ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

TCS World 10K: ಬೆಂಗಳೂರಿನಲ್ಲಿ ಮಳೆಯ ಅಡ್ಡಿ ನಡುವೆ ಯಶಸ್ವಿಯಾಗಿ ನಡೆದ ಮ್ಯಾರಥಾನ್, ಕೀನ್ಯಾ ಸ್ಪರ್ಧಿಗಳ ಮೇಲುಗೈ

TCS world 10k 2022

ಐಟಿ ದಿಗ್ಗಜ ಕಂಪನಿ ಟಿಸಿಎಸ್ ಪ್ರಮುಖ ಪ್ರಾಯೋಜಕತ್ವದ ವರ್ಲ್ಡ್‌ 10ಕೆ ಮ್ಯಾರಥಾನ್ 14ನೇ ಆವೃತ್ತಿಯು ಬೆಂಗಳೂರಿನಲ್ಲಿ ಭಾನುವಾರ (ಮೇ.15) ಯಶಸ್ವಿಯಾಗಿ ನಡೆದಿದೆ. ಬೆಳಗ್ಗಿನ ಜಾವದಲ್ಲಿ ನಡೆದ ಮ್ಯಾರಥಾನ್‌ಗೆ ಮಳೆ ಅಡ್ಡಿಯಾಗಿದ್ರೂ ಸಹ, ಜಗ್ಗದ ಸ್ಪರ್ಧಾಳುಗಳು ದೇಶದ ಬೃಹತ್ ಮ್ಯಾರಥಾನ್ ಕೂಟದಲ್ಲಿ ಯಶಸ್ಸಿನ ಓಟದಲ್ಲಿ ಭಾಗಿಯಾಗಿದ್ದರು.

ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ವರ್ಲ್ಡ್ ಪ್ರೀಮಿಯರ್ 10ಕೆ ರನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಟಿ. ಸಿ.ಎಸ್ ಆಯೋಜಿಸಿರುವ 10ಕೆ ರನ್ ಎಲ್ಲರ ಜೀವನದಲ್ಲಿ ಹೊಸ ಚೈತನ್ಯವನ್ನು ತರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

10 ಕೆ ರನ್ ನಲ್ಲಿ 17ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದು, ಹಿರಿಯರು, ವಿಕಲಚೇತನರು ತಮ್ಮ ಆರೋಗ್ಯ, ದೇಶಕ್ಕಾಗಿ ಹಾಗೂ ಜೀವನದ ಉತ್ಸಾಹಕ್ಕಾಗಿ ಓಡುತ್ತಿದ್ದಾರೆ. ಈ ಕಾರ್ಯಕ್ರಮ ಆಯೋಜಿಸುತ್ತಿರುವ ಟಿ.ಸಿ.ಎಸ್ ಉತ್ತಮ ಕೆಲಸ ಮಾಡಿದೆ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದ್ದಾರೆ.

ಸ್ಪರ್ಧೆಯ ಎರಡು ಸ್ವರೂಪಗಳಾದ ಆನ್ ಗ್ರೌಂಡ್ ಮತ್ತು ವರ್ಚುವಲ್ ನ ಎಲ್ಲಾ ಓಟದಲ್ಲೂ ಕ್ರೀಡಾ ಉತ್ಸುಹಕರು ಭಾಗಿಯಾಗಿದ್ರು. ಮಜ್ಜಾ ರನ್, ಚಾಂಪಿಯನ್ಸ್ ವಿತ್ ಡಿಸೆಬಿಲಿಟಿ(ಅಂಗವಿಕಲತೆ) ಮತ್ತು ಹಿರಿಯ ನಾಗರಿಕರ ಓಟವು ಸಹ ಪ್ರಮುಖ ಆಕರ್ಷಣೆಯಾಗಿತ್ತು.

ಐದು ವಿಭಾಗದಲ್ಲಿ ನಡೆಯಿತು ಓಟದ ಸ್ಪರ್ಧೆ

ಐದು ವಿಭಾಗದಲ್ಲಿ ನಡೆಯಿತು ಓಟದ ಸ್ಪರ್ಧೆ

ಕಂಠೀರವ ಸ್ಟೇಡಿಯಂನಲ್ಲಿ ನಡೆದ ವಲ್ಡ್‌ 10ಕೆ ಸ್ಪರ್ಧೆಯು ಒಟ್ಟು ಐದು ವಿಭಾಗದಲ್ಲಿ ನಡೆಯಿತು.
1. ಓಪನ್ 10K : ಬೆಳಿಗ್ಗೆ 5.30ಕ್ಕೆ ಪ್ರಾರಂಭಗೊಂಡು 7.15ರೊಳಗೆ ಮುಕ್ತಾಯ ಕಂಡಿತು
2. ವರ್ಲ್ಡ್ 10K ಮಹಿಳೆ: ಬೆಳಿಗ್ಗೆ 7.10ಕ್ಕೆ ಆರಂಭಗೊಂಡು 7.50ಕ್ಕೆ ಕೊನೆಗೊಂಡಿತು.
3. ವರ್ಲ್ಡ್ 10K ಪುರುಷರು: ಬೆಳಿಗ್ಗೆ 8ಕ್ಕೆ ಪ್ರಾರಂಭಗೊಂಡು 8.40ಕ್ಕೆ ಮುಕ್ತಾಯಗೊಂಡಿತು.
4. ಹಿರಿಯ ನಾಗರಿಕರ ಓಟ(4.5k): ಬೆಳಿಗ್ಗೆ 8.05ಕ್ಕೆ ಶುರುವಾಗಿ 9.05ಕ್ಕೆ ಕೊನೆಗೊಂಡಿತು.
5. ಮಜ್ಜಾ ರನ್ (5K): ಬೆಳಿಗ್ಗೆ 8.50ಕ್ಕೆ ಶುರುವಾಗಿ 10.30ಕ್ಕೆ ಮುಕ್ತಾಯಗೊಂಡಿತು.

ಸ್ಟೇಡಿಯಂನಲ್ಲಿ ಪಾಸ್ತಾ ರೆಡಿಮಾಡಿದ ಯದುವೀರ್ ಒಡೆಯರ್

ಸ್ಟೇಡಿಯಂನಲ್ಲಿ ಪಾಸ್ತಾ ರೆಡಿಮಾಡಿದ ಯದುವೀರ್ ಒಡೆಯರ್

TCS ವರ್ಲ್ಡ್ 10K ಬೆಂಗಳೂರು 2022 ಪಾಸ್ಟಾ ಕುಕೌಟ್‌ನಲ್ಲಿ, ITC ವಿಂಡ್ಸರ್‌ನಲ್ಲಿ ಬಿರಾ 91 ಲೈಟ್‌ನಿಂದ ನಡೆಸಲ್ಪಡುತ್ತಿದೆ (L to R), Dr. K. ಗೋವಿಂದರಾಜ್, ಅಧ್ಯಕ್ಷರು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಮತ್ತು ಬಾಸ್ಕೆಟ್‌ಬಾಲ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಉಪಾಧ್ಯಕ್ಷ-IOA ಮತ್ತು ಮೈಸೂರು ಮಹಾರಾಜ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಡಾ.ಕೆ.ಗೋವಿಂದರಾಜ್ & ಮೈಸೂರಿನ ಮಹಾರಾಜರೂ ಪಾಸ್ಟಾ ಕುಕೌಟ್‌ನಲ್ಲಿ ವಿಜೇತರಾಗಿದ್ದರು.

ಇವರಷ್ಟೇ ಅಲ್ಲದೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಡಾ. ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

ಕಾರು ಅಪಘಾತದಲ್ಲಿ ಆಂಡ್ರ್ಯೂ ಸೈಮಂಡ್ಸ್ ನಿಧನ; ಸಂತಾಪ ಸೂಚಿಸಿದ ಕ್ರಿಕೆಟ್ ಜಗತ್ತು

ಟಿಸಿಎಸ್‌ ವರ್ಲ್ಡ್‌ 10k ಬಹುಮಾನದ ಮೊತ್ತ

ಟಿಸಿಎಸ್‌ ವರ್ಲ್ಡ್‌ 10k ಬಹುಮಾನದ ಮೊತ್ತ

ಒಟ್ಟು 2,10,000 ಯುಎಸ್ ಡಾಲರ್ ಬಹುಮಾನ ನಿಧಿಯೊಂದಿಗೆ, ಒಟ್ಟಾರೆ ಮಹಿಳಾ ಮತ್ತು ಪುರುಷರ ಚಾಂಪಿಯನ್ ತಲಾ 26,000 ಯುಎಸ್ ಡಾಲರ್ ಬಹುಮಾನ ಪಡೆಯುತ್ತಾರೆ. ಭಾರತೀಯ ಪುರುಷ ಮತ್ತು ಮಹಿಳಾ ಚಾಂಪಿಯನ್ ತಲಾ 2,75,000 ರೂ. ಬಹುಮಾನದ ಮೊತ್ತದ ಜೊತೆಗೆ ತೆರಳಲಿದ್ದಾರೆ. ಇದರ ಜೊತೆಗೆ ಭಾರತೀಯ ವಿಜೇತರು ಈವೆಂಟ್‌ನಲ್ಲಿ ಗೆದ್ದರೆ ದಾಖಲೆಯ ಬೋನಸ್ 1,00,000 ರೂ.ಗಳ ಮತ್ತು ರೆಕಾರ್ಡ್‌ ಬ್ರೇಕ್ ಮಾಡಿದ್ದೇ ಆದಲ್ಲಿ 1,00,000 ರೂ.ಗಳ ದಾಖಲೆಯ ಜಾಕ್‌ಪಾಟ್‌ ಅನ್ನು ಗೆಲ್ಲುವ ಅವಕಾಶವಿತ್ತು.

ಆಂಡ್ರ್ಯೂ ಸೈಮಂಡ್ಸ್ ನಿಧನ: ಆಲ್‌ರೌಂಡರ್ ಎಂದು ವ್ಯಾಖ್ಯಾನಿಸುವ ಖಚಿತ ಅಂಕಿ-ಸಂಖ್ಯೆಗಳು, ಸಾಧನೆಗಳು

10ಕೆ ಮ್ಯಾರಥಾನ್ ಸ್ಪರ್ಧೆಯಲ್ಲಿ ಹಿರಿಯ ವಯಸ್ಸಿನ ವ್ಯಕ್ತಿ ಮತ್ತು ಆತನ ಮಗಳು ಪೂರ್ಣವಾಗಿ ಓಟವನ್ನ ಪೂರೈಸಿ ಪದಕ ಗೆದ್ದಿದ್ದು ಸಹ ವಿಶೇಷವಾಗಿತ್ತು.

ಪುರುಷ ಮತ್ತು ಮಹಿಳಾ ಮ್ಯಾರಥಾನ್‌ನಲ್ಲಿ ಕೀನ್ಯಾ ಸ್ಪರ್ಧಿಗಳ ಮೇಲುಗೈ

ಪುರುಷ ಮತ್ತು ಮಹಿಳಾ ಮ್ಯಾರಥಾನ್‌ನಲ್ಲಿ ಕೀನ್ಯಾ ಸ್ಪರ್ಧಿಗಳ ಮೇಲುಗೈ

ಟಿಸಿಎಸ್‌ ವರ್ಲ್ಡ್ 10K ಬೆಂಗಳೂರು 2022 ರಲ್ಲಿ ಒಟ್ಟಾರೆ ಪುರುಷರ ಸ್ಪರ್ಧೆಯಲ್ಲಿ ಕೀನ್ಯಾದ ನಿಕೋಲಸ್ ಕಿಪ್ಕೋರಿರ್ 00:27:38 ಸೆಕೆಂಡುಗಳಲ್ಲಿ ಅಂತಿಮ ಗೆರೆಯನ್ನು ದಾಟಿದರು.

ಟಿಸಿಎಸ್‌ ವರ್ಲ್ಡ್ 10K ಮಹಿಳಾ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೀನ್ಯಾದ ಐರಿನ್ ಚೆಪ್ಟೈ ಅವರು 00:33:35 ಸೆಕೆಂಡುಗಳಲ್ಲಿ ಅಂತಿಮವಾಗಿ ಗೆಲುವಿ ಗುರಿ ದಾಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ಭಾರತೀಯ ಪುರುಷರ ಪ್ರಶಸ್ತಿಯನ್ನು ವಿಜೇತ ಅಭಿಷೇಕ್ ಪಾಲ್ 30:05 ಸೆಕೆಂಡುಗಳಲ್ಲಿ ಅಂತಿಮ ಗೆರೆಯನ್ನು ದಾಟಿದರು. ಜೊತೆಗೆ ಭಾರತೀಯ ಮಹಿಳೆಯರ ಪ್ರಶಸ್ತಿಯನ್ನ ಪಾರುಲ್ ಚೌಧರಿ 00:34:38 ಸೆಕೆಂಡ್‌ಗಳಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

Story first published: Sunday, May 15, 2022, 17:14 [IST]
Other articles published on May 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X