ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

FIBA U-18 ಮಹಿಳಾ ಏಷ್ಯನ್ ಚಾಂಪಿಯನ್‌ಶಿಪ್‌ 2022: ಬೆಂಗಳೂರಿನಲ್ಲಿ ಸೆ.5ರಿಂದ ಕ್ರೀಡಾಕೂಟ ಆರಂಭ

FIBA U-18 Womens Asian Championship 2022

ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣವು ಮಹತ್ವದ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಲಿದೆ. ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಹಾಗೂ ಭಾರತೀಯ ಬಾಸ್ಕೆಟ್‌ಬಾಲ್ ಒಕ್ಕೂಟದ ಸಹಯೋಗದೊಂದಿಗೆ ಜಂಟಿಯಾಗಿ ಫಿಬಾ 18 ವರ್ಷ ವಯೋಮಿಯೊಳಗಿನ ಮಹಿಳೆಯರ ಏಷ್ಯನ್ ಚಾಂಪಿಯನ್‌ಶಿಪ್ 2022 ಕ್ರೀಡಾಕೂಟ ನಡೆಯಲಿದೆ.

ಸೋಮವಾರದಿಂದ (ಸೆ.05) ಪ್ರಾರಂಭಗೊಳ್ಳಲಿರುವ ಟೂರ್ನಿಯು ಸೆ. 11ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಬಾಸ್ಕೆಟ್‌ಬಾಲ್ ಸಂಘಗಳ ಒಕ್ಕೂಟವು ಆಯೋಜಿಸಲಾಗುತ್ತಿದ್ದು, ಇದರಲ್ಲಿ ಎ ಮತ್ತು ಬಿ ವಿಭಾಗಗಳನ್ನಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಲೆಜೆಂಡರಿ ಸಿಂಗರ್‌ ಕಿಶೋರ್ ಕುಮಾರ್‌ ಮುಂಬೈ ಬಂಗಲೆಯಲ್ಲಿ ರೆಸ್ಟೋರೆಂಟ್‌ ತೆರೆಯಲಿರುವ ವಿರಾಟ್ ಕೊಹ್ಲಿಲೆಜೆಂಡರಿ ಸಿಂಗರ್‌ ಕಿಶೋರ್ ಕುಮಾರ್‌ ಮುಂಬೈ ಬಂಗಲೆಯಲ್ಲಿ ರೆಸ್ಟೋರೆಂಟ್‌ ತೆರೆಯಲಿರುವ ವಿರಾಟ್ ಕೊಹ್ಲಿ

ಅತಿಥಿ ರಾಷ್ಟ್ರ ಭಾರತವೂ ಸೇರಿದಂತೆ ನ್ಯೂಜಿಲೆಂಡ್, ಚೀನಾ, ಆಸ್ಟ್ರೇಲಿಯಾ, ಜಪಾನ್, ಕೊರಿಯಾ, ಚೈನೀಸ್ ತೈಪೆ, ಫಿಲಿಫೈನ್ಸ್‌, ಹಾಂಕಾಂಗ್, ಮಲೇಷಿಯಾ, ಇಂಡೋನೇಷಿಯ, ಮಾಲ್ಡಿವ್ಸಸ್‌, ಮಂಗೋಲಿಯಾ, ಥೈಲ್ಯಾಂಡ್, ಸಮೋವಾ ಮತ್ತು ಜೋರ್ಡಾನ್ ರಾಷ್ಟ್ರಗಳಿಂದ ಪ್ರತಿಭಾನ್ವಿತ ಆಟಗಾರರ ತಂಡಗಳು ಪಾಲ್ಗೊಳ್ಳಲಿವೆ.

ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚೀನಾ, ಇಂಡೋನೇಷಿಯಾ, ಭಾರತ, ಜಪಾನ್, ಕೊರಿಯಾ, ಚೈನೀಸ್ ತೈಪೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು 'ಎ' ವಿಭಾಗದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು. 'ಎ' ವಿಭಾಗದ 'ಎ' ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಕೊರಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ಭಾರತವು ಕಾಂಗರೂ ರಾಷ್ಟ್ರ ಆಸ್ಟ್ರೇಲಿಯಾ ವಿರುದ್ಧ ಸೋಮವಾರ(ಸೆ.05) ಸಂಜೆ ಆಡಲಿದೆ.

ಇನ್ನು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಫಿಲಿಫೈನ್ಸ್, ಸಮೋವಾ, ಮಾಲ್ಡಿವ್ಸ್ಸ್, ಹಾಂಕಾಂಗ್, ಮಲೇಷಿಯಾ, ಜೋರ್ಡಾನ್ ಮತ್ತು ಮಂಗೋಲಿಯಾ ತಂಡಗಳು ಬಿ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.

ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಅಂತರರಾಷ್ಟ್ರೀಯ ಬಾಸ್ಕೆಟ್‌ಬಾಲ್ ಕ್ರೀಡಾಕೂಟವಾಗಿದ್ದು, ಯಶಸ್ವಿಯಾಗಿಸಲು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ ಹಾಗೂ ಭಾರತೀಯ ಬಾಸ್ಕೆಟ್‌ಬಾಲ್ ಒಕ್ಕೂಟವು ಒಟ್ಟಾಗಿ ಕೈ ಜೋಡಿಸಿವೆ.

Story first published: Friday, September 2, 2022, 21:20 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X