ಐಎಸ್‌ಎಲ್‌ಗೆ ಮುನ್ನ 7 ಆಟಗಾರರು, ಸಹ ಕೋಚ್‌ಗೆ ಕೊರೊನಾ ಪಾಸಿಟಿವ್

ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಸೀಸನ್ ಆರಂಭಕ್ಕೂ ಮುನ್ನ ಏಳು ಆಟಗಾರರಿಗೆ, ಒಬ್ಬ ಸಹ ಕೋಚ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿರುವುದು ವರದಿಯಾಗಿದೆ. ಪಿಟಿಐಗೆ ಈ ಮಾಹಿತಿ ಲಭ್ಯವಾಗಿದ್ದು, ಮುಂದಿನ ತಿಂಗಳು ಗೋವಾದಲ್ಲಿ ಐಎಸ್‌ಎಲ್ ಆರಂಭವಾಗುವುದನ್ನು ನಿರೀಕ್ಷಿಸಲಾಗಿದೆ.

ಒಟ್ಟು 11 ತಂಡಗಳು ಈ ಬಾರಿಯ ಸೀಸನ್‌ನಲ್ಲಿ ಪಾಲ್ಗೊಳ್ಳಲಿವೆ. ಗೋವಾಕ್ಕೆ ಬಹುತೇಕ ಎಲ್ಲಾ ತಂಡಗಳು ಈಗಾಗಲೇ ತಲುಪಿದ್ದು ಈಸ್ಟ್ ಬೆಂಗಾಲ್ ಮಾತ್ರ ಇನ್ನಷ್ಟೇ ಗೋವಾಕ್ಕೆ ಬರಬೇಕಿದೆ.

ಶಾರ್ಜಾದಲ್ಲಿ ಗೆಲುವಿನ ಕಹಳೆ ಊದಿದ RCB: ಕೆಕೆಆರ್‌ಗೆ ಹೀನಾಯ ಸೋಲು

'ಹೌದು, ಏಳು ಆಟಗಾರರು ಮತ್ತು ಸಹಾಯಕ ತರಬೇತುದಾರರು COVID-19ಗೆ ಪಾಸಿಟಿವ್ ಬಂದಿದ್ದಾರೆ ಮತ್ತು ಅವರೆಲ್ಲರದೂ ಲಕ್ಷಣರಹಿತ ಪ್ರಕರಣಗಳಾಗಿವೆ. ಆಯಾ ಜೈವಿಕ ಸುರಕ್ಷಿತ ಪರದೆಗಳೊಳಗೆ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ,' ಎಂದು ಮೂಲವೊಂದು ಪಿಟಿಐಗೆ ಮಾಹಿತಿ ಒದಗಿಸಿದೆ.

'ಎಲ್ಲಾ ಆಟಗಾರರು ಮತ್ತು ಅಧಿಕಾರಿಗಳು ಆರೋಗ್ಯ ಸೇತು ಆ್ಯಪ್ ಮತ್ತು ಐಎಸ್ಎಲ್ ಹೆಲ್ತ್ ಆ್ಯಪ್ ಹೊಂದಿರುವುದು ಕಡ್ಡಾಯವಾಗಿದೆ, ಅದರ ಮೂಲಕ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಮಾಡಬಹುದು. ಆದ್ದರಿಂದ, ಸಂಪರ್ಕ ಪತ್ತೆಹಚ್ಚುವಿಕೆ ಸಹ ಇರುತ್ತದೆ ಮತ್ತು ಈ ಆಟಗಾರರು ಮತ್ತು ತರಬೇತುದಾರರೊಂದಿಗೆ ಸಂಪರ್ಕ ಹೊಂದಿದವರನ್ನು ನಾವು ಪರೀಕ್ಷಿಸಬೇಕಾಗಿದೆ,' ಎಂದು ಮೂಲ ತಿಳಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Monday, October 12, 2020, 23:56 [IST]
Other articles published on Oct 12, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X