ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ವಿಂಡೀಸ್‌ ಅಬ್ಬರಕ್ಕೆ ಬೆಚ್ಚಿದ ಪಾಕ್‌ಗೆ ಹೀನಾಯ ಸೋಲು

West Indies vs Pakistan, Match 2-Live Cricket Score

ನಾಟಿಂಗ್‌ಹ್ಯಾಮ್‌, ಮೇ 31: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯ 2ನೇ ಲೀಗ್ ಪಂದ್ಯದಲ್ಲಿ ಅಬ್ಬರಿಸಿದ ವೆಸ್ಟ್‌ ಇಂಡೀಸ್‌ ತಂಡ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದು ಶುಭಾರಂಭ ಮಾಡಿದೆ.

ವೆಸ್ಟ್ ಇಂಡೀಸ್ vs ಪಾಕಿಸ್ತಾನ, ಮೇ 31, ವಿಶ್ವಕಪ್ Live ಸ್ಕೋರ್‌ಕಾರ್ಡ್

1
43645

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ಎಚ್ಚರಿಕೆಯ ಆಟವಾಡಲು ಮುಂದಾಯಿತಾದರೂ ವಿಂಡೀಸ್‌ ಬೌಲರ್‌ಗಳ ಅಬ್ಬರಕ್ಕೆ ಸಂಪೂರ್ಣ ಶರಣಾಗಿ 21.3 ಓವರ್‌ಗಳಲ್ಲಿ 105 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು.

ವಿಶ್ವಕಪ್‌: ನ್ಯೂಜಿಲೆಂಡ್‌ v/s ಶ್ರೀಲಂಕಾ ಫೈಟ್‌ನಲ್ಲಿ ಗೆಲ್ಲೋರು ಯಾರು?ವಿಶ್ವಕಪ್‌: ನ್ಯೂಜಿಲೆಂಡ್‌ v/s ಶ್ರೀಲಂಕಾ ಫೈಟ್‌ನಲ್ಲಿ ಗೆಲ್ಲೋರು ಯಾರು?

ಪಾಕ್‌ ಪರ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಫಖರ್‌ ಝಮಾನ್‌ ಮತ್ತು ಬಾಬರ್‌ ಅಝಾಮ್‌ ತಲಾ 22 ರನ್‌ಗಳನ್ನು ಗಳಿಸಿದ್ದನ್ನು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನಿಲ್ಲುವ ಗೋಜಿಗೆ ಬೀಳದೆ ಪೆವಿಲಿಯನ್‌ ಪರೇಡ್‌ ನಡೆಸಿದರು.

ವಿಂಡೀಸ್‌ ಪರ ಜಬರ್ದಸ್ತ್‌ ಬೌಲಿಂಗ್‌ ಸಂಘಟಿಸಿದ ವೇಗಿಗಳಾದ ಒಶೇನ್‌ ಥಾಮಸ್‌ 27ಕ್ಕೆ 4 ಮತ್ತು ಜೇಸನ್‌ ಹೋಲ್ಡರ್‌ 42ಕ್ಕೆ 3 ವಿಕೆಟ್‌ ಪಡೆದು ಪಾಕ್‌ ಪಡೆಯ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು. ಅವರಿಗೆ ಶೆಲ್ಡನ್‌ ಕಾಟ್ರೆಲ್‌ (18ಕ್ಕೆ 1) ಮತ್ತು ಆಂಡ್ರೆ ರಸೆಲ್‌ (4ಕ್ಕೆ 2) ಉತ್ತಮ ಸಾಥ್‌ ನೀಡಿದರು.

ವಿಶ್ವಕಪ್ 2019: ವಿಂಡೀಸ್ ವಿರುದ್ಧ ಅನಗತ್ಯ ದಾಖಲೆ ಬರೆದ ಪಾಕಿಸ್ತಾನವಿಶ್ವಕಪ್ 2019: ವಿಂಡೀಸ್ ವಿರುದ್ಧ ಅನಗತ್ಯ ದಾಖಲೆ ಬರೆದ ಪಾಕಿಸ್ತಾನ

ಬಳಿಕ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ 13.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 108 ರನ್‌ಗಳನ್ನು ಚಚ್ಚಿ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ 'ದಿ ಯೂನಿವರ್ಸ್‌ ಬಾಸ್‌' ಕ್ರಿಸ್‌ ಗೇಲ್‌ 34 ಎಸೆತಗಳಲ್ಲಿ 6 ಫೋರ್‌ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 50 ರನ್‌ಗಳನ್ನು ಸಿಡಿಸಿ ತಂಡದ ಗೆಲುವಿನ ಹಾದಿಯನ್ನು ಸುಲಭವನ್ನಾಗಿಸಿದರು.

ಪಾಕ್‌ ತಂಡದ ಪರ ಗಾಯದ ಸಮಸ್ಯೆ ನಡುವೆಯೂ ಭರ್ಜರಿ ಬೌಲಿಂಗ್‌ ಸಂಘಟಿಸಿದ ಮೊಹಮ್ಮದ್‌ ಆಮಿರ್‌ 26ಕ್ಕೆ 3 ವಿಕೆಟ್‌ ಪಡೆದು ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್‌

ಪಾಕಿಸ್ತಾನ: 21.3 ಓವರ್‌ಗಳಲ್ಲಿ 150/10 (ಫಖರ್‌ ಝಮಾನ್‌ 22, ಬಾಬರ್‌ ಅಝಾಮ್‌ 22, ಮೊಹಮ್ಮದ್‌ ಹಫೀಜ್‌ 16, ವಹಾಬ್‌ ರಿಯಾಝ್‌ 18; ಒಶೇನ್‌ ಥಾಮಸ್‌ 27ಕ್ಕೆ 4, ಜೇಸನ್‌ ಹೋಲ್ಡರ್‌ 42ಕ್ಕೆ 3, ಆಂಡ್ರೆ ರಸೆಲ್‌ 4ಕ್ಕೆ 2).

ವೆಸ್ಟ್‌ ಇಂಡೀಸ್‌:13.4 ಓವರ್‌ಗಳಲ್ಲಿ 108/3 (ಕ್ರಿಸ್‌ ಗೇಯ್ಲ್‌ 50, ಶೇಯ್‌ ಹೋಪ್‌ 11, ನಿಕೊಲಾಸ್‌ ಪೂರನ್‌ ಅಜೇಯ 34, ಶಿಮ್ರಾನ್‌ ಹೆಟ್ಮಾಯೆರ್‌ ಅಜೇಯ 7; ಮೊಹಮ್ಮದ್‌ ಆಮಿರ್‌ 33ಕ್ಕೆ 3).

ವೆಸ್ಟ್ ಇಂಡೀಸ್ ಪ್ಲೇಯಿಂಗ್‌ 11: ಕ್ರಿಸ್ ಗೇಲ್, ಶೇಯ್ ಹೋಪ್, ಡರೆನ್‌ ಬ್ರಾವೋ, ಶಿಮ್ರಾನ್ ಹೆಟ್ಮಾಯೆರ್‌, ನಿಕೋಲಸ್ ಪೂರನ್ (ವಿಕೀ), ಆ್ಯಂಡ್ರೆ ರಸೆಲ್, ಜೇಸನ್ ಹೋಲ್ಡರ್ (ನಾಯಕ), ಕಾರ್ಲೋಸ್ ಬ್ರಾತ್‌ವೇಟ್‌, ಆ್ಯಷ್ಲೆ ನರ್ಸ್, ಶೆಲ್ಡನ್ ಕಾಟ್ರೆಲ್, ಒಶೇನ್ ಥಾಮಸ್.

ಪಾಕಿಸ್ತಾನ ಪ್ಲೇಯಿಂಗ್‌ 11: ಇಮಾಮ್ ಉಲ್ ಹಕ್, ಫಖರ್ ಝಮಾನ್, ಬಾಬರ್ ಅಝಾಮ್, ಹ್ಯಾರಿಸ್ ಸೊಹೇಲ್, ಮೊಹಮ್ಮದ್ ಹಫೀಜ್, ಸರ್ಫರಾಝ್‌ ಅಹ್ಮದ್ (ನಾಯಕ/ವಿಕೀ), ಇಮಾದ್ ವಾಸಿಮ್, ಶದಾಬ್ ಖಾನ್, ಹಸನ್ ಅಲಿ, ವಹಾಬ್ ರಿಯಾಝ್‌, ಮೊಹಮ್ಮದ್ ಆಮಿರ್‌.

Story first published: Friday, May 31, 2019, 18:49 [IST]
Other articles published on May 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X