ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದುಬೈನಲ್ಲಿ ಐಟಿಎಫ್‌ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದ ಅಂಕಿತಾ ರೈನಾ

Ankita Raina-Ekaterine Gorgodze pair wins ITF doubles title in Dubai

ದುಬೈ: 2020ರಲ್ಲಿ ಕೊರೊನಾ ಪಿಡುಗಿನ ಹೊರತಾಗಿಯೂ ಭಾರತದ ಟಾಪ್ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ತನ್ನ ಮೂರನೇ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ದುಬೈನಲ್ಲಿ ನಡೆದ ಇಂಟರ್ ನ್ಯಾಷನಲ್ ಟೆನಿಸ್ ಫೆಡರೇಶನ್ (ಐಟಿಎಫ್) ಡಬಲ್ಸ್‌ ಟೂರ್ನಿಯ ಫೈನಲ್‌ನಲ್ಲಿ ಜಾರ್ಜಿಯಾದ ಎಕಟೆರಿನ್ ಗೋರ್ಗೊಡ್ಜ್ ಜೊತೆ ಸ್ಪರ್ಧಿಸಿದ್ದ ಅಂಕಿತಾ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಇದು ಬಹಳ ಕಷ್ಟಕರ ವರ್ಷ, 6 ತಿಂಗಳಿನಿಂದ ಮನೆಯಲ್ಲಿರಲಿಲ್ಲ: ಹೋಲ್ಡರ್ಇದು ಬಹಳ ಕಷ್ಟಕರ ವರ್ಷ, 6 ತಿಂಗಳಿನಿಂದ ಮನೆಯಲ್ಲಿರಲಿಲ್ಲ: ಹೋಲ್ಡರ್

ಎಟಿಎಫ್‌ ಯುನೈಟೆಡ್ ಅರಬ್ ಎಮಿರೇಟ್ಸ್‌ ಡಬಲ್ಸ್ ಫೈನಲ್‌ ಸ್ಪರ್ಧೆಯಲ್ಲಿ ಭಾರತ-ಜಾರ್ಜಿಯಾ ಜೋಡಿಯಾದ ಅಂಕಿತಾ ರೈನಾ-ಕಟೆರಿನ್ ಗೋರ್ಗೊಡ್ಜ್, ಎದುರಾಳಿ ಜೋಡಿ ಸ್ಪೇನ್‌ನ ಅಲಿಯೋನಾ ಬೋಲ್ಸೊವಾ ಖಡೋನೊವ್ ಮತ್ತು ಸ್ಲೊವೇಕಿಯಾದ ಕಾಜಾ ಜುವಾನ್ ವಿರುದ್ಧ 6-4, 3-6, 10-6ರ ಜಯ ದಾಖಲಿದ್ದಾರೆ.

ಗಾಯಗೊಂಡ ವೇಗಿ ಶಾನ್ ಅಬಾಟ್ ಆಸಿಸ್ ತಂಡದಿಂದ ಹೊರಕ್ಕೆ, ಮೋಯ್ಸಿಸ್ ಸೇರ್ಪಡೆಗಾಯಗೊಂಡ ವೇಗಿ ಶಾನ್ ಅಬಾಟ್ ಆಸಿಸ್ ತಂಡದಿಂದ ಹೊರಕ್ಕೆ, ಮೋಯ್ಸಿಸ್ ಸೇರ್ಪಡೆ

'ಡಬಲ್ಸ್ ಸ್ಪರ್ಧೆ ಯಾವಾಗಲೂ ನನಗೆ ಸಿಂಗಲ್ಸ್‌ನಲ್ಲಿ ನೆರವಾಗುತ್ತಿದೆ. ಡಬಲ್ಸ್‌ನಲ್ಲಿ ಚೆನ್ನಾಗಿ ಆಡಿದ ಬಳಿಕ ನನ್ನ ಸಿಂಗಲ್ಸ್ ವೃತ್ತಿ ಜೀವನದಲ್ಲೂ ಉತ್ತಮ ಓಟ ಕಾಣುತ್ತಿದ್ದೇನೆ. ಡಬಲ್ಸ್‌ ನಿಂದ ನೀವು ಒಳ್ಳೆಯ ಆಟಗಾರರೊಂದಿಗೆ ಒಳ್ಳೆಯ ಅಭ್ಯಾಸ ಪಡೆದುಕೊಳ್ಳಬಹುದು. ಆಡೋದು, ಅಭ್ಯಾಸ ಇವೇ ಪಂದ್ಯಗಳ ವೇಳೆ ಪ್ರಭಾವ ಬೀರುವ ಸಂಗತಿಗಳು,' ಎಂದು ಪಿಟಿಐ ಜೊತೆ ಮಾತನಾಡಿದ ರೈನಾ ಹೇಳಿದ್ದಾರೆ.

Story first published: Monday, December 14, 2020, 17:22 [IST]
Other articles published on Dec 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X