ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಬೌಲರ್‌ಗಳ ಪರಾಕ್ರಮ, ಆಫ್ಘನ್‌ ವಿರುದ್ಧ ಲಂಕಾಗೆ ಜಯ

World Cup 2019 LIVE: Sri Lanka vs Afghanistan Match-7

ಕಾರ್ಡಿಫ್‌, ಜೂನ್‌ 04: ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರೂ ಬೌಲರ್‌ಗಳ ಭರ್ಜರಿ ಪ್ರದರ್ಶನದಿಂದ ಮಿಂಚಿದ ಮಾಜಿ ಚಾಂಪಿಯನ್ಸ್‌ ಶ್ರೀಲಂಕಾ ತಂಡ, ಸೋಲಿನ ದವಡೆಯಿಂದ ಪಾರಾಗಿ ಅಪಾಯಕಾರಿ ಅಫಘಾನಿಸ್ತಾನ ವಿರುದ್ಧ ಡಕ್ವರ್ತ್ ಲೂಯಿಸ್‌ ನಿಯಮದನ್ವಯ 34 ರನ್‌ಗಳ ಜಯ ದಾಖಲಿಸಿತು.

ವಿಶ್ವಕಪ್‌: ಶ್ರೀಲಂಕಾ vs ಅಫಘಾನಿಸ್ತಾನ ಲೈವ್‌ ಸ್ಕೋರ್‌ ಕಾರ್ಡ್‌

1
43650

ಇಲ್ಲಿನ ಸೋಫಿಯಾ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ತಿಸಾರ ಪೆರೆರಾ ಮತ್ತು ಕುಶಲ್‌ ಪೆರೆರಾ ನಡುವಣ ಮುರಿಯದ ಅಧರ್ಶತಕದ ಜೊತೆಯಾಟದೊಂದಿಗೆ ಭರ್ಜರಿ ಆರಂಭ ಪಡೆದರೂ, ಬಳಿಕ ಹಠಾತ್‌ ಕುಸಿದು 36.1 ಓವರ್‌ಗಳಲ್ಲಿ 201ಕ್ಕೆ ಆಲ್‌ಔಟ್‌ ಆಯಿತು.

ಮಳೆಯಿಂದಾಗಿ ಪಂದ್ಯಕ್ಕೆ ಕೆಲ ಕಾಲ ಅಡಚಣೆಯಾದ್ದರಿಂದ 50 ಓವರ್‌ಗಳ ಬದಲಾಗಿ 41 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ಚಾಂಪಿಯನ್ಸ್‌ ಟ್ರೋಫಿ ಸೋಲಿನಿಂದ ಕೊಹ್ಲಿ ಪಡೆ ಕಲಿತ ಪಾಠವೇನು ಗೊತ್ತಾ?ಚಾಂಪಿಯನ್ಸ್‌ ಟ್ರೋಫಿ ಸೋಲಿನಿಂದ ಕೊಹ್ಲಿ ಪಡೆ ಕಲಿತ ಪಾಠವೇನು ಗೊತ್ತಾ?

ಬಳಿಕ ಗುರಿ ಬೆನ್ನತ್ತಿದ ಅಫಘಾನಿಸ್ತಾನ 57ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತಾದರೂ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಹೋರಾಟದ ಫಲವಾಗಿ 32.4 ಓವರ್‌ಗಳಲ್ಲಿ 152 ರನ್‌ಗಳನ್ನು ಗಳಿಸಿತು. ಲಂಕಾ ಪರ ಮಿಂಚಿದ ನುವಾನ್‌ ಪ್ರದೀಪ್‌ 31ಕ್ಕೆ 4 ವಿಕೆಟ್‌ ಪಡೆದು ಜಯದ ರೂವಾರಿಯಾದರೆ, ನಿಣರ್ಣಾಯಕ ಘಟ್ದಲ್ಲಿ ತಮ್ಮ ಯಾರ್ಕರ್‌ ಅಸ್ತ್ರ ಬಳಕೆ ಮಾಡಿದ ಲಸಿತ್‌ ಮಾಲಿಂಗ 39ಕ್ಕೆ 3 ವಿಕೆಟ್‌ ಉರುಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ವಿಶ್ವಕಪ್‌: ಪಾಕ್‌ ವಿರುದ್ಧ ಇಂಗ್ಲೆಂಡ್‌ ಸೋಲಿಗೆ ಇದೊಂದೇ ಕಾರಣವಂತೆ!ವಿಶ್ವಕಪ್‌: ಪಾಕ್‌ ವಿರುದ್ಧ ಇಂಗ್ಲೆಂಡ್‌ ಸೋಲಿಗೆ ಇದೊಂದೇ ಕಾರಣವಂತೆ!

ಇದಕ್ಕೂ ಮುಜನ್ನ ಅನುಭವಿ ಸ್ಪಿನ್ನರ್‌ ಮೊಹಮ್ಮದ್‌ ನಬಿ (30ಕ್ಕೆ 4) ಓವರ್‌ ಒಂದರಲ್ಲೇ ಮೂರು ವಿಕೆಟ್‌ ಪಡೆದು ಲಂಕಾ ಪಡೆಯ ಬ್ಯಾಟಿಂಗ್‌ ಸಾಮರ್ಥ್ಯವನ್ನು ಬುಡಮೇಲು ಮಾಡಿಬಿಟ್ಟರು. ಇದರೊಂದಿಗೆ ಶ್ರೀಲಂಕಾ ಸತತ ಎರಡನೇ ಸೋಲಿನ ಆತಂಕಕ್ಕೆ ಸಿಲುಕಿದೆ.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 36.4 ಓವರ್‌ಗಳಲ್ಲಿ 201/10 (ದಿಮುತ್‌ ಕರುಣಾರತ್ನೆ 30, ಕುಶಲ್‌ ಪೆರೆರಾ 78, ಲಾಹಿರು ತಿರಿಮನ್ನೆ 25; ಮೊಹಮ್ಮದ್‌ ನಬಿ 30ಕ್ಕೆ 4, ದವ್ಲತ್‌ ಝದ್ರಾನ್‌ 34ಕ್ಕೆ 2, ರಶೀದ್‌ ಖಾನ್‌ 17ಕ್ಕೆ 2).

ಅಫಘಾನಿಸ್ತಾನ: 32.4 ಓವರ್‌ಗಳಲ್ಲಿ 152/10 (ಹಝರ್ತುಲ್ಲಾ ಝಝಾಯ್‌ 30, ಗುಲ್ಬದಿನ್‌ ನೈಬ್‌ 23, ನಜಿಬುಲ್ಲಾ ಝದ್ರಾನ್‌ 43; ನುವಾನ್‌ ಪ್ರದೀಪ್‌ 31ಕ್ಕೆ 4, ಲಸಿತ್‌ ಮಾಲಿಂಗ 39ಕ್ಕೆ 3).

ತಂಡಗಳ ವಿವರ

ಅಫ್ಘಾನಿಸ್ತಾನ ಪ್ಲೇಯಿಂಗ್‌ 11 : ಮೊಹಮ್ಮದ್ ಶಹಝಾದ್ (ವಿಕೀ), ಹಝರತುಲ್ಲಾ ಝಝಾಯಿ, ರೆಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್ (ನಾಯಕ), ನಜೀಬುಲ್ಲಾ ಝದ್ರಾನ್, ರಶೀದ್ ಖಾನ್, ದವ್ಲತ್ ಝದ್ರನ್, ಮುಜೀಬ್ ಉರ್ ರೆಹಮಾನ್, ಹಮೀದ್ ಹಸನ್.

ಶ್ರೀಲಂಕಾ ಪ್ಲೇಯಿಂಗ್‌ 11: ದಿಮುತ್ ಕರುಣಾರತ್ನೆ (ನಾಯಕ), ಲಾಹಿರು ತಿರಿಮನ್ನೆ, ಕುಶಲ್ ಪೆರೆರಾ (ವಿ.ಕೆ.), ಕುಶಲ್ ಮೆಂಡಿಸ್, ಧನಂಜಯ ಡಿ'ಸಿಲ್ವಾ, ಏಂಜೆಲೋ ಮ್ಯಾಥ್ಯೂಸ್, ತಿಸಾರ ಪೆರೆರಾ, ಇಸುರು ಉದನಾ, ನುವಾನ್‌ ಪ್ರದೀಪ್‌, ಸುರಂಗ ಲಕ್ಮಲ್‌, ಲಸಿತ್‌ ಮಾಲಿಂಗ.

{headtohead_cricket_7_95}

Story first published: Tuesday, June 4, 2019, 23:58 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X