'ನನ್ನ ಬಳಿ ಅಕ್ರಮ್ ಫಿಕ್ಸಿಂಗ್ ಮಾಡಲು ಹೇಳಿದ್ದರೆ ಆತನನ್ನು ಮುಗಿಸುತ್ತಿದ್ದೆ' : ಶೋಯೆಬ್ ಅಖ್ತರ್

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮತ್ತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಾಕಷ್ಟು ಆಕ್ಟಿವ್ ಇರುವ ವ್ಯಕ್ತಿ. ಈಗ ಮತ್ತೊಮ್ಮೆ ಶೋಯೆಬ್ ಅಖ್ತರ್ ಸುದ್ದಿಯಾಗಿದ್ದಾರೆ. ಈ ಬಾರಿ ಪಾಕಿಸ್ತಾನದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಅವರು ಮಾತನ್ನಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕನಾಗಿದ್ದ ವಾಸಿಮ್ ಅಕ್ರಮ್ ತನ್ನ ಬಳಿಯೇನಾದರೂ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ಸೂಚಿಸಿದ್ದರೆ ಆ ಕ್ಷಣದಲ್ಲಿ ಆತನ ಮೇಲೆ ನಾನು ಧಾಳಿ ನಡೆಸುತ್ತಿದ್ದೆ ಅಥವಾ ಆತನನ್ನು ಕೊಂದುಬಿಡುತ್ತಿದ್ದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಆದರೆ ವಾಸಿಮ್ ಅಕ್ರಮ್ ಆ ರೀತಿ ಯಾವತ್ತೂ ಹೇಳಿಲ್ಲ ಎಂದು ಅಖ್ತರ್ ಹೇಳಿದ್ದಾರೆ.

ಭಾರತದ ಕೋಪಿಷ್ಟ ಕ್ರಿಕೆಟಿಗನನ್ನು ಹೆಸರಿಸಿದ ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋಭಾರತದ ಕೋಪಿಷ್ಟ ಕ್ರಿಕೆಟಿಗನನ್ನು ಹೆಸರಿಸಿದ ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ

ನಾನು 90ರ ದಶಕದ ಪಂದ್ಯಗಳನ್ನು ನೋಡುತ್ತಿದ್ದೆ. ಅದನ್ನು ನೋಡುವಾಗ ನನಗೆ ಅಕ್ರಮ್ ಬೌಲಿಂಗ್ ಬಗ್ಗೆ ಅಚ್ಚರಿಯೆನಿಸುತ್ತದೆ. ಅಸಾಧ್ಯವಾದ ಸಂದರ್ಭಗಳಲ್ಲಿ ವಾಸಿಮ್ ಅಕ್ರಮ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ಪಾಕಿಸ್ತಾನದ ಕಡೆಗೆ ತಿರುಗಿಸುತ್ತಿದ್ದರು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ವಾಸಿಂ ಅಖ್ತರ್‌ಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ತನ್ನ ಕ್ರಿಕೆಟ್ ಜೀವನದ ಆರಂಭದಲ್ಲಿ ಸಾಕಷ್ಟು ವಿಚಾರಗಳನ್ನು ಅಕ್ರಂ ತಿಳಿಸಿದ್ದಾರೆ. ಆ ಮೂಲಕ ತನಗೆ ಬೆಂಬಲವಾಗಿ ಅಕ್ರಂ ನಿಂತಿದ್ದರು ಎಂದು ರಾವಲ್ಪಿಂಡಿ ಎಕ್ಸಪ್ರೆಸ್ ಖ್ಯಾತಿಯ ಅಖ್ತರ್ ಹೇಳಿದ್ದಾರೆ. ಟಿವಿ ಶೋವೊಂದರಲ್ಲಿ ಅಖ್ತರ್ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಐಪಿಎಲ್ ಹರಾಜುದಾರನಾಗಿ ಅನುಭವ ಹಂಚಿಕೊಂಡ ರಿಚರ್ಡ್ ಮ್ಯಾಡ್ಲಿಐಪಿಎಲ್ ಹರಾಜುದಾರನಾಗಿ ಅನುಭವ ಹಂಚಿಕೊಂಡ ರಿಚರ್ಡ್ ಮ್ಯಾಡ್ಲಿ

ನಾನು ವಾಸಿಮ್ ಅಕ್ರಂ ಜೊತೆಗೆ 7-8 ವರ್ಷಗಳಷ್ಟು ಕಾಲ ಕ್ರಿಕೆಟ್ ಆಡಿದ್ದೇನೆ. ಈ ಸಂದರ್ಭದಲ್ಲಿ ಅದೆಷ್ಟೋ ಬಾರಿ ಅಕ್ರಂ ಆರಂಭಿಕ ಹಾಗೂ ಅಂತ್ಯದ ವಿಕೆಟ್‌ಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಿ ನಿಂದ ಸಂದರ್ಭಗಳನ್ನು ನೆನಪಿಸಿಕೊಳ್ಳಬಲ್ಲೆ ಎಂದು ವಾಸಿಮ್ ಅಕ್ರಂ ಬಗ್ಗೆ ಮಾತನಾಡುತ್ತಾ ಅಖ್ತರ್ ಹೇಳಿದ್ದಾರೆ

For Quick Alerts
ALLOW NOTIFICATIONS
For Daily Alerts
Story first published: Tuesday, April 21, 2020, 20:03 [IST]
Other articles published on Apr 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X