ಟೋಕಿಯೋ ಒಲಿಂಪಿಕ್ಸ್: ಪದಕ ಗೆಲ್ಲಲು ಕತ್ತಿ ಹಿಡಿದು ಸಜ್ಜಾದ ಭವಾನಿ ದೇವಿ

26ರ ಹರೆಯದ ಭವಾನಿ ದೇವಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್(ಕತ್ತಿವರಸೆ)ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಸಾಕಷ್ಟು ಕಠಿಣ ಅಭ್ಯಾಸವನ್ನು ನಡೆಸಿರುವ ಭವಾನಿ ಈ ಬಾರಿ ಭಾರತಕ್ಕೆ ಒಲಿಂಪಿಕ್ಸ್ ಪದಕವನ್ನು ತರುವ ಗುರಿಯನ್ನು ಹೊಂದಿದ್ದಾರೆ.

ಕತ್ತಿವರಸೆ ಭಾರತದಲ್ಲಿ ಐತಿಹಾಸಿಕ ಹಿನ್ನೆಲೆಯನ್ನು ಕೂಡ ಇದು ಹೊಂದಿದೆ. ಆದರೆ ಒಲಿಂಪಿಕ್ಸ್‌ನಲ್ಲಿ ಆಡುವ ಫೆನ್ಸಿಂಗ್ ಹಾಗೂ ಭಾರತದ ಸಾಂಪ್ರದಾಯಿಕ ಕತ್ತಿವರಸೆಗೆ ಸಾಕಷ್ಟು ಭಿನ್ನತೆಯಿದೆ. ಹೀಗಾಗಿ ಅಂತಾರಾಷ್ಟ್ರೀಯ ಪಟ್ಟದಲ್ಲಿ ಈ ಕ್ರೀಡೆಯಲ್ಲಿ ಭಾರತೀಯರಿಂದ ಹೆಚ್ಚಿನ ಸಾಧನೆಗಳು ಆಗಿಲ್ಲ. ಈಗ ಭವಾನಿ ದೇವಿ ಈ ನಿಟ್ಟಿನಲ್ಲಿ ಹೆಜ್ಜೆಯಿರಿಸಿದ್ದಾರೆ.

ಫೆನ್ಸಿಂಗ್ ಸೇರಿದ ಹಿಂದೆ ಕುತೂಹಲಕಾರಿ ಘಟನೆ

ಫೆನ್ಸಿಂಗ್ ಸೇರಿದ ಹಿಂದೆ ಕುತೂಹಲಕಾರಿ ಘಟನೆ

ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ಕ್ರೀಡಾಕೂಟ ಎನಿಸಿರುವ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗೆ ಇಳಿಯಲು ಸಜ್ಜಾಗಿರುವ ಭವಾನಿ ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿರುವ ಹಿಂದೆ ಕುತೂಹಲಕಾರಿ ಘಟನೆಯಿದೆ. ಭವಾನಿದೇವಿ ಯಾವುದೋ ಐತಿಹಾಸಿಕ ಕತೆಯಿಂದ ಪ್ರೇರಣೆಗೊಂಡು ಈ ಕತ್ತಿವರಸೆ ಆರಂಭಿಸಿದ್ದಲ್ಲ. ಐತಿಹಾಸಿಕ ಧಾರಾವಾಹಿಗಳು ಅಥವಾ ಮಹಾಭಾರತದಂತಾ ಪೌರಾಣಿಕ ಧಾರಾವಹಿಗಳಿಂದಲೂ ಭವಾನಿ ಪ್ರೇರಣೆ ಪಡೆದು ಸೇರಿಕೊಂಡಿದ್ದಲ್ಲ. ಬದಲಿಗೆ ತರಗತಿಯನ್ನು ತಪ್ಪಿಸಿಕೊಳ್ಳಲೆಂದು ಈ ಕ್ರೀಡೆಗೆ ಸೇರಿಕೊಂಡಿದ್ದರು.

ಕುತೂಹಲಕಾರಿ ಘಟನೆ ಬಿಚ್ಚಿಟ್ಟ ಭವಾನಿ ದೇವಿ ತಾಯಿ

ಕುತೂಹಲಕಾರಿ ಘಟನೆ ಬಿಚ್ಚಿಟ್ಟ ಭವಾನಿ ದೇವಿ ತಾಯಿ

ಐಎಎನ್‌ಎಸ್‌ಗೆ ಸುದ್ಧಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಭವಾನಿ ದೇವಿ ಅವರ ತಾಯಿ ಸಿಎ ರಮಣಿ ಈ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿದ್ದಾರೆ. "ಮುರುಗಾ ಧನುಷ್ಕೋಡಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಸೇರಿಕೊಳ್ಳುವಂತೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಭವಾನಿ ಸ್ಕ್ವಾಶ್ ಹಾಗೂ ಫೆನ್ಸಿಂಗ್‌ಗೆ ಕೇವಲ ತರಗತಿಯನ್ನು ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಸೇರಿಕೊಂಡಿದ್ದಳು" ಎಂದು ಅವರು ವಿವರಿಸಿದ್ದಾರೆ.

ಎಂಎ ಪದವೀಧರೆ ಭವಾನಿ

ಎಂಎ ಪದವೀಧರೆ ಭವಾನಿ

26ರ ಹರೆಯದ ಭವಾನಿ ಈಗ ಎಂಬಿಎ ಪದವೀಧರೆಯಾಗಿದ್ದು ವಿದೇಶದಲ್ಲಿ ಫೆನ್ಸಿಂಗ್ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅರ್ಹತೆಯನ್ನು ಗಿಟ್ಟಿಸಿಕೊಂಡ ಭಾರತದ ಪ್ರಥಮ ಫೆನ್ಸರ್ ಎನಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭವಾನಿ ಪ್ರದರ್ಶನದ ಮೇಲೆ ಭಾರತೀಯರ ಕುತೂಹಲದ ಚಿತ್ತವಿರಲಿದೆ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, July 15, 2021, 20:13 [IST]
Other articles published on Jul 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X