Ind Vs Nz: ಸೂರ್ಯಕುಮಾರ್ ಅಮೋಘ ಶತಕದ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?

ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಾನೇಕೆ ವಿಶ್ವದ ನಂಬರ್ 1 ಬ್ಯಾಟರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯ ಅಬ್ಬರಿಸಿದರು.

ಇಡೀ ತಂಡವೇ ಒಂದು ಕಡೆ ರನ್ ಗಳಿಸಲು ಪರದಾಡುವಾಗ ಸೂರ್ಯಕುಮಾರ್ ಯಾದವ್ ಮಾತ್ರ ಆರಾಮವಾಗಿ ರನ್ ಗಳಿಸಿದರು. ನ್ಯೂಜಿಲೆಂಡ್ ಬೌಲರ್ ಗಳನ್ನು ಕೊನೆಯವರೆಗೂ ಕಾಡಿದ ಸೂರ್ಯ ಎಲ್ಲಾ ಬೌಲರ್ ಗಳ ವಿರುದ್ಧವೂ ಬೌಂಡರಿ ಗಳಿಸಿದರು.

ಅವರ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್ ಗಳಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ಸೂರ್ಯಕುಮಾರ್ 51 ಎಸೆತಗಳಲ್ಲಿ 111 ರನ್ ಗಳಿಸಿದರೆ, ಉಳಿದ ಆಟಗಾರರು 69 ಎಸೆತಗಳಲ್ಲಿ ಒಟ್ಟಾರೆ 68 ರನ್ ಗಳಿಸಿದರು. 11 ಇತರೆ ರನ್‌ಗಳು ಬಂದವು.

ಆತ ವಿರಾಟ್ ಕೊಹ್ಲಿ ಕ್ರಿಕೆಟ್ ಭವಿಷ್ಯವನ್ನೇ ಹಾಳು ಮಾಡಲು ಯತ್ನಿಸಿದ್ದ! ಪಾಕ್ ಮಾಜಿ ಆಟಗಾರ ಗಂಭೀರ ಆರೋಪಆತ ವಿರಾಟ್ ಕೊಹ್ಲಿ ಕ್ರಿಕೆಟ್ ಭವಿಷ್ಯವನ್ನೇ ಹಾಳು ಮಾಡಲು ಯತ್ನಿಸಿದ್ದ! ಪಾಕ್ ಮಾಜಿ ಆಟಗಾರ ಗಂಭೀರ ಆರೋಪ

ನಂತರ ಭಾರತ ಅತ್ಯುತ್ತಮ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡವನ್ನು 18.5 ಓವರ್ ಗಳಲ್ಲಿ 126 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ 65 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಕೊಹ್ಲಿ ಮಾಡಿದ ಟ್ವೀಟ್ ವೈರಲ್

ಸೂರ್ಯಕುಮಾರ್ ಯಾದವ್ ಆಟದ ಬಗ್ಗೆ ಈಗ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ತಮ್ಮ ಸಹ ಆಟಗಾರನ ಬ್ಯಾಟಿಂಗ್ ಅನ್ನು ಮನಸಾರೆ ಶ್ಲಾಘಿಸಿದ್ದಾರೆ. ಸೂರ್ಯಕುಮಾರ್ ಶತಕ ಗಳಿಸಿದ ಬಗ್ಗೆ ಟ್ವೀಟ್ ಮಾಡಿದ್ದು, ಈಗ ವೈರಲ್ ಆಗಿದೆ.

"ನಂಬರ್ ಒನ್ ಬ್ಯಾಟರ್, ಅವರು ಏಕೆ ವಿಶ್ವದ ಅತ್ಯುತ್ತಮ ಬ್ಯಾಟರ್ ಎಂದು ಮತ್ತೊಮ್ಮೆ ತೋರಿಸಿದ್ದಾರೆ. ಪಂದ್ಯವನ್ನು ಲೈವ್ ಆಗಿ ವೀಕ್ಷಿಸಲಿಲ್ಲ, ಆದರೆ, ಇದು ಅವರ ಮತ್ತೊಂದು ವಿಡಿಯೋ ಗೇಮ್ ಇನ್ನಿಂಗ್ಸ್ ಎಂದು ನನಗೆ ಖಾತ್ರಿಯಿದೆ." ಎಂದು ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಟ್ವೀಟ್ ಮಾಡುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ವೈರಲ್ ಆಯಿತು. ಈಗಾಗಲೇ ಈ ಟ್ವೀಟ್ 1.80 ಸಾವಿರ ಲೈಕ್ ಗಿಟ್ಟಿಸಿಕೊಂಡಿದೆ, 17.2 ಸಾವಿರ ಜನ ರಿಟ್ವೀಟ್ ಆಗಿದೆ. ವಿರಾಟ್ ಕೊಹ್ಲಿ ಮೆಚ್ಚುಗೆಯ ಟ್ವೀಟ್‌ಗೆ ಸೂರ್ಯಕುಮಾರ್ ಯಾದವ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವಕಪ್‌ನಲ್ಲಿ ಆರ್ಭಟಿಸಿದ್ದ ಸೂರ್ಯ-ವಿರಾಟ್

ವಿಶ್ವಕಪ್‌ನಲ್ಲಿ ಆರ್ಭಟಿಸಿದ್ದ ಸೂರ್ಯ-ವಿರಾಟ್

ಟಿ20 ವಿಶ್ವಕಪ್‌ 2022ರಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಆರಂಭಿಕ ಜೋಡಿಯ ಸತತ ವೈಫಲ್ಯದ ನಡುವೆ ಇವರಿಬ್ಬರೇ ಭಾರತ ತಂಡಕ್ಕೆ ಆಸರೆಯಾಗಿದ್ದರು.

2022ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅಗ್ರ ರನ್‌ ಸ್ಕೋರರ್ ಆಗಿದ್ದು, ಸೂರ್ಯಕುಮಾರ್ ಯಾದವ್ 3ನೇ ಅಗ್ರ ರನ್ ಸ್ಕೋರರ್ ಆಗಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದರೆ, ಸೂರ್ಯಕುಮಾರ್ ಯಾದವ್ ಮಾತ್ರ ತಮ್ಮ ಅದ್ಭುತ ಫಾರ್ಮ್‌ ಅನ್ನು ಮುಂದುವರೆಸಿದ್ದಾರೆ.

ತಮ್ಮ ಇನ್ನಿಂಗ್ಸ್ ಬಗ್ಗೆ ಸೂರ್ಯಕುಮಾರ್ ಹೇಳಿದ್ದು

ತಮ್ಮ ಇನ್ನಿಂಗ್ಸ್ ಬಗ್ಗೆ ಸೂರ್ಯಕುಮಾರ್ ಹೇಳಿದ್ದು

ಪಂದ್ಯ ಮುಕ್ತಾಯದ ಬಳಿಕ ಸೂರ್ಯಕುಮಾರ್ ಯಾದವ್ ತಮ್ಮ ಶತಕದ ಬಗ್ಗೆ ಮಾತನಾಡಿದರು. "ಟಿ20 ಮಾದರಿಯಲ್ಲಿ ಶತಕ ಗಳಿಸುವುದು ಯಾವಾಗಲೂ ವಿಶೇಷವಾಗಿರುತ್ತದೆ. ನಾನು ಕೊನೆಯವರೆಗೂ ಬ್ಯಾಟಿಂಗ್ ಮಾಡುವುದು ಮುಖ್ಯವಾಗಿತ್ತು. ಹಾರ್ದಿಕ್ ಪಾಂಡ್ಯ ನನಗೆ 18 ಅಥವಾ 19ನೇ ಓವರ್ ವರೆಗೆ ಬ್ಯಾಟಿಂಗ್ ಮಾಡಬೇಕು ಎಂದು ಹೇಳುತ್ತಿದ್ದರು, 185 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸುವುದು ನಮ್ಮ ಉದ್ದೇಶವಾಗಿತ್ತು" ಎಂದು ಹೇಳಿದರು.

16ನೇ ಓವರ್ ನಂತರ ನಾವು ಕೊನೆಯವರೆಗೂ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆವು. ಕೊನೆಯ ಕೆಲವು ಓವರ್ ಗಳಲ್ಲಿ ಹೆಚ್ಚಿನ ರನ್ ಗಳಿಸುವುದು ನಮ್ಮ ಉದ್ದೇಶವಾಗಿತ್ತು. ಇದನ್ನೇ ನಾನು ಹಾರ್ದಿಕ್ ಚರ್ಚಿಸಿದ್ದು, ಅದನ್ನು ಜಾರಿಗೆ ತಂದೆವು ಎಂದು ಹೇಳಿದರು.

For Quick Alerts
ALLOW NOTIFICATIONS
For Daily Alerts
Story first published: Sunday, November 20, 2022, 19:15 [IST]
Other articles published on Nov 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X