ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯದ ವೇಳೆ ಗುದ್ದಾಡಿಕೊಂಡ ಪಾಕ್-ಅಫ್ಘಾನ್ ಅಭಿಮಾನಿಗಳು: ವಿಡಿಯೋ

World Cup 2019: Pakistan and Afghanistan fans clash outside Headingley

ಲೀಡ್ಸ್, ಜೂನ್ 30: ಲೀಡ್ಸ್ ನ ಹೆಡಿಂಗ್ಲಿಯಲ್ಲಿ ಶನಿವಾರ (ಜೂನ್ 29) ನಡೆದ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ರೋಚಕ ಗೆಲುವನ್ನಾಚರಿಸಿತ್ತು. ಆದರೆ ಪಂದ್ಯದ ವೇಳೆ ಪಾಕ್-ಅಫ್ಘಾನ್ ತಂಡಗಳ ಕಾಳಗಕ್ಕಿಂತಲೂ ಇತ್ತಂಡಗಳ ಅಭಿಮಾನಿಗಳ ಗುದ್ದಾಟ ಗಮನ ಹೆಚ್ಚು ಸುದ್ದಿಯಾಗಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪಾಕ್-ಅಫ್ಘಾನ್ ಪಂದ್ಯ ಶುರುವಾಗಲು ಸ್ವಲ್ಪ ಸಮಯ ಇದೆ ಎನ್ನುವಾಗ ಹೆಡಿಂಗ್ಲಿ ಸ್ಟೇಡಿಯಂನ ಹೊರ ಭಾಗದಲ್ಲಿ ನೆರೆದಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ಅಭಿಮಾನಿಗಳು ಪರಸ್ಪರ ಗುದ್ದಾಡಿಕೊಂಡಿದ್ದರು. ವರದಿಯ ಪ್ರಕಾರ ಫೈಟ್ ಮಾಡಿದ ಅಭಿಮಾನಿಗಳನ್ನು ಸ್ಟೇಡಿಯಂನಿಂದ ಹೊರ ಕಳುಹಿಸಲಾಗಿದೆ ಎನ್ನಲಾಗಿದೆ.

ಕಾರ್ನೆಗೀ ಪೆವಿಲಿಯನ್ ಸ್ಟ್ಯಾಂಡ್ ಬಳಿಯಿದ್ದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಅಭಿಮಾನಿಗಳು ಎರಡೂ ತಂಡಗಳ ಪಂದ್ಯ ಆರಂಭಗೊಳ್ಳಲು ಒಂದು ಗಂಟೆ ಬಾಕಿಯಿದ್ದಾಗ ಜಗಳ ಶುರುವಿಟ್ಟುಕೊಂಡಿದ್ದರು. ಮತ್ತೆ ಜಗಳ ಗುದ್ದಾಟಕ್ಕೆ ಹೋಗಿತ್ತು. ಅನಂತರ ಬಂದ ಭದ್ರತಾ ಸಿಬ್ಬಂದಿಗಳು ಆ ಅಭಿಮಾನಿಗಳನ್ನು ಪೆವಿಲಿಯನ್‌ನಿಂದ ಹೊರ ಕಳುಹಿಸಿದರು.

ವಿಶ್ವಕಪ್ ಇನ್ನುಳಿದ ಪಂದ್ಯಗಳನ್ನು ಟೀಮ್ ಇಂಡಿಯಾ ಬೇಕೆಂದೇ ಸೋಲುತ್ತಾ?!ವಿಶ್ವಕಪ್ ಇನ್ನುಳಿದ ಪಂದ್ಯಗಳನ್ನು ಟೀಮ್ ಇಂಡಿಯಾ ಬೇಕೆಂದೇ ಸೋಲುತ್ತಾ?!

'ಇಬ್ಬರು ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಗಲಾಟೆ ನಡೆದಿದ್ದರ ಬಗ್ಗೆ ಅರಿವಿದೆ. ಅಲ್ಲಿ ಹೆಚ್ಚಿನ ತೊಂದರೆಯೇನೂ ಸಂಭವಿಸಿಲ್ಲ ಎನ್ನುವುದನ್ನು ಖಾತರಿಪಡಿಸಲು ನಾವು ಸ್ಥಳೀಯ ಪೊಲೀಸ್, ವೆಸ್ಟ್ ಯಾರ್ಕ್ ಶೈರ್ ಪೊಲೀಸರೊಂದಿಗೆ ಮಾತನಾಡುತ್ತಿದ್ದೇವೆ' ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ 50 ಓವರ್‌ಗೆ 9 ವಿಕೆಟ್ ಕಳೆದು 227 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನ, ಇಮಾದ್ ವಾಸಿಮ್ ಅವರ ಅಜೇಯ 49 ರನ್ ನೆರವಿನಿಂದ 49.4 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 230 ರನ್ ಪೇರಿಸಿ ಗೆಲುವಾಚರಿಸಿತು.

Story first published: Sunday, June 30, 2019, 9:27 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X