ವಿಶ್ವಕಪ್: ನ್ಯೂಜಿಲೆಂಡ್ ಧೂಳಿಪಟ ಮಾಡಿದ ದಾಖಲೆಗಳು

Posted By:

ವೆಲ್ಲಿಂಗ್ಟನ್, ಫೆ.20: ವಿಶ್ವಕಪ್ 2015 ಟೂರ್ನಿಯ 9ನೇ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಯಿತು. ಇಂಗ್ಲೆಂಡ್ ತಂಡಕ್ಕೆ ಬ್ರೆಂಡನ್ ಮೆಕಲಮ್ ಹಾಗೂ ಟಿಮ್ ಸೌಥಿ ಬಹುದಿನಗಳ ದುಃಸ್ವಪ್ನವಾಗಿ ಕಾಡಬಹುದು.

ಟಿಮ್ ಸೌಥಿ 7 ವಿಕೆಟ್ ಕಿತ್ತು ವಿಶ್ವದಾಖಲೆ ಸಮಕ್ಕೆ ನಿಂತರೆ, ನಾಯಕ ಬ್ರೆಂಡನ್ ಮೆಕಲಮ್ ತ್ವರಿತ ಗತಿಯಲ್ಲಿ ಅರ್ಧಶತಕ ಸಿಡಿಸಿ ಹೊಸ ವಿಶ್ವಕಪ್ ದಾಖಲೆ ಬರೆದರು.

| ವಿಶ್ವಕಪ್ ವಿಶೇಷ ಪುಟ

ಐಸಿಸಿ ವಿಶ್ವಕಪ್ 2015 ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಉತ್ತಮ ಬೌಲಿಂಗ್ ಪ್ರದರ್ಶಿಸಿತು. ಇಂಗ್ಲೆಂಡ್ ತಂಡ 123 ರನ್ನಿಗೆ ಆಲೌಟ್ ಆಯಿತು. ಅಲ್ಪ ಮೊತ್ತ ಚೇಸ್ ಮಾಡಿದ ಕಿವೀಸ್ ತಂಡಕ್ಕೆ ನಾಯಕ ಬ್ರೆಂಡನ್ ಮೆಕಲಮ್ ಭರ್ಜರಿ ಆರಂಭ ಒದಗಿಸಿದರು. ಮೆಕಲಮ್ 25 ಎಸೆತಗಳಲ್ಲಿ 77 ರನ್ (8 ಬೌಂಡರಿ, 7 ಸಿಕ್ಸರ್) ಚೆಚ್ಚಿದರು.

World Cup: Full list of records set by New Zealand against England in Wellington

ಸತತ ಮೂರನೇ ಗೆಲುವು ಸಾಧಿಸಿ ವಿಶ್ವಕಪ್ ಟೂರ್ನಿಯ ಫೇವರೀಟ್ ತಂಡಗಳಲ್ಲಿ ಒಂದೆನಿಸಿರುವ ನ್ಯೂಜಿಲೆಂಡ್ ಧ್ವಂಸಗೊಳಿಸಿದ ದಾಖಲೆಗಳ ಪಟ್ಟಿ

* ನಾಯಕ ಬ್ರೆಂಡನ್ ಮೆಕಲಮ್ ರಿಂದ ತ್ವರಿತ ಗತಿಯಲ್ಲಿ ಅರ್ಧಶತಕ ದಾಖಲು (18 ಎಸೆತ)
* ಬ್ರೆಂಡನ್ ಮೆಕಲಮ್ ರಿಂದ ಎರಡನೇ ಅತ್ಯಧಿಕ ಸ್ಟ್ರೈಕ್ ರೇಟ್ 308.00 (77ರನ್ 25 ಎಸೆತಗಳಲ್ಲಿ)
* ವಿಶ್ವಕಪ್ ಟೂರ್ನಿಗಳಲ್ಲಿ ಮೂರನೇ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಟಿಮ್ ಸೌಥಿ (7/33)
* ವಿಶ್ವಕಪ್ ಟೂರ್ನಿಗಳಲ್ಲಿ 7 ವಿಕೆಟ್ ಕಿತ್ತ ನಾಲ್ಕನೇ ಬೌಲರ್ ಟಿಮ್ ಸೌಥಿ(ವಿನ್ಸ್ಟನ್ ಡೇವಿಸ್(ವೆಸ್ಟ್ ಇಂಡೀಸ್), ಗ್ಲೆನ್ ಮೆಗ್ರಾ, ಆಂಡಿ ಬಿಕಲ್(ಆಸ್ಟ್ರೇಲಿಯಾ)
* ನ್ಯೂಜಿಲೆಂಡ್ ಪರ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಟಿಮ್ ಸೌಥಿ 7/33, ಏಕದಿನ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ 7 ವಿಕೆಟ್ ಕಿತ್ತ ಬೌಲರ್ ಟಿಮ್ ಸೌಥಿ.
* ವಿಶ್ವಕಪ್ ರನ್ ಚೇಸ್ ನಲ್ಲಿ ಅತ್ಯಧಿಕ ಸಿಕ್ಸ್(7) ಬಾರಿಸಿದ ಆಟಗಾರರಾದ ಮೆಕಲಮ್.
* ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300+ ಸ್ಟ್ರೈಕ್ ರೇಟ್ (50 ರನ್ ಕನಿಷ್ಠ) ನಲ್ಲಿ ರನ್ ಬಾರಿಸಿದವರಲ್ಲಿ ಮೆಕಲಮ್ ಎರಡನೇ ಸ್ಥಾನದಲ್ಲಿದ್ದಾರೆ. ಎಬಿ ಡಿ ವಿಲೆಯರ್ಸ್ (ದಕ್ಷಿಣ ಆಫ್ರಿಕಾ) 338.63.
* ನ್ಯೂಜಿಲೆಂಡ್ ತಂಡ 10ನೇ ಅತಿದೊಡ್ಡ ವಿಜಯ ದಾಖಲಿಸಿದ (226 ಎಸೆತಗಳು ಬಾಕಿ ಇರುವಂತೆ).
* ಅತಿದೊಡ್ಡ ಅಂತರ ಜಯಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ 120 ರನ್ ಮೊತ್ತ ಚೇಸ್ ಮಾಡಿ ಗೆದ್ದ ಅಂತರಗಳ ಪೈಕಿ 226 ಎಸೆತಗಳು ಬಾಕಿ ಇರುವಂತೆ ಜಯ.

ಒನ್ ಇಂಡಿಯಾ ಸುದ್ದಿ

Story first published: Friday, February 20, 2015, 14:06 [IST]
Other articles published on Feb 20, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ