ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೌಲ್ಯ ಕಳೆದುಕೊಂಡಿರುವ ಸ್ಟಾರ್ ಕ್ರಿಕೆಟ್ ಆಟಗಾರರು

By Prasad
Yuvraj, Harbhajan, Gambhir sold for less price

ಬೆಂಗಳೂರು, ಜನವರಿ 27 : ಐಪಿಎಲ್ ನಲ್ಲಿ ಓಡುವ ಕುದುರೆಗಳಿಗೆ ಮಾತ್ರ ಭಾರೀ ಬೆಲೆ. ಆಡುವ ತಾಕತ್ತು, ಜನಪ್ರಿಯತೆ ಕಳೆದುಕೊಂಡ ಕ್ರಿಕೆಟ್ ಆಟಗಾರರು ಸೈಲೆಂಟಾಗಿ ನಿವೃತ್ತಿ ಘೋಷಿಸುವುದು ಉತ್ತಮ. ಇಲ್ಲದಿದ್ದರೆ, ಬೆಂಚನ್ನು ಕಾಯಿಸದೆ ಅವರಿಗೆ ಬೇರೆ ದಾರಿ ಇರುವುದಿಲ್ಲ.

ಇದನ್ನು ಹಳೆಯ ಹುಲಿಗಳಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮಾತ್ರವಲ್ಲದೆ ಹಲವಾರು ವಿದೇಶಿ ಆಟಗಾರರು ಐಪಿಎಲ್ ನಲ್ಲಿ ನೋಡಿದ್ದಾರೆ. ಅವರೆಲ್ಲ ಈಗ ಇತರ ಜವಾಬ್ದಾರಿಗಳನ್ನು ವಹಿಸಿಕೊಂಡು ದುಡ್ಡನ್ನು ಎಣಿಸುತ್ತಿದ್ದಾರೆ.

ಐಪಿಎಲ್: ಮೊದಲ ದಿನದ ಹರಾಜಿನಲ್ಲಿ ಯಾರಿಗೂ ಬೇಡವಾದವರಿವರುಐಪಿಎಲ್: ಮೊದಲ ದಿನದ ಹರಾಜಿನಲ್ಲಿ ಯಾರಿಗೂ ಬೇಡವಾದವರಿವರು

ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ನ 11ನೇ ಆವೃತ್ತಿಯಲ್ಲಿ ಮತ್ತಷ್ಟು ಹಳೆ ಹುಲಿಗಳು ಅವಗಣನೆಯ ರುಚಿ ಕಂಡಿವೆ. ಕಳೆದ ಆವೃತ್ತಿಯಲ್ಲಿ ಕೂಡ ಅಷ್ಟೇನೂ ಸಾಧನೆ ಮಾಡದಿರುವುದನ್ನು ಗಮನಿಸಿರುವ ಫ್ರಾಂಚೈಸಿಗಳು ಗೆಲ್ಲಿಸಿಕೊಡುವ ಆಟಗಾರರಿಗೆ ಮಣೆ ಹಾಕಿವೆ, ಹಿರಿಯ ಆಟಗಾರರನ್ನು ಕಡೆಗಣಿಸಿವೆ.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಅವರ ಪಟ್ಟಿ ಇಲ್ಲಿದೆ ನೋಡಿ

ಯುವರಾಜ್ ಸಿಂಗ್

ಯುವರಾಜ್ ಸಿಂಗ್

ಒಂದಾನೊಂದು ಕಾಲದಲ್ಲಿ ಟಿ20ಯ ಹೀರೋ ಆಗಿದ್ದ ಯುವರಾಜ್ ಸಿಂಗ್ ಇಂದು ಯಾವ ಫ್ರಾಂಚೈಸಿಗೂ ಬೇಡವಾಗಿರುವ ಆಟಗಾರರಾಗಿದ್ದಾರೆ. ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಕೇವಲ 2 ಕೋಟಿ ರುಪಾಯಿಗೆ ಕಿಂಗ್ಸ್ XI ಪಂಜಾಬ್ ತಂಡ ಸೇರಿಕೊಂಡಿದ್ದಾರೆ. ಯುವರಾಜ್ ಅವರನ್ನು 2014ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಕೋಟಿ ರುಪಾಯಿ ನೀಡಿ ಕೊಂಡುಕೊಂಡಿತ್ತು.

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್

ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಕೂಡ ಆಗಿದ್ದ ಹರ್ಭಜನ್ ಸಿಂಗ್ ಅವರ ಆಟ ಹೆಚ್ಚೂ ಕಡಿಮೆ ಮುಗಿದಿದೆ. ಐಪಿಎಲ್ ನಲ್ಲಿ ಒಟ್ಟು 136 ಪಂದ್ಯಗಳನ್ನು ಆಡಿರುವ ಹರಭಜನ್ ಸಿಂಗ್ ಬೇಸ್ ಅಂಕ - 2 ಕೋಟಿ. ಅದೇ ಬೆಲೆಗೆ ಅವರು ಪಂಜಾಬ್ ಪಾಲಾಗಿದ್ದಾರೆ. ಭಾರತ ತಂಡದಲ್ಲಿಯೂ ಸ್ಥಾನ ಕಳೆದುಕೊಂಡಿರುವ ಹರ್ಭಜನ್ ಸಿಂಗ್ ಅವರು ಈ ಬಾರಿಯೂ ಆಡಲು ಅವಕಾಶ ಸಿಗದಿದ್ದರೆ, ಬೇರಾವುದೋ ತಂಡಕ್ಕೆ ಕೋಚ್ ಆಗುವುದು ಒಳಿತು.

ಗೌತಮ್ ಗಂಭೀರ್

ಗೌತಮ್ ಗಂಭೀರ್

ಕಳೆದ ಬಾರಿ ಕೋಲ್ಕತಾ ನೈಟ್ ರೈಡರ್ಸ್ ಆಗಿದ್ದ ಗೌತಮ್ ಗಂಭೀರ್ ಅವರನ್ನು ಈ ಬಾರಿ ತಂಡವೇ ಬಿಟ್ಟುಕೊಟ್ಟಿದೆ. ಅವರು ಆ ಬಾರಿಯ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಕೇವಲ 2.8 ಕೋಟಿ ರುಪಾಯಿಗೆ ಸೇರಿಕೊಂಡಿದ್ದಾರೆ. ಇವರು ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸತತವಾಗಿ ವಿಫಲರಾಗಿದ್ದು, ಹೆಚ್ಚೂ ಕಡಿಮೆ ನಿವೃತ್ತಿಯ ಹೊಸ್ತಿಲಲ್ಲಿದ್ದಾರೆ.

ಮುರಳಿ ವಿಜಯ್, ಇಶಾಂತ್ ಶರ್ಮಾ

ಮುರಳಿ ವಿಜಯ್, ಇಶಾಂತ್ ಶರ್ಮಾ

ಇದು ನಿಜಕ್ಕೂ ಅಚ್ಚರಿಯ ಸಂಗತಿ. ಮುರಳಿ ವಿಜಯ್ ಅವರನ್ನು ಯಾವುದೇ ಫ್ರಾಂಚೈಸಿ ಹರಾಜಿನಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಅವರು ಟಿ20 ಆವೃತ್ತಿಗೆ ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಮಾಲಿಕರು ಬಂದಂತಿದೆ. ಇದೇ ರೀತಿ ದಕ್ಷಿಣ ಆಫ್ರಿಕಾದಲ್ಲಿ ವಿಫಲರಾಗಿರುವ ಇಶಾಂತ್ ಶರ್ಮಾ ಕೂಡ ಮಾರಾಟವಾಗದೆ ಉಳಿದುಕೊಂಡಿದ್ದಾರೆ.

Story first published: Saturday, January 27, 2018, 17:12 [IST]
Other articles published on Jan 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X