ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಲೂ ಪ್ಲೇ ಆಫ್‌ ಪ್ರವೇಶಿಸಬಲ್ಲದು!'

Yuzvendra Chahal still believes Virat Kohli-led RCB can qualify for IPL playoffs

ಬೆಂಗಳೂರು, ಏಪ್ರಿಲ್ 13: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಥಿತಿ ಚಿಂತಾಜನಕವಾಗಿದೆ. ಕಪ್ಪಿನ ಮಾತು ದೂರ ಬಲು ದೂರ ಎಂಬಂತಾಗಿದೆ. ಈನಡುವೆಯೂ ಆರ್‌ಸಿಬಿ ಸ್ಪಿನ್‌ ಬೌಲರ್ ಯುಜುವೇಂದ್ರ ಚಾಹಲ್ ಆರ್‌ಸಿಬಿ ಈಗಲೂ ಪ್ಲೇ-ಆಫ್‌ ಪ್ರವೇಶಿಸಿಬಲ್ಲದು ಎಂದಿದ್ದಾರೆ.

ಕಿಂಗ್ಸ್ XI ಪಂಜಾಬ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, Live ಸ್ಕೋರ್‌ಕಾರ್ಡ್

1
45904

ಈಬಾರಿ ಆಡಿರುವ 6ರಲ್ಲಿ ಆರೂ ಪಂದ್ಯಗಳನ್ನು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿದೆ. ಇದೇ ರೀತಿಯ ಹೀನಾಯ ಸ್ಥಿತಿಯನ್ನು ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) 2013ರಲ್ಲಿ ಅನುಭಸಿತ್ತು. ಅಂದು ಟೂರ್ನಿ ಆರಂಭದ ಆರೂ ಪಂದ್ಯಗಳನ್ನು ಡೆಲ್ಲಿ ಸೋತಿತ್ತು.

ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಸದ್ಯಕ್ಕೆ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ತುಂಬಾ ಕಡಿಮೆ. ಹಾಗಂತ ಬೆಂಗಳೂರು ಪ್ಲೇ ಆಫ್‌ ಪ್ರವೇಶವೇ ಸಾಧ್ಯವಿಲ್ಲ, ಬೆಂಗಳೂರು ಈ ಸಾರಿ ಕಪ್‌ ಗೆಲ್ಲೋದು ಸಾಧ್ಯನೇ ಇಲ್ಲ ಎನ್ನುವಂತಿಲ್ಲ. ಯಾಕೆಂದರೆ ಐಪಿಎಲ್‌ ಟೂರ್ನಿಯಲ್ಲಿ ಹಿಂದೆ ಅಚ್ಚರಿಯ ಫಲಿತಾಂಶಗಳು ಬಂದಿನ್ನು ನಾವು ನೋಡಿದ್ದೇವೆ. ಇನ್ನೊಂದು ತಂಡದ ಸೋಲು-ಗೆಲುವೂ ತಂಡವೊಂದಕ್ಕೆ ಅನುಕೂಲ ಮಾಡಿಕೊಟ್ಟಿದ್ದೂ ಇದೆ.

'ನಾವು ಆಸೆಬಿಟ್ಟರೆ ಇನ್ನುಳಿದ ಪಂದ್ಯಗಳನ್ನೂ ಸೋಲುತ್ತೇವೆ. ಈಗ ಸೋತಿದ್ದನ್ನು ಬದಲಾಯಿಸುವಂತಿಲ್ಲ. ಆದರೆ ಇನ್ನುಳಿದ 8 ಪಂದ್ಯಗಳನ್ನು ಗೆದ್ದುಕೊಳ್ಳುವತ್ತ ನಾವು ಗಮನ ಹರಿಸಲೇಬೇಕು. ಈಗ ನಾವು 6 ಪಂದ್ಯಗಳನ್ನು ಸೋತಿದ್ದೇವೆ. ಆದರೆ ಈಗಲೂ ಪ್ಲೇ ಆಫ್ ಪ್ರವೇಶಿಸುವ ಅವಕಾಶ ನಮಗಿದೆ ಎಂದು ನಾನು ಭಾವಿಸಿದ್ದೇನೆ' ಎಂದು ಚಾಹಲ್ ಶನಿವಾರ (ಏ.13) ಕಿಂಗ್ಸ್‌ XI ಪಂಜಾಬ್ ವಿರುದ್ಧ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿಕೊಂಡರು.

ಕ್ಯಾಪ್ಟನ್ ಕೂಲ್' ಧೋನಿ 'ಉಗ್ರ ಪ್ರತಾಪಿ' ಯಾಗಿದ್ದಕ್ಕೆ 50% ಸಂಭಾವನೆ ಕಟ್ಕ್ಯಾಪ್ಟನ್ ಕೂಲ್' ಧೋನಿ 'ಉಗ್ರ ಪ್ರತಾಪಿ' ಯಾಗಿದ್ದಕ್ಕೆ 50% ಸಂಭಾವನೆ ಕಟ್

ಕ್ರಿಕೆಟ್ ಟೂರ್ನಿಯೊಂದರಲ್ಲಿ ಹೀಗೆಂದೇ ಹೇಳುವಂತಿಲ್ಲ. ಅದರಲ್ಲೂ ಐಪಿಎಲ್‌ನಲ್ಲಿ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆದ ನಿದರ್ಶನಗಳಿವೆ. ಅಂಕಪಟ್ಟಿಯಲ್ಲಿ ಮೇಲಿದ್ದ ತಂಡ ಕೆಳಗಿಳಿಯೋದು, ಕೆಳಗಿದ್ದ ತಂಡ ಮೇಲೆ ಜಿಗಿಯೋದು ಇದ್ದೇ ಇದೆ. ಹೀಗಾಗಿ ಆರ್‌ಸಿಬಿ ಈ ಸಾರಿ ಪ್ಲೇ ಆಫ್ ಪ್ರವೇಶಿಸಿದರೂ ಅದರಲ್ಲಿ ಅಚ್ಚರಿಯಿಲ್ಲ. ಸದ್ಯಕ್ಕೆ ಶನಿವಾರದ (ಏ.13) ಬೆಂಗಳೂರು-ಪಂಜಾಬ್ ಪಂದ್ಯ ಏನಾಗಲಿದೆ ಕಾದು ನೋಡೋಣ.

Story first published: Saturday, April 13, 2019, 16:42 [IST]
Other articles published on Apr 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X