ಐಷಾರಾಮಿ ವಸತಿ ಯೋಜನೆ ವಂಚನೆ ಜಾಲದಲ್ಲಿ ಟೆನಿಸ್ ತಾರೆ!

Posted By:

ನವದೆಹಲಿ, ನವೆಂಬರ್ 22:ಐದು ಬಾರಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್, ಟೆನಿಸ್ ತಾರೆ ಮಾರಿಯಾ ಶರಪೋವಾ ಅವರ ವಿರುದ್ಧ ದೆಹಲಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಮರಿಯಾ ಶರಪೋವಾ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದ ಐಷಾರಾಮಿ ಹೌಸಿಂಗ್ ಯೋಜನೆ ವಿಫಲವಾಗಿದ್ದು, ಗ್ರಾಹಕರಿಂದ ದೂರು ದಾಖಲಾಗಿದೆ. ಟೆನಿಸ್ ಆಟಗಾರ್ತಿ ಮರಿಯಾ ವಿರುದ್ಧ ಕೂಡಾ ತನಿಖೆ ನಡೆಯಲಿದೆ ಎಂದು ಅವರ ವಕೀಲರು ಹೇಳಿದ್ದಾರೆ.

ಪ್ರಾಜೆಕ್ಟ್ ಆರಂಭಕ್ಕೂ ಮುನ್ನವೇ ಕಂಪನಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದಿತ್ತು. ಆದರೆ, ಕಂಪನಿ ನೀಡಿದ್ದ ಆಶ್ವಾಸನೆ ಈಡೇರಿಲ್ಲದ ಕಾರಣ, ಹಣ ನೀಡಿದವರು ದೂರು ದಾಖಲಿಸಿದ್ದಾರೆ.

Maria Sharapova named in India luxury housing fraud probe

ಹೋಮ್ ಸ್ಟೆಡ್ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಹೆಸರಿನ ಈ ಕಂಪನಿಯ ಜಾಹೀರಾತಿನಲ್ಲಿ ಶರಪೋವಾ ಕಾಣಿಸಿಕೊಂಡಿದ್ದರು. ಹಾಗಾಗಿ ವಂಚನೆಗೊಳಗಾದ ವ್ಯಕ್ತಿಯೊಬ್ಬರ ಪರ ವಕೀಲರು ಶರಪೋವಾ ವಿರುದ್ಧ ಕೇಸ್ ಹಾಕಿದ್ದಾರೆ.

ಅಪಾರ್ಟ್ಮೆಂಟ್ ನಲ್ಲಿ ಟೆನಿಸ್ ಅಕಾಡೆಮಿ, ಕ್ಲಬ್ ಹೌಸ್ ಮತ್ತು ಹೆಲಿಪ್ಯಾಡ್ ಅನ್ನು ನಿರ್ಮಿಸುವುದಾಗಿ ಭರವಸೆ ನೀಡಲಾಗಿತ್ತು. 2012ರಲ್ಲೇ ಕಟ್ಟಡ ನಿರ್ಮಾಣಕ್ಕೆ ಶರಪೋವಾ ಅಡಿಗಲ್ಲು ಹಾಕಿದ್ದರು. 2016ರವೇಳೆಗೆ ಕಟ್ಟಡ ಸಂಪೂರ್ಣ ಸಿದ್ಧವಾಗಬೇಕಿತ್ತು. ಬ್ಯಾಲೆಟ್ ಬೈ ಶರಪೋವಾ ಎಂದು ಈ ಸಮುಚ್ಚಯಕ್ಕೆ ಹೆಸರಿಡಲಾಗಿದೆ. ಈಗ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.

Story first published: Wednesday, November 22, 2017, 14:43 [IST]
Other articles published on Nov 22, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ