ಏಷ್ಯಾ ಕಪ್ ಹಾಕಿ: ಇಂದು ಭಾರತ vs ಪಾಕಿಸ್ತಾನ ಕಾಳಗ; ಪಂದ್ಯದ ಸಮಯ, ಎಲ್ಲಿ ಲೈವ್ ವೀಕ್ಷಿಸಬಹುದು?

ಹಾಕಿ ಏಷ್ಯಾ ಕಪ್‌ನ ಹನ್ನೊಂದನೇ ಆವೃತ್ತಿ ಇಂದಿನಿಂದ (ಮೇ 23) ಇಂಡೋನೇಷಿಯಾದ ಜಕಾರ್ತ್‌ನಲ್ಲಿ ಆರಂಭವಾಗುತ್ತಿದ್ದು, ಟೂರ್ನಿಯ ಪ್ರಥಮ ಪಂದ್ಯದಲ್ಲಿಯೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಈ ಹಾಕಿ ಏಷ್ಯಾ ಕಪ್ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಎಂದು ಎರಡು ಗುಂಪುಗಳನ್ನು ಮಾಡಿ ಗುಂಪೊಂದರಲ್ಲಿ ನಾಲ್ಕು ತಂಡಗಳನ್ನು ಸೇರಿಸಲಾಗಿದೆ.

ಇಂಡೋನೇಷಿಯಾದ ಜಕಾರ್ತ್‌ನಲ್ಲಿ ನಡೆಯುವ ಪುರುಷರ ಏಷ್ಯಾ ಕಪ್‌ಗೆ ಏಷ್ಯಾದ ಅಗ್ರ ರಾಷ್ಟ್ರಗಳ ಭಾಗವಹಿಸುತ್ತಿದ್ದು, ಪ್ರತಿಷ್ಠಿತ ಪಂದ್ಯಾವಳಿಗೆ ವೇದಿಕೆ ಸಿದ್ಧವಾಗಿದೆ. ಮೇ 23 ರಂದು ಪ್ರಾರಂಭವಾಗಲಿರುವ ಪ್ರತಿಷ್ಠಿತ ಟೂರ್ನಿಯು ವಿಶ್ವಕಪ್ ಅರ್ಹತಾ ಪಂದ್ಯವಾಗಿದೆ.

ಹಾಕಿ ಏಷ್ಯಾ ಕಪ್ 2022: ಪ್ರಥಮ ಪಂದ್ಯದಲ್ಲೇ ಭಾರತ - ಪಾಕ್ ಮುಖಾಮುಖಿ; ಇಲ್ಲಿದೆ ವೇಳಾಪಟ್ಟಿಹಾಕಿ ಏಷ್ಯಾ ಕಪ್ 2022: ಪ್ರಥಮ ಪಂದ್ಯದಲ್ಲೇ ಭಾರತ - ಪಾಕ್ ಮುಖಾಮುಖಿ; ಇಲ್ಲಿದೆ ವೇಳಾಪಟ್ಟಿ

ಭಾರತ, ಜಪಾನ್, ಪಾಕಿಸ್ತಾನ, ಮತ್ತು ಆತಿಥೇಯ ಇಂಡೋನೇಷ್ಯಾ ಪೂಲ್ 'ಎ' ನಲ್ಲಿ ಸ್ಥಾನ ಪಡೆದಿದ್ದರೆ, ಮಲೇಷ್ಯಾ, ಕೊರಿಯಾ, ಓಮನ್ ಮತ್ತು ಬಾಂಗ್ಲಾದೇಶವು ಪೂಲ್ 'ಬಿ' ನಲ್ಲಿವೆ. ಭಾರತವು ಮೇ 23ರಂದು ಪೂಲ್ ಎ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕ ಕದನದಲ್ಲಿ ಮುಖಾಮುಖಿಯಾಗಲಿದೆ.

ಏಷ್ಯಾಕಪ್‌ನಲ್ಲಿ ಸೂಪರ್ 4 ಸ್ವರೂಪವನ್ನು ಪರಿಚಯಿಸುವುದರೊಂದಿಗೆ, ಭಾರತವು ಪಾಕಿಸ್ತಾನವನ್ನು ಎರಡು ಬಾರಿ ಎದುರಿಸುವ ಸಾಧ್ಯತೆಯಿದೆ. ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ಮಾಜಿ ನಾಯಕ ಮತ್ತು ಎರಡು ಬಾರಿ ಒಲಿಂಪಿಯನ್ ಸರ್ದಾರ್ ಸಿಂಗ್ ಅವರು ಭಾರತದ ಕೋಚ್ ಪಾತ್ರವನ್ನು ವಹಿಸುವುದರೊಂದಿಗೆ ಸ್ಪರ್ಧೆಯು ಇನ್ನಷ್ಟು ಆಕರ್ಷಕವಾಗಿರುತ್ತದೆ ಎಂದು ಇಕ್ರಮ್ ನಿರೀಕ್ಷಿಸಿದ್ದಾರೆ. ಮಾಜಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೀಗ್ಫ್ರೈಡ್ ಐಕ್ಮನ್ ಅವರು ಈ ಪಂದ್ಯಾವಳಿಯಲ್ಲಿ ಕೋಚ್ ಆಗಿ ಪಾಕಿಸ್ತಾನ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ vs ಪಾಕಿಸ್ತಾನ ಪಂದ್ಯದ ವಿವರ, ಯಾವಾಗ, ಎಲ್ಲಿ ವೀಕ್ಷಿಸಬಹುದು

ಭಾರತ vs ಪಾಕಿಸ್ತಾನ ಪಂದ್ಯದ ವಿವರ, ಯಾವಾಗ, ಎಲ್ಲಿ ವೀಕ್ಷಿಸಬಹುದು

ಏಷ್ಯಾ ಕಪ್ ಹಾಕಿ 2022ರ ಭಾರತ ವಿರುದ್ಧ ಪಾಕಿಸ್ತಾನ ಹಾಕಿ ತಂಡದ ಸೆಣಸಾಟ, ಪೂಲ್ 'ಎ'

ದಿನಾಂಕ; ಮೇ 23 (ಸೋಮವಾರ), 2022

ಸಮಯ: 5:00 PM IST/ 18:30 PM (ಸ್ಥಳೀಯ)

ಸ್ಥಳ: ಗೆಲೋರಾ ಬಂಗ್ ಕರ್ನೋ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಗೆಲೋರಾ, ಸೆಂಟ್ರಲ್ ಜಕಾರ್ತ, ಇಂಡೋನೇಷ್ಯಾ.

ಏಷ್ಯಾ ಕಪ್ ಹಾಕಿ 2022ರ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2 SD+HD ಆಯ್ಕೆ ಮಾಡಿ ವೀಕ್ಷಿಸಬಹುದು. ಭಾರತ ಮತ್ತು ಪಾಕಿಸ್ತಾನ ಹಾಕಿಯ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.

ಏಷ್ಯಾಕಪ್‌ನಲ್ಲಿ ಯಾವಾಗ ಪ್ರಶಸ್ತಿ ಗೆದ್ದಿವೆ?

ಏಷ್ಯಾಕಪ್‌ನಲ್ಲಿ ಯಾವಾಗ ಪ್ರಶಸ್ತಿ ಗೆದ್ದಿವೆ?

ಭಾರತ vs ಪಾಕಿಸ್ತಾನ ಮುಖಾಮುಖಿಯಲ್ಲಿ ಪಾಕಿಸ್ತಾನ- 82 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ- 64 ಪಂದ್ಯಗಳನ್ನು ಗೆದ್ದಿದೆ. ಏಷ್ಯಾಕಪ್‌ನಲ್ಲಿ ಭಾರತ 2003, 2007, 2017 ರಲ್ಲಿ ಟ್ರೋಫಿ ಎತ್ತಿ ಹಿಡಿದಿದೆ. ಇನ್ನು ಪಾಕಿಸ್ತಾನ ಹಾಕಿ ತಂಡ 1982, 1985 ಮತ್ತು 1989ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಟ್ರೋಫಿ ಎತ್ತಿ ಹಿಡಿದಿದೆ.

"ಭಾರತೀಯ ಪುರುಷರ ಹಾಕಿ ತಂಡವು ಏಷ್ಯಾ ಕಪ್ 2022 ಅಭಿಯಾನಕ್ಕಾಗಿ ಮತ್ತು ಪಾಕಿಸ್ತಾನದ ವಿರುದ್ಧದ ಅವರ ಇಂದಿನ ಮೊದಲ ಪಂದ್ಯಕ್ಕಾಗಿ ಶುಭ ಹಾರೈಸುತ್ತೇನೆ. ಇಂದು ಮತ್ತು ಉಳಿದ ಏಷ್ಯಾ ಕಪ್ ಅಭಿಯಾನದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಹೊರತುಪಡಿಸಿ ಏನನ್ನೂ ನಿರೀಕ್ಷಿಸುತ್ತಿಲ್ಲ" ಎಂದು ಭಾರತೀಯ ಕ್ರಿಕೆಟ್ ಆಟಗಾರ್ತಿ ಮೋನಾ ಮೇಶ್ರಮ್ ಕೂ ಮೂಲಕ ಶುಭಾಶಯ ಹೇಳಿದ್ದಾರೆ.

ಏಷ್ಯಾ ಕಪ್ ಭಾರತ ಹಾಕಿ ತಂಡ

ಗೋಲ್‌ಕೀಪರ್‌ಗಳು: ಪಂಕಜ್ ಕುಮಾರ್ ರಜಾಕ್, ಸೂರಜ್ ಕರ್ಕೇರಾ

ಡಿಫೆಂಡರ್‌ಗಳು: ಯಶದೀಪ್ ಸಿವಾಚ್, ಅಭಿಷೇಕ್ ಲಾಕ್ರಾ, ಬೀರೇಂದ್ರ ಲಾಕ್ರಾ (ನಾಯಕ), ಮಂಜೀತ್, ದಿಪ್ಸನ್ ಟಿರ್ಕಿ

ಮಿಡ್‌ಫೀಲ್ಡರ್‌ಗಳು: ವಿಷ್ಣುಕಾಂತ್ ಸಿಂಗ್, ರಾಜ್ ಕುಮಾರ್ ಪಾಲ್, ಮರೀಶ್ವರನ್ ಶಕ್ತಿವೇಲ್, ಶೇಷೇಗೌಡ ಬಿಎಂ, ಸಿಮ್ರಂಜೀತ್ ಸಿಂಗ್

ಫಾರ್ವರ್ಡ್‌ಗಳು: ಪವನ್ ರಾಜ್‌ಭರ್, ಅಭರಣ ಸುದೇವ್, ಎಸ್‌ವಿ ಸುನಿಲ್ (ಉಪ ನಾಯಕ), ಉತ್ತಮ್ ಸಿಂಗ್, ಎಸ್. ಕಾರ್ತಿ;

ಬದಲಿಗಳು: ಮಣಿಂದರ್ ಸಿಂಗ್, ನಿಲಮ್ ಸಂಜೀಪ್ Xess

ಸ್ಟ್ಯಾಂಡ್‌ಬೈಸ್: ಪವನ್, ಪರ್ದೀಪ್ ಸಿಂಗ್, ಅಂಕಿತ್ ಪಾಲ್, ಅಂಗದ್ ಬೀರ್ ಸಿಂಗ್.

ಮುಖ್ಯ ಕೋಚ್: ಸರ್ದಾರ್ ಸಿಂಗ್

ಏಷ್ಯಾ ಕಪ್ ಪಾಕಿಸ್ತಾನ ಹಾಕಿ ತಂಡ

ಏಷ್ಯಾ ಕಪ್ ಪಾಕಿಸ್ತಾನ ಹಾಕಿ ತಂಡ

ಗೋಲ್‌ಕೀಪರ್‌ಗಳು: ಅಕ್ಮಲ್ ಹುಸೇನ್, ಅಬ್ದುಲ್ಲಾ ಇಶ್ತಿಯಾಕ್ ಖಾನ್

ಡಿಫೆಂಡರ್‌ಗಳು: ಮುಬಾಶಿರ್ ಅಲಿ, ಇಮಾದ್ ಶಕೀಲ್ ಬಟ್, ಹಮದುದ್ದೀನ್ ಅಂಜುಮ್, ಮುಹಮ್ಮದ್ ಅಬ್ದುಲ್ಲಾ, ರಿಜ್ವಾನ್ ಅಲಿ

ಮಿಡ್‌ಫೀಲ್ಡರ್‌ಗಳು: ಉಮರ್ ಭಟ್ (ನಾಯಕ), ಅಲಿ ಶಾನ್, ಮೊಯಿನ್ ಶಕೀಲ್, ಅಬ್ದುಲ್ ಹನನ್, ಜುನೈದ್ ಮಂಜೂರ್, ಘಜನ್‌ಫರ್ ಅಲಿ

ಫಾರ್ವರ್ಡ್‌ಗಳು: ಅಬು ಬಕರ್ ಮಹಮೂದ್, ಎಜಾಜ್ ಅಹ್ಮದ್, ರಾಣಾ ಅಬ್ದುಲ್ ವಹೀದ್, ಮುಹಮ್ಮದ್ ಸಲ್ಮಾನ್ ರಜಾಕ್, ರೋಮನ್, ಅಫ್ರಾಜ್, ಅಬ್ದುಲ್ ಹನನ್ ಶಾಹಿದ್

ಮುಖ್ಯ ಕೋಚ್: ಸೀಗ್ಫ್ರೈಡ್ ಐಕ್ಮನ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, May 23, 2022, 15:03 [IST]
Other articles published on May 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X