ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Ban 1st Test: ಆತ ಫಾರ್ಮ್‌ಗೆ ಮರಳಲಿದ್ದಾನೆ, ಭಾರತೀಯ ಆಟಗಾರನ ಬಗ್ಗೆ ವಾಸಿಂ ಜಾಫರ್ ದೊಡ್ಡ ಹೇಳಿಕೆ

Ind vs Ban 1st Test: Former Cricketer Wasim Jaffer Feels Rishabh Pant Will Find His Form

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಸಂಪೂರ್ಣವಾಗಿ ಸಜ್ಜಾಗಿದೆ. ಡಿಸೆಂಬರ್ 14 ರಂದು ಬುಧವಾರ ಸರಣಿಯ ಮೊದಲನೇ ಪಂದ್ಯ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ.

ಈ ಸರಣಿಯಲ್ಲಿ ರಿಷಬ್ ಪಂತ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ರಿಷಬ್ ಪಂತ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರು ಫಾರ್ಮ್ ಕಂಡುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಿಷಬ್ ಪಂತ್ ರಾಷ್ಟ್ರೀಯ ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರ ಎಂದು ಜಾಫರ್ ಹೇಳಿದ್ದಾರೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ ರಿಷಬ್ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ ಬರವನ್ನು ನೀಗಿಸಿಕೊಳ್ಳುವ ಅವಕಾಶವಿದೆ.

ಭಾರತ vs ಬಾಂಗ್ಲಾದೇಶ 1st Test: ಪಂದ್ಯದ ಸಮಯ, ಸಂಭಾವ್ಯ ಆಡುವ ಬಳಗ ಹಾಗೂ ನೇರಪ್ರಸಾರದ ಮಾಹಿತಿಭಾರತ vs ಬಾಂಗ್ಲಾದೇಶ 1st Test: ಪಂದ್ಯದ ಸಮಯ, ಸಂಭಾವ್ಯ ಆಡುವ ಬಳಗ ಹಾಗೂ ನೇರಪ್ರಸಾರದ ಮಾಹಿತಿ

ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ನಂತರ, ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಗೆ ಅವರು ವಿಶ್ರಾಂತಿ ಪಡೆದರು. ಸಣ್ಣ ವಿರಾಮದ ನಂತರ ಅವರು ಕ್ರಿಕೆಟ್‌ಗೆ ಮರಳುತ್ತಿರುವುದು ಫಾರ್ಮ್ ಕಂಡುಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ.

ವಿರಾಮದ ನಂತರ ಪಂತ್‌ಗೆ ವಿಶ್ವಾಸ

ವಿರಾಮದ ನಂತರ ಪಂತ್‌ಗೆ ವಿಶ್ವಾಸ

ಒಂದು ವಾರಗಳ ಕಾಲ ವಿಶ್ರಾಂತಿ ಪಡೆದಿರುವುದರಿಂದ ರಿಷಬ್ ಪಂತ್ ಆತ್ಮವಿಶ್ವಾಸದಲ್ಲಿದ್ದಾರೆ ಎಂದರು. ಟಿ20 ಮತ್ತು ಏಕದಿನ ಕ್ರಿಕಟ್‌ನಲ್ಲಿ ಅವರು ನಿರಾಸೆ ಮೂಡಿಸಿದ್ದಾರೆ. ಆದರೆ, ಅವರು ಕೊಂಚ ವಿಶ್ರಾಂತಿ ಪಡೆದಿರುವುದರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ವಾಪಸಾಗುವ ವಿಶ್ವಾಸದಲ್ಲಿದ್ದಾರೆ ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

"ವಿರಾಮದ ನಂತರ ಅವರ ಮನಸ್ಸು ರಿಫ್ರೆಶ್ ಆಗಿರುತ್ತದೆ ಎಂದು ನನಗೆ ಅನಿಸುತ್ತಿದೆ. ಅವರು ಟೀಮ್ ಇಂಡಿಯಾಕ್ಕೆ ಅತ್ಯಂತ ಪ್ರಮುಖ ಆಟಗಾರರಾಗಿದ್ದಾರೆ ಮತ್ತು ಅವರು ಉತ್ತಮ ಪ್ರದರ್ಶನ ನೀಡುವುದು ತಂಡಕ್ಕೆ ಅಗತ್ಯವೆಂದು ನಾನು ಭಾವಿಸುತ್ತೇನೆ." ಎಂದು ಜಾಫರ್ ಹೇಳಿದರು.

ICC Women's T20 Ranking: ವೃತ್ತಿಜೀವನದ ಅತ್ಯಧಿಕ ರೇಟಿಂಗ್ ಪಾಯಿಂಟ್ಸ್ ಗಳಿಸಿದ ಸ್ಮೃತಿ ಮಂಧಾನ

ಟೆಸ್ಟ್ ಮಾದರಿಯಲ್ಲಿ ಪಂತ್‌ ಉತ್ತಮ ಪ್ರದರ್ಶನ

ಟೆಸ್ಟ್ ಮಾದರಿಯಲ್ಲಿ ಪಂತ್‌ ಉತ್ತಮ ಪ್ರದರ್ಶನ

ಪಂತ್ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಪರವಾಗಿ ಟೆಸ್ಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ ಕೊನೆಯ ಟೆಸ್ಟ್‌ನಲ್ಲಿ ಪಂತ್‌ 111 ಎಸೆತಗಳಲ್ಲಿ 146 ರನ್ ಗಳಿಸಿ ಮಿಂಚಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿಯಾಗಿ ಆಡುವ ಪಂತ್ ಸ್ವಭಾವ ಭಾರತಕ್ಕೆ ಅನುಕೂಲಕರವಾಗಲಿದೆ. ನಾಯಕ ಕೆಎಲ್ ರಾಹುಲ್ ಕೂಡ ಆಕ್ರಮಣಕಾರಿಯಾಗಿ ಆಡುವ ಸುಳಿವು ನೀಡಿದ್ದಾರೆ.

ಪೂಜಾರ, ಕೊಹ್ಲಿ ಮೇಲೆ ಕೂಡ ನಿರೀಕ್ಷೆ

ಪೂಜಾರ, ಕೊಹ್ಲಿ ಮೇಲೆ ಕೂಡ ನಿರೀಕ್ಷೆ

ಪಂತ್ ಹೊರತುಪಡಿಸಿ, ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಮೇಲೆ ಕೂಡ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪೂಜಾರ ದೇಶೀಯ ಟೂರ್ನಿ ಮತ್ತು ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಕ್ಲಾಸ್ ಫಾರ್ಮ್ ಪ್ರದರ್ಶಿಸಿದ ಬಳಿಕ ಅವರು ಭಾರತ ತಂಡಕ್ಕೆ ಮತ್ತೆ ಆಯ್ಕೆಯಾಗಿದ್ದಾರೆ. ಅವರಿಗೆ ಉಪನಾಯಕನ ಜವಾಬ್ದಾರಿ ಕೂಡ ನೀಡಲಾಗಿದೆ.

ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಫಾರ್ಮ್‌ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ, ಸೀಮಿತ ಮಾದರಿಯಲ್ಲಿ ಅವರು ಫಾರ್ಮ್ ಕಂಡುಕೊಂಡಿದ್ದು ಎರಡು ಶತಕಗಳನ್ನು ಸಿಡಿಸಿದ್ದಾರೆ.

"ಪೂಜಾರ, ಕೊಹ್ಲಿ ಮತ್ತು ಪಂತ್ ಅವರ ಪ್ರದರ್ಶನಗಳು ಬಹಳ ಮುಖ್ಯ. ಒಂದು ಪಂದ್ಯದಲ್ಲಾದರೂ ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಗಳಿಸಬೇಕು, ಪಿಚ್‌ ಬ್ಯಾಟಿಂಗ್ ಮಾಡಲು ಉತ್ತಮವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ್ದು, ಅದೇ ಫಾರ್ಮ್‌ ಅನ್ನು ಮುಂದುವರಿಸಬೇಕು" ಎಂದು ವಾಸಿಂ ಜಾಫರ್ ಹೇಳಿದರು.

Story first published: Tuesday, December 13, 2022, 20:09 [IST]
Other articles published on Dec 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X