ಶ್ರೀಧರ್ ವಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪಂದ್ಯವನ್ನೇ 'ಸ್ವಿಂಗ್' ಮಾಡುತ್ತಾರೆ!

ವಿನಯ್ ಕುಮಾರ್, ಇಶಾಂತ್ ಶರ್ಮಾ, ವರುಣ್, ದಿಂಡಾರಂತಹ ಆಟಗಾರರು ಚೆಂಡನ್ನು ಸ್ವಿಂಗ್ ಮಾಡುವುದಿಲ್ಲ. ಬದಲಾಗಿ ತಮ್ಮ ಎದುರಾಳಿಗಳಿಗೆ ಅನುಕೂಲವಾಗುವಂತೆ ಇಡೀ ಪಂದ್ಯವನ್ನೇ ಸ್ವಿಂಗ್ ಮಾಡುತ್ತಾರೆ ಎಂದು @beingFlicked ಕಾಲೆಳೆದಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, April 11, 2018, 11:46 [IST]
Other articles published on Apr 11, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ