ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018: ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ವೇಳಾಪಟ್ಟಿ

By Manjunatha
Ipl 2018 csk full schedule of Chennai Super Kings

ಬೆಂಗಳೂರು, ಫೆಬ್ರವರಿ 15: ಎರಡು ವರ್ಷ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಿಂದಲೇ ಕಣಕ್ಕಿಳಿದಿದೆ. ಐಪಿಎಲ್ 2018ರ ತನ್ನ ಅಭಿಯಾನವನ್ನು ಏಪ್ರಿಲ್ 7ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸುವ ಮೂಲಕ ಪ್ರಾರಂಭ ಮಾಡಲಿದೆ.

ಎರಡು ಬಾರಿ ಚಾಂಪಿಯನ್ ಎನಿಸಿಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನ ಹಾಟ್ ಫೇವರೇಟ್ ತಂಡ ಎನಿಸಿಕೊಂಡಿದೆ. ಧೋನಿ ನಾಯಕತ್ವದ ಬಲ ಇರುವ ಚೆನ್ನೈಗೆ ಬ್ರಾವೊ, ರೈನಾ ಅವರಂತಹಾ ಅಂತರರಾಷ್ಟ್ರೀಯ ದರ್ಜೆಯ ಟಿ20 ಪ್ಲೇಯರ್‌ಗಳ ಬೆಂಬಲ ಇದೆ. ಈ ಬಾರಿ ಆಲ್‌ರೌಂಡರ್‌ಗಳನ್ನು ಮೆಚ್ಚಿಕೊಂಡಿರುವ ಸಿಎಸ್‌ಕೆ ಆರ್.ಅಶ್ವಿನ್‌ ಅವರನ್ನು ತಂಡದಿಂದ ಬಿಟ್ಟುಕೊಟ್ಟಿದೆ.

ಎರಡು ಐಪಿಎಲ್‌ನಿಂದ ಹೊರಗುಳಿದಿದ್ದ ಚೆನ್ನೈ ಈ ಬಾರಿ ಅಭಿಮಾನಿಗಳ ಮನಗೆಲ್ಲಲು ತಮ್ಮೆಲ್ಲಾ ಶ್ರಮ ಹಾಕಿ ಆಡುತ್ತಾರೆಂಬ ವಿಶ್ವಾಸವಿದೆ. 11ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ.

ಈ ಆವೃತಿಯಲ್ಲಿ ಪಂದ್ಯಗಳ ಪ್ರಾರಂಭ ಸಮಯವನ್ನು ಬದಲಾಯಿಸಲಾಗಿದ್ದು, ಪಂದ್ಯಗಳು ಸಂಜೆ 4 ಮತ್ತು 8 ಕ್ಕೆ ಪ್ರಾರಂಭ ಆಗಲಿವೆ. ಟಿವಿಗಳ ಬೇಡಿಕೆ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ. ಚೆನ್ನೈ ತಂಡದ ಪಂದ್ಯದ ವಿವರಗಳು ಇಂತಿವೆ...

IPL-2018: ಚೆನ್ನೈ ಸೂಪರ್ ಕಿಂಗ್ಸ್‌ (CSK)Away ಪಂದ್ಯಗಳ ವೇಳಾಪಟ್ಟಿ

ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಏಪ್ರಿಲ್ 7, ಶನಿವಾರ (8.00)
vs ಮುಂಬೈ ಇಂಡಿಯನ್ಸ್‌
ಮುಂಬೈ
ಏಪ್ರಿಲ್ 15, ಭಾನುವಾರ (8.00) ಕಿಂಗ್ಸ್‌ ಎಲೆವನ್ ಪಂಜಾಬ್‌
ಇಂಧೋರ್
ಏಪ್ರಿಲ್ 22, ಭಾನುವಾರ (4.00)
ಸನ್‌ ರೈಸಸ್ ಹೈದರಾಬಾದ್
ಹೈದರಾಬಾದ್
ಏಪ್ರಿಲ್ 25, ಬುಧವಾರ (8.00)
ಆರ್‌ಸಿಬಿ, (ಬೆಂಗಳೂರು)
ಬೆಂಗಳೂರು
ಮೇ 3, ಗುರುವಾರ (8.00)
ಕೊಲ್ಕತ್ತ ನೈಟ್ ರೈಡರ್ಸ್‌
ಕೊಲ್ಕತ್ತಾ
ಮೇ 11, ಶುಕ್ರವಾರ (8.00)
ರಾಜಸ್ಥಾನ ರಾಯಲ್ಸ್‌
ಜೈಪುರ
ಮೇ 18, ಶುಕ್ರವಾರ (8.00)
ಡೆಲ್ಲಿ ಡೇರ್‌ಡೆವಿಲ್ಸ್‌
ದೆಹಲಿ
IPL-2018: ಚೆನ್ನೈ ಸೂಪರ್ ಕಿಂಗ್ಸ್‌ (CSK)Home ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಏಪ್ರಿಲ್ 10, ಮಂಗಳವಾರ (8.00) ಕೊಲ್ಕತ್ತ ನೈಟ್ ರೈಡರ್ಸ್ ಚೆನ್ನೈ
ಏಪ್ರಿಲ್ 20, ಶುಕ್ರವಾರ (8.00) ರಾಜಸ್ಥಾನ ರಾಯಲ್ಸ್‌ ಚೆನ್ನೈ
ಏಪ್ರಿಲ್ 28, ಶನಿವಾರ (8.00) ಮುಂಬೈ ಇಂಡಿಯನ್ಸ್‌ ಚೆನ್ನೈ
ಏಪ್ರಿಲ್ 30, ಸೋಮವಾರ (8.00) ಡೆಲ್ಲಿ ಡೇರ್‌ಡೆವಿಲ್ಸ್‌ ಚೆನ್ನೈ
ಮೇ 5, ಶನಿವಾರ (4.00) ಆರ್‌ಸಿಬಿ (ಬೆಂಗಳೂರು) ಚೆನ್ನೈ
ಮೇ 13, ಭಾನುವಾರ (4.00) ಸನ್‌ ರೈಸಸ್ ಹೈದರಾಬಾದ್ ಚೆನ್ನೈ
ಮೇ 20, ಭಾನುವಾರ (8.00) ಕಿಂಗ್ಸ್‌ ಇಲೆವನ್ ಪಂಜಾಬ್‌ ಚೆನ್ನೈ

Story first published: Thursday, February 15, 2018, 17:33 [IST]
Other articles published on Feb 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X