ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಂಟರ್ ಒಲಿಂಪಿಕ್ಸ್: ಬುಧವಾರ ಗೆದ್ದ ಪದಕಗಳ ಸಂಪೂರ್ಣ ಪಟ್ಟಿ

Winter Olympics 2022: details of all medals won on wednessday, February 9

ಚಳಿಗಾಲದ ಒಲಿಂಪಿಕ್ಸ್ ಬೀಜಿಂಗ್‌ನಲ್ಲಿ ನಡೆಯುತ್ತಿದ್ದು ಬುಧವಾರ ಕೂಡ ಕೆಲ ಪದಕಗಳನ್ನು ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ. ಹಾಗಾದರೆ ಬುಧವಾರ ಯಾವ ಕ್ರೀಡಾ ವಿಭಾಗದಲ್ಲಿ ಯಾವೆಲ್ಲಾ ಆಟಗಾರರು ಪದಕ ಜಯಿಸಿದ್ದಾರೆ ಎಂಬುದರ ಬಗ್ಗೆ ನೋಡೋಣ.

ಮಹಿಳೆಯರ ಸ್ಲೇಲಂ ಸ್ಕೀಯಿಂಗ್: ಮಹಿಳೆಯರ ಸ್ಲೇಲಂ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಸ್ಲೊವಾಕಿಯಾದ ಪೆಟ್ರಾ ವ್ಲೋವಾ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರಾ ಸಾಧನೆಗೆ ಮತ್ತೊಂದು ದೊಡ್ಡ ಪ್ರಶಸ್ತಿ ದೊರೆತಂತಾಗಿದೆ. ಅಲ್ಫೈನ್ ಸ್ಕೀಯಿಂಗ್‌ನಲ್ಲಿ ಸ್ಲೊವಾಕಿಯಾ ಗೆಲ್ಲುತ್ತಿರುವ ಮೊದಲ ಚಿನ್ನದ ಪದಕ ಇದಾಗಿದೆ. ಇನ್ನು ಅಮೆರಿಕಾದ ಮೈಕೆಲಾ ಶಿಫ್ರೆನ್ ಮತ್ತೊಮ್ಮೆ ಸ್ಪರ್ಧೆಯನ್ನು ಪೂರ್ಣಗೊಳಿಸಲು ವಿಫಲವಾದರು.

ಐಪಿಎಲ್ ಮೆಗಾ ಹರಾಜು: ಎಲ್ಲಾ 10 ತಂಡಗಳ ಬಿಡ್ಡಿಂಗ್ ರಣತಂತ್ರದ ಕುತೂಹಲಕಾರಿ ಮಾಹಿತಿ!

ಇನ್ನು ಆಸ್ಟ್ರಿಯಾದ ಕ್ಯಾಥರಿನಾ ಲಿಯನ್ಸ್‌ಬರ್ಗರ್ ಮೊದಲ ಸ್ಥಾನ ಪಡೆದ ವ್ಲೋವಾ ಅವರಿಗಿಂತ 0.08 ಸೆಕೆಂಡುಗಳಷ್ಟು ಹಿಂದಿದ್ದರು. ಸ್ವಿಟ್ಜರ್ಲೆಂಡ್‌ನ ವೆಂಡಿ ಹೋಲ್ಡೆನರ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರು. ಅವರು ವ್ಲೋವಾ ಅವರಿಗಿಂತ 0.12 ಸೆಕೆಂಡುಗಳಷ್ಟು ಹಿಂದುಳಿದಿದ್ದಾರೆ.

ಫ್ರೀಸ್ಟೈಲ್ ಸ್ಕೀಯಿಂಗ್:
ಬಿಗ್ ಏರ್(ಪುರುಷರ ವಿಭಾಗ): ಪುರುಷರ ಫ್ರೀಸ್ಟೈಲ್ ಸ್ಕೀಯಿಂಗ್‌ನ ಬಿಗ್ ಏರ್ ಈವೆಂಟ್‌ನಲ್ಲಿ ನಾರ್ವೆಯ ಬಿರ್ಕ್ ರೂಡ್ ಒಲಂಪಿಕ್ಸ್‌ನ ಮೊದಲ ಚಿನ್ನವನ್ನು ಗೆದ್ದುಕೊಂಡಿದ್ದಾರೆ. ಇತ್ತೀಚೆಗಷ್ಟೇ ತಂದೆಯನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡ ಅವರು ಬಳಿಕ ಮೊಣಕಾಲು ಗಾಯಕ್ಕೆ ಕೂಡ ತುತ್ತಾಗಿದ್ದರು. ಈ ಎಲ್ಲಾ ಸಂಕಷ್ಟಗಳಿಂದ ಹೊರಬಂದ ಬಿರ್ಕ್ ರೂಡ್ ಚಾಂಪಿಯನ್ ಆಗಿ ಮೆರೆದಿದ್ದಾರೆ. ರೂಡ್ ಎರಡು ವಿಂಟರ್ ಗೇಮ್ಸ್‌ನಲ್ಲಿ ಬಿಗ್ ಏರ್ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರೆ ನಾಲ್ಕು ವಿಶ್ವಕಪ್ ಗೆಲುವುಗಳನ್ನು ಕೂಡ ಹೊಂದುದ್ದಾರೆ. ಆದರೆ 2019 ರಿಂದ ಕೇವಲ ಒಂದು ಪದಕ ಮಾತ್ರವೇ ಅವರ ಮುಡಿಗೇರಿತ್ತು. ರೂಡ್ ಅವರ ಅಂತಿಮ ಸ್ಕೋರ್ 187.75 ಆಗಿದ್ದರೆ ಬೆಳ್ಳಿ ಪದಕ ಗೆದ್ದ ಕಾಲ್ಬಿ ಸ್ಟೀವನ್ಸನ್ 183 ಅಂಕ ಗಳಿಸಿದ್ದರು. ಸ್ವೀಡಿಷ್ ಅನುಭವಿ ಹೆನ್ರಿಕ್ ಹರ್ಲಾಟ್ 181 ಅಂಕ ಪಡೆದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

1000 ಏಕದಿನ ಪಂದ್ಯವನ್ನಾಡಿದ ಭಾರತ: ವೆಂಕಟೇಶ್ ಪ್ರಸಾದ್ ಪ್ರಕಾರ ಸಾರ್ವಕಾಲಿಕ ಬೆಸ್ಟ್ ಪ್ಲೇಯಿಂಗ್ 111000 ಏಕದಿನ ಪಂದ್ಯವನ್ನಾಡಿದ ಭಾರತ: ವೆಂಕಟೇಶ್ ಪ್ರಸಾದ್ ಪ್ರಕಾರ ಸಾರ್ವಕಾಲಿಕ ಬೆಸ್ಟ್ ಪ್ಲೇಯಿಂಗ್ 11

ಸ್ನೋಬೋರ್ಡ್:

ಇನ್ನು ಈ ಒಲಿಂಪಿಕ್ಸ್‌ನಲ್ಲಿ ಲಿಂಡ್ಸೆ ಜಾಕೋಬೆಲಿಸ್ ಅವರು ಅಮೆರಿಕದ ಮೊದಲ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. 36 ವರ್ಷದ ರೇಸರ್ ಈ ಬಾರಿ ಐದನೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಫ್ರಾನ್ಸ್‌ನ ಕ್ಲೋಯ್ ಟ್ರೆಸ್ಪ್ಯೂಚ್ ಈ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದದರೆ ಕೆನಡಾದ ಮೆರಿಯೆಟಾ ಓಡಿನ್ ಕಂಚಿನ ಪದಕ ಗೆದ್ದಿದ್ದಾರೆ.

ಇನ್ನು ಪದಕ ಪಟ್ಟಿಯಲ್ಲಿ ನಾಲ್ಕು ಚಿನ್ನ, 1 ಬೆಳ್ಳಿ ಹಾಗೂ 4 ಕಂಚಿನ ಪದಲ ಗೆದ್ದಿರುವ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ 4 ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದಿರುವ ಸ್ವೀಡನ್ ಎರಡನೇ ಸ್ಥಾನದಲ್ಲಿದೆ. ನೆದರ್ಲ್ಯಾಂಟ್ಸ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು ಆತಿಥೇಯ ಚೀನಾ ಹಾಗೂ ಜರ್ಮನಿ ನಾಲ್ಕನೇ ಸ್ಥಾನದಲ್ಲಿದೆ.

Story first published: Wednesday, February 9, 2022, 17:40 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X