ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022 Playoffs: ಗೂಳಿಗಳ ಆರ್ಭಟಕ್ಕೆ ದಬಾಂಗ್ ಡೆಲ್ಲಿ ಧೂಳಿಪಟ, ಸೆಮಿಫೈನಲ್ ಪ್ರವೇಶಿಸಿದ ಬುಲ್ಸ್ ಪಡೆ

PKL 2022 Playoffs: Bengaluru Bulls Defeat Dabang Delhi In Eliminator 1 To Enter Semi-Final

ಪ್ರೊ ಕಬಡ್ಡಿ ಲೀಗ್‌ 2022ರ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಗೂಳಿಗಳು ಅಕ್ಷರಶಃ ಆರ್ಭಟಿಸಿದವು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿಯನ್ನು 56-24 ಅಂಕಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ ಪ್ರವೇಶಿಸಿದೆ.

ಡಿಸೆಂಬರ್ 13 ರಂದು ಮಂಗಳವಾರ ಮುಂಬೈನ ಸರ್ದಾರ್ ವಲ್ಲಭಬಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗುತ್ತಿದ್ದಂತೆ ಬೆಂಗಳೂರು ಬುಲ್ಸ್ ತಮ್ಮ ಶ್ರೇಷ್ಠ ಆಟವನ್ನು ಪ್ರದರ್ಶಿಸಿತು. ವಿಕಾಸ್ ಕಂಡೋಲಾ ಆರಂಭದಲ್ಲೇ ರೈಡಿಂಗ್ ಮೂಲಕ ದಬಾಂಗ್ ಡೆಲ್ಲಿ ತಂಡವನ್ನು ಕಂಗೆಡಿಸಿದರು. ಕೆಲವೇ ನಿಮಿಷಗಳ ಅವಧಿಯಲ್ಲಿ ವಿಕಾಶ್ ಕಂಡೋಲಾ ಸೂಪರ್ ರೈಡ್ ಮಾಡುವ ಮೂಲಕ 7-1 ಅಂಕಗಳ ಮುನ್ನಡೆ ಸಾಧಿಸಿತು.

ಯಾವುದೇ ಹಂತದಲ್ಲಿ ಕೂಡ ದಬಾಂಗ್ ಡೆಲ್ಲಿ ತಂಡಕ್ಕೆ ಸುಧಾರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಆರಂಭದಲ್ಲಿ ವಿಕಾಸ್ ಕಂಡೋಲಾ ಅಬ್ಬರಿಸಿದರೆ, ನಂತರ ತನ್ನ ಅಸಲಿ ಆಟ ಶುರು ಮಾಡಿದ ಭರತ್ ದಬಂಗ್ ಡೆಲ್ಲಿ ರಕ್ಷಣಾ ಪಡೆಯನ್ನು ಧೂಳೀಪಟ ಮಾಡಿದರು.

ಐಪಿಎಲ್ 2023 ಮಿನಿ ಹರಾಜು: ಆಟಗಾರರ ಹರಾಜು ಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐಐಪಿಎಲ್ 2023 ಮಿನಿ ಹರಾಜು: ಆಟಗಾರರ ಹರಾಜು ಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

ಎಲಿಮಿನೇಟರ್ ಪಂದ್ಯದಲ್ಲಿ ಗೂಳಿಗಳು ಬಲಿಷ್ಠವಾದ ರಕ್ಷಣಾ ಕೋಟೆಯನ್ನು ಕಟ್ಟಿದವು. ಡೆಲ್ಲಿ ಎಕ್ಸ್‌ಪ್ರೆಸ್‌ ನವೀನ್ ಕುಮಾರ್ ಗೆ ಹೆಚ್ಚಿನ ರೈಡಿಂಗ್ ಪಾಯಿಂಟ್ ಗಳಿಸಅವಕಾಶವನ್ನೇ ನೀಡಲಿಲ್ಲ. ಡಿಫೆಂಡರ್ ಪಾರ್ಥಿಬನ್ ಡೆಲ್ಲಿ ರೈಡರ್ ಗಳಿಗೆ ಸಿಂಹಸ್ವಪ್ನವಾದರು.

ವಿಕಾಸ್, ಭರತ್ ಅಬ್ಬರಕ್ಕೆ ಡೆಲ್ಲಿ ತತ್ತರ

ವಿಕಾಸ್, ಭರತ್ ಅಬ್ಬರಕ್ಕೆ ಡೆಲ್ಲಿ ತತ್ತರ

ಪಂದ್ಯದ ಆರಂಭದಿಂದಲೇ ಬುಲ್ಸ್ ಪಡೆಯ ರೈಡರ್ ಗಳಾದ ವಿಕಾಸ್ ಕಂಡೋಲಾ ಮತ್ತು ಭರತ್ ಅಬ್ಬರಿಸಿದರು. ಅದರಲ್ಲೂ ಮೊದಲು ರೈಡ್ ಮಾಡಲು ಆರಂಭಿಸಿದ ವಿಕಾಸ್ ಕಂಡೋಲಾ ದಾಳಿಗೆ ಡೆಲ್ಲಿ ತತ್ತರಿಸಿತು. ವಿಕಾಸ್ ಕಂಡೋಲಾ 13 ರೈಡಿಂಗ್ ಪಾಯಿಂಟ್ ಗಳಿಸಿದರೆ, ಭರತ್ 15 ರೈಡಿಂಗ್ ಪಾಯಿಂಟ್ ಗಳಿಸಿ ಮಿಂಚಿದರು.

ಪಂದ್ಯದ ಮೊದಲಾರ್ಧದ ವೇಳೆಗೆ ದಬಾಂಗ್ ಡೆಲ್ಲಿ ಎರಡು ಬಾರಿ ಆಲೌಟ್ ಆಯಿತು. ಮೊದಲಾರ್ಧದ ಅಂತ್ಯಕ್ಕೆ ಬೆಂಗಳೂರು ಬುಲ್ದ್ 31-15 ಅಂಕಗಳ ಬೃಹತ್ ಮುನ್ನಡೆಯನ್ನು ಕಾಯ್ದುಕೊಂಡರು.

Ind vs Ban 1st Test: ಆತ ಫಾರ್ಮ್‌ಗೆ ಮರಳಲಿದ್ದಾನೆ, ಭಾರತೀಯ ಆಟಗಾರನ ಬಗ್ಗೆ ವಾಸಿಂ ಜಾಫರ್ ದೊಡ್ಡ ಹೇಳಿಕೆ

ಪಾರ್ಥಿಬನ್ ಬಿಗಿ ಹಿಡಿತಕ್ಕೆ ಸಿಕ್ಕ ಡೆಲ್ಲಿ

ಪಾರ್ಥಿಬನ್ ಬಿಗಿ ಹಿಡಿತಕ್ಕೆ ಸಿಕ್ಕ ಡೆಲ್ಲಿ

ಒಂದು ಕಡೆ ರೈಡಿಂಗ್ ವಿಭಾಗದಲ್ಲಿ ಭರತ್, ವಿಕಾಸ್ ಅಂಕಗಳನ್ನು ತಂದುಕೊಡುತ್ತಿದ್ದರೆ, ಮತ್ತೊಂದೆಡೆ ಡಿಫೆಂಡಿಂಗ್ ವಿಭಾಗದಲ್ಲಿ ಪಾರ್ಥಿಬನ್ ಆಕ್ರಮಣಕಾರಿಯಾಗಿದ್ದರು. ಪಾರ್ಥಿಬನ್ 7 ಟ್ಯಾಕಲ್ ಪಾಯಿಂಟ್ ಪಡೆಯುವ ಮೂಲಕ ಮಿಂಚಿದರೆ, ಇವರಿಗೆ ಉತ್ತಮವಾಗಿ ಸಾಥ್ ನೀಡಿದ ಸೌರಭ್ ನಂದಲ್, 5 ಟ್ಯಾಕಲ್ ಪಡೆದರು.

ಬೆಂಗಳೂರು ಬುಲ್ಸ್‌ನ ಬಲಿಷ್ಟ ರಕ್ಷಣಾ ಪಡೆಯನ್ನು ಭೇದಿಸಲು ಡಬಾಂಗ್ ಡೆಲ್ಲಿ ರೈಡರ್ ಗಳು ಮಾಡಿದ ಪ್ರಯತ್ನ ವಿಫಲವಾಯಿತು. ಡಬಾಂಗ್ ಡೆಲ್ಲಿ ಪಡೆಯನ್ನು ಎರಡು ಬಾರಿ ಆಲೌಟ್ ಮಾಡಿದರೆ, ಡೆಲ್ಲಿ ತಂಡಕ್ಕೆ ಒಮ್ಮೆಯೂ ಎದುರಾಳಿಯನ್ನು ಆಲೌಟ್ ಮಾಡಲು ಸಾಧ್ಯವಾಗಲಿಲ್ಲ.

ಆಟದ ದ್ವಿತೀಯಾರ್ಧದಲ್ಲಿ ಕೂಡ ದಬಾಂಗ್‌ ಡೆಲ್ಲಿ ತನ್ನ ಲಯವನ್ನು ಕಂಡುಕೊಳ್ಳಲಿಲ್ಲ. ಬುಲ್ಸ್ ಸೇನೆ ಪಾಯಿಂಟ್‌ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಯಿತು. ಭರತ್, ವಿಕಾಸ್ ಬಹುತೇಕ ರೈಡಿಂಗ್‌ನಲ್ಲಿಯೂ ಯಶಸ್ವಿಯಾದರು.

ಇಡೀ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 17 ಟ್ಯಾಕಲ್ ಪಾಯಿಂಟ್ ಗಳಿಸಿದರೆ ದಬಾಂಗ್ ಡೆಲ್ಲಿ ಕೇವಲ 4 ಟ್ಯಾಕಲ್ ಪಾಯಿಂಟ್ ಗಳಿಸಿತು. ಬುಲ್ಸ್ 30 ರೈಡಿಂಗ್ ಪಾಯಿಂಟ್ ಗಳಿಸಿದರೆ, ಡೆಲ್ಲಿ 20 ರೈಡಿಂಗ್ ಪಾಯಿಂಟ್ ಪಡೆಯಲು ಮಾತ್ರ ಯಶಸ್ವಿಯಾಯಿತು.

ಜೈಪುರ ಪಿಂಕ್ ಪಾಂಥರ್ಸ್ ವಿರುದ್ಧ ಮುಂದಿನ ಪಂದ್ಯ

ಜೈಪುರ ಪಿಂಕ್ ಪಾಂಥರ್ಸ್ ವಿರುದ್ಧ ಮುಂದಿನ ಪಂದ್ಯ

ಡೆಲ್ಲಿ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಬೆಂಗಳೂರು ಬುಲ್ಸ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಸೆಮಿಫೈನಲ್‌ನಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್ ವಿರುದ್ಧ ಸೆಣೆಸಲಿದೆ. ಡಿಸೆಂಬರ್ 15ರಂದು ರಾತ್ರಿ 7.30ಕ್ಕೆ ಈ ಪಂದ್ಯ ನಡೆಯಲಿದೆ.

ಈ ಬಾರಿಯ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಬುಲ್ಸ್ ಮತ್ತೊಂದು ಕಪ್ ಗೆಲ್ಲುವ ನಿರೀಕ್ಷಯಲ್ಲಿದೆ. ಇಂದಿನ ಆಟವನ್ನೇ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಮುಂದುವರೆಸಿದರೆ ಗೂಳಿಗಳು ಸುಲಭವಾಗಿ ಫೈನಲ್ ಪ್ರವೇಶಿಸಬಹುದಾಗಿದೆ.

Story first published: Tuesday, December 13, 2022, 21:14 [IST]
Other articles published on Dec 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X