ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಜಗತ್ತಿನಲ್ಲಿ ಆಗಸ್ಟ್ 30ರಂದು ನಡೆದದ್ದೇನು?

What happened in the cricket world on august 30
ಪಂತ್ ಗೆ ಬುದ್ದಿ ಹೇಳಿದ ಪಾಕ್ ಆಟಗಾರ | Oneindia Kannada

ಆಗಸ್ಟ್ 30, ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಘಟನೆಗಳು ನಡೆದಿದ್ದು, ಒಂದೆಡೆ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಾಷಿಂಗ್ಟನ್ ಸುಂದರ್ ಹೊರಗುಳಿಯಲಿಯದ್ದರೆ, ಮತ್ತೊಂದೆಡೆ ರಿಷಭ್ ಪಂತ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೀಗೆ ಆಗಸ್ಟ್ 30 ರ ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ಹಲವಾರು ಪ್ರಮುಖ ಘಟನೆಗಳ ಕಿರು ನೋಟ ಈ ಕೆಳಕಂಡಂತಿದೆ ನೋಡಿ..

* ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆಟಗಾರನೋರ್ವನ ಕ್ಯಾಚ್ ಪಡೆದ ವಿರಾಟ್ ಕೊಹ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪರಸ್ಪರ ಎದುರಾದಾಗ ರೋಹಿತ್ ಶರ್ಮಾ ಮುಖದಲ್ಲಿ ಹೆಚ್ಚಿನ ನಗುವೇನೂ ಇರಲಿಲ್ಲ, ವಿರಾಟ್ ಕೊಹ್ಲಿ ಜೊತೆ ಸರಿಯಾಗಿ ಸಂಭ್ರಮಾಚರಣೆಯಲ್ಲಿಯೂ ರೋಹಿತ್ ಶರ್ಮಾ ಪಾಲ್ಗೊಳ್ಳಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಬಿರುಕು ಮೂಡಿದೆ ಎಂಬ ಬರಹದೊಂದಿಗೆ ಆ ವಿಡಿಯೋ ತುಣುಕು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸತತ ಕಳಪೆ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ; ಆ ಒಬ್ಬ ಆಟಗಾರನನ್ನು ನಂಬಿ ಬೆನ್ನಿಗೆ ನಿಂತ ಕೊಹ್ಲಿಸತತ ಕಳಪೆ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ; ಆ ಒಬ್ಬ ಆಟಗಾರನನ್ನು ನಂಬಿ ಬೆನ್ನಿಗೆ ನಿಂತ ಕೊಹ್ಲಿ

* ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖಾಯಂ ನಾಯಕ ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆಗೆ ಒಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ತಾತ್ಕಾಲಿಕ ನಾಯಕತ್ವವನ್ನು ರಿಷಭ್ ಪಂತ್ ಹೆಗಲಿಗೆ ಹಾಕಲಾಗಿತ್ತು. ಇದೀಗ ಗಾಯದ ಸಮಸ್ಯೆಯಿಂದ ತುಸು ಚೇತರಿಕೆ ಕಂಡಿರುವ ಶ್ರೇಯಸ್ ಐಯ್ಯರ್ ಮುಂದುವರಿದಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ ಯುಎಇಯಲ್ಲಿ ಮುಂದುವರಿಯಲಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಸಂಪೂರ್ಣವಾಗಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

* ಭಾರತ ಮತ್ತು ಇಂಗ್ಲೆಂಡ್ ನಡುವೆ ಸೆಪ್ಟೆಂಬರ್‌ 2 ರಂದು ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಶುಬ್ಮನ್ ಗಿಲ್ ಕಣಕ್ಕಿಳಿಯಬೇಕು ಮತ್ತು ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಅಭಿಪ್ರಾಯಪಟ್ಟಿದ್ದಾರೆ.

* ಭಾರತದ ಆಲ್ ರೌಂಡರ್ ಆಟಗಾರ ಸ್ಟುವರ್ಟ್ ಬಿನ್ನಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ. ಮೂಲತಃ ಬೆಂಗಳೂರಿನವರಾದ ಸ್ಟುವರ್ಟ್ ಬಿನ್ನಿ ಭಾನುವಾರದಂದು ವಿಶೇಷ ಪತ್ರದ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಪತ್ರದ ಮೂಲಕ ತಮಗೆ ಅವಕಾಶ ನೀಡಿದ ಬಿಸಿಸಿಐ, ಕರ್ನಾಟಕ ಕ್ರಿಕೆಟ್‌ ಬೋರ್ಡ್, ಐಪಿಎಲ್ ಫ್ರಾಂಚೈಸಿಗಳಾದ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಹಾಗೂ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಸ್ಟುವರ್ಟ್ ಬಿನ್ನಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಸತತ ಕಳಪೆ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ; ಆ ಒಬ್ಬ ಆಟಗಾರನನ್ನು ನಂಬಿ ಬೆನ್ನಿಗೆ ನಿಂತ ಕೊಹ್ಲಿಸತತ ಕಳಪೆ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ; ಆ ಒಬ್ಬ ಆಟಗಾರನನ್ನು ನಂಬಿ ಬೆನ್ನಿಗೆ ನಿಂತ ಕೊಹ್ಲಿ

* ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದ ವಾಷಿಂಗ್ಟನ್ ಸುಂದರ್ ಸರಣಿ ಆರಂಭಕ್ಕೂ ಮುನ್ನವೇ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಇಂಗ್ಲೆಂಡ್‌ನಿಂದ ಭಾರತಕ್ಕೆ ವಾಪಸ್ಸಾಗಿದ್ದ ವಾಷಿಂಗ್ಟನ್ ಸುಂದರ್ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಭಾಗವಹಿಸುವುದು ಅಸಾಧ್ಯವಾಗಿದೆ. ವಾಷಿಂಗ್ಟನ್ ಸುಂದರ್ ಟೂರ್ನಿಯಿಂದ ಹೊರಬಿದ್ದ ಕಾರಣ ಆ ಸ್ಥಾನಕ್ಕೆ ಬಂಗಾಳದ ಕ್ರಿಕೆಟರ್ ಆಕಾಶ್ ದೀಪ್ ಆಯ್ಕೆಯಾಗಿದ್ದಾರೆ.

Story first published: Monday, August 30, 2021, 21:00 [IST]
Other articles published on Aug 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X