ಐಎಸ್‌ಎಲ್ 2020: ಅಂಕ ಹಂಚಿಕೊಂಡ ಹೈದಾಬಾದ್-ಜೆಮ್ಷೆಡ್ಪುರ್

By Isl Media

ಗೋವಾ, ಡಿಸೆಂಬರ್ 2: ಅರಿದಾನೆ ಸ್ಯಾಂಟನಾ (50ನೇ ನಿಮಿಷ) ಹೈದರಾಬಾದ್ ಪರ ಗೋಲು ಗಳಿಸಿದರೆ ಸ್ಟೀಫನ್ ಈಝಿ (85ನೇ ನಿಮಿಷ) ಜೆಮ್ಷೆಡ್ಪುರ ಪರ ಗೋಲು ಗಳಿಸುವ ಮೂಲಕ ಹೀರೋ ಇಂಡಿಯನ್ ಸೂಪರ್ ಲೀಗ್ ನ 14ನೇ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತು. ಅಂತಿಮ ಹಂತದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪರಿಣಾಮ ದ್ವಿತಿಯಾರ್ಧದಲ್ಲಿ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. 71ನೇ ನಿಮಿಷದಲ್ಲಿ ಟಾಟಾ ಪಡೆ ಗಳಿಸಿದ ಗೋಲು ಅಮಾನ್ಯ ಎಂದು ರೆಫರಿ ಘೋಷಿಸಿದ್ದು ಕೆಲ ಹೊತ್ತು ಗೊಂದಲಕ್ಕೆ ಕಾರಣವಾಯಿತು.

ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್

ಪ್ರಥಮಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿರುವ ಹೈದರಾಬಾದ್ ಪರ ಅರಿದಾನೆ ಸ್ಯಾಂಟನಾ 50ನೇ ನಿಮಿಷದಲ್ಲಿ ಗಳಿಸಿದ ಗೋಲು ಹೈದರಾಬದ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಕಾರ್ನರ್ ನಿಂದ ಬಂದ ಪಾಸ್, ನೇರವಾಗಿ ಪವನ್ ಕುಮಾರ್ ಕೈ ಸೇರಿತ್ತು, ಆದರೆ ಕೈಯಿಂದ ಹೊರಚಿಮ್ಮಿದ ಚೆಂಡು ನೇರವಾಗಿ ಸ್ಯಾಂಟನಾ ಅವರನಿಯಂತ್ರಣಕ್ಕೆ ಸಿಲುಕಿತು.

ಐಎಸ್‌ಎಲ್: ಮುಂಬೈ ವಿರುದ್ಧ ಸೋತ ಈಸ್ಟ್ ಬೆಂಗಾಲ್ ಕಂಗಾಲ್!

ಸ್ಯಾಂಟನಾ ಸುಲಭವಾಗಿ ಚೆಂಡನ್ನು ನೆಟ್ ಗೆ ಸೇರಿಸಿದರು. ಆ ನಂತರವೂ ಹೈದರಾಬಾದ್ ಎರಡು ಬಾಗಿ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿತು. ಮೂರನೇ ಪಂದ್ಯವನ್ನಾಡುತ್ತಿರುವ ಅರಿದಾನೆ ಸ್ಯಾಂಟನಾ ಗಳಿಸಿದ ನಾಲ್ಕನೇ ಗೋಲು ಇದಾಗಿದೆ.

ಗೋಲಿಲ್ಲದ ಪ್ರಥಮಾರ್ಧ

ಗೋಲಿಲ್ಲದ ಪ್ರಥಮಾರ್ಧ

ಇತ್ತಂಡಗಳು ಉತ್ತಮ ರೀತಿಯಲ್ಲಿ 45 ನಿಮಿಷಗಳ ಆಟವನ್ನು ಪೂರ್ಣಗೊಳಿಸಿದವು. ಹೈದರಾಬಾದ್ ಹೆಚ್ಚು ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. ಹಾಲಿಚರಣ್ ನಾರ್ಜರಿ ಉತ್ತಮ ರೀತಿಯಲ್ಲಿ ಪೆನಾಲ್ಟಿ ವಲಯದಲ್ಲಿ ಚೆಂಡನ್ನು ನಿಯಂತ್ರಿಸಿ ಗುರಿ ಇಟ್ಟರೂ ಎರಡು ಬಾರಿ ಚೆಂಡು ಗೋಲ್ ಬಾಕ್ಸ್ ನ ಮೇಲಿಂದ ಸಾಗಿತ್ತು. ಮತ್ತೊಮ್ಮೆ ಗೋಲ್ ಬಾಕ್ಸ್ ನ ಕಂಬದ ಅಂಚಿಗೆ ತಗಲಿ ಹೊರ ನಡೆಯಿತು. ಅರಿದಾನೆ ಸ್ಯಾಂಟನಾ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ನಿರಿಜಸ್ ವಾಸ್ಕಿಸ್ ಅವರ ಅನುಭವವೂ ಪ್ರಥಮಾರ್ಧದಲ್ಲಿ ಜೆಮ್ಷೆಡ್ಪುರದ ಪ್ರಯೋಜನಕ್ಕೆ ಬರಲಿಲ್ಲ. ಇದರಿಂದ ಪಂದ್ಯದ ಕುತೂಹಲ ದ್ವಿತಿಯಾರ್ಧಕ್ಕೆ ಸಾಗಿತು.

ಆತ್ಮವಿಶ್ವಾಸದಲ್ಲಿ ಹೈದರಾಬಾದ್

ಆತ್ಮವಿಶ್ವಾಸದಲ್ಲಿ ಹೈದರಾಬಾದ್

ಹೀರೋ ಇಂಡಿಯನ್ ಸೂಪರ್ ಲೀಗ್ ನ 14ನೇ ಪಂದ್ಯದಲ್ಲಿ ಹೈದರಾಬಾದ್ ಮತ್ತು ಜೆಮ್ಷೆಡ್ಪುರ ಎಫ್ ಸಿ ತಂಡಗಳು ಮುಖಾಮುಖಿಯಾದವು. ಹೈದರಾಬಾದ್ ತಂಡ ಮೊದಲ ಪಂದ್ಯದಲ್ಲಿ ಒಡಿಶಾ ವಿರರುದ್ಧ ಜಯ ಗಳಿಸಿ ನಂತರ ಬೆಂಗಳೂರು ವಿರುದ್ಧ ಅಂಕ ಹಂಚಿಕೊಂಡಿತ್ತು. ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಹೈದರಾಬಾದ್ ಇದುವರೆಗೂ ಫೀಲ್ಡ್ ಗೋಲ್ ನೀಡಿರಲಿಲ್ಲ. ಕಳೆದ ಬಾರಿ ಒಂದೂ ಕ್ಲೀನ್ ಶೀಟ್ ಸಾಧನೆ ಮಾಡಿರದ ತಂಡವೊಂದು ಇಷ್ಟು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿರುವ ಬಗ್ಗೆ ಫುಟ್ಬಾಲ್ ತಜ್ಞರು ಅಚ್ಚರಿ ಜತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಡೈ ಒನೈಂಡಾ, ಆಶೀಶ್ ರಾಯ್ ಮತ್ತು ಚೆಂಗ್ಲೆನ್ಸನಾ ಸಿಂಗ್ ಬ್ಯಾಕ್ ಲೈನ್ ನಲ್ಲಿ ಉತ್ತಮ ಪ್ರದರ್ಶಶನ ನೀಡಿರುವುದು ತಂಡದ ಯಶಸ್ಸಿಗೆ ಮುಖ್ಯ ಕಾರಣ. ಆದರೆ ಫಾರ್ವರ್ಡ್ ವಿಭಾಗದಲ್ಲಿ ತಂಡ ಸುಧಾರಣೆ ಕಂಡುಕೊಳ್ಳಬೇಕಾಗಿದೆ. ಇದು ವರೆಗೂ ಗಳಿಸಿರುವ ಒಂದು ಗೋಲು ದಾಖಲಾಗಿರುವುದು ಪೆನಾಲ್ಟಿ ಮೂಲಕ.

ಜೆಮ್ಷೆಡ್ಪುರ ಎಫ್‌ಸಿ ಮಿಶ್ರಫಲಿತಾಂಶ

ಜೆಮ್ಷೆಡ್ಪುರ ಎಫ್‌ಸಿ ಮಿಶ್ರಫಲಿತಾಂಶ

ಜೆಮ್ಷೆಡ್ಪುರ ಎಫ್‌ಸಿ ಮಿಶ್ರಫಲಿತಾಂಶದೊಂದಿಗೆ ಮೂರನೇ ಪಂದ್ಯಕ್ಕೆ ಆಗಮಿಸಿತು. ಚೆನ್ನೈಯಿನ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತು ಎರಡನೇ ಪಂದ್ಯದಲ್ಲಿ ಒಡಿಶಾ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಓವೆನ್ ಕೊಯ್ಲ್ ಪಡೆ ಋತುವಿನ ಮೊದಲ ಜಯದ ನಿರೀಕ್ಷೆಯಲ್ಲಿ ಅಂಗಣಕ್ಕಿಳಿಯಿತು. ತಂಡದಲ್ಲಿ ಉಲವಾರು ಸ್ಟಾರ್ ಆಟಗಾರರಿದ್ದರೂ ನೆರಿಜಸ್ ವಾಸ್ಕಿಸ್ ಅವನ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ. ತಂಡದ ಪರ ದಾಖಲಾಗಿರುವ ಮೂರೂ ಗೋಲುಗಳು ನೆರಿಜಸ್ ಅವರೇ ಗಳಿಸಿದ್ದು.

For Quick Alerts
ALLOW NOTIFICATIONS
For Daily Alerts
Story first published: Wednesday, December 2, 2020, 23:52 [IST]
Other articles published on Dec 2, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X