ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಾರ್ಷಿಕ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ: ಸೆರೆನಾ ಹಿಂದಿಕ್ಕಿದ ನವೋಮಿ ಒಸಕಾ

Naomi Osaka Pips Serena Williams To Become World’s Highest-paid Female Athlete

ಜಪಾನ್‌ನ ಟೆನ್ನಿಸ್ ಆಟಗಾರ್ತಿ ನವೊಮಿ ಒಸಕಾ ಟೆನ್ನಿಸ್‌ ಅಂಗಳದಾಚೆ ಸಾರ್ವಕಾಲಿಕ ದಾಖಲೆಗೆ ಪಾತ್ರರಾಗಿದ್ದಾರೆ. ಮಹಿಳಾ ಟೆನ್ನಿಸ್ ಲೋಕದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ನವೊಮಿ ಒಸಕಾ ವಾರ್ಷಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದಾರೆ.

ಕಳೆದ 12 ತಿಂಗಳ ಗಳಿಕೆಯನ್ನು ಆಧಾರವಾಗಿಟ್ಟುಕೊಂಡು ಫೋರ್ಬ್ಸ್ ಮ್ಯಾಗಜಿನ್ ಈ ಲೆಕ್ಕಾಚಾರವನ್ನು ಮಾಡಿದೆ. ಅಮೆರಿಕಾದ ಸೆರೆನಾ ವಿಲಿಯಮ್ಸನ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ಹಿಂದಿಕ್ಕುವಲ್ಲಿ ಒಸಕಾ ಯಶಸ್ವಿಯಾಗಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ಪ್ರಕಾರ ಒಸಕಾ, ಸೆರೆನಾ ವಿಲಿಯಮ್ಸನ್‌ಗಿಂತ ವಾರ್ಷಿಕವಾಗಿ 1.4 ಮಿಲಿಯನ್ ಡಾಲರ್ ಹೆಚ್ಚು ಸಂಪಾದನೆ ಮಾಡಿದ್ದಾರೆ.

ಕೊಹ್ಲಿಯಿಲ್ಲ, ಆದರೆ ನಾಲ್ವರು ಭಾರತೀಯರು: ಹಾಗ್ ಹೆಸರಿಸಿದ ಹಾಲಿ ವಿಶ್ವ ಬೆಸ್ಟ್ ಟೆಸ್ಟ್ ತಂಡ ಹೇಗಿದೆ ನೋಡಿ!ಕೊಹ್ಲಿಯಿಲ್ಲ, ಆದರೆ ನಾಲ್ವರು ಭಾರತೀಯರು: ಹಾಗ್ ಹೆಸರಿಸಿದ ಹಾಲಿ ವಿಶ್ವ ಬೆಸ್ಟ್ ಟೆಸ್ಟ್ ತಂಡ ಹೇಗಿದೆ ನೋಡಿ!

ಜಪಾನ್ ಟೆನ್ನಿಸದ ತಾರೆ ಒಸಕಾ ಪ್ರೈಸ್ ವಿನ್ನಿಂಗ್ ಹಣ ಇತರ ಒಪ್ಪಂದಗಳು ಸೇರಿದಂತೆ ಕಳೆದ 12 ತಿಂಗಳಲ್ಲಿ 37.4 ಮಿಲಿಯನ್ ಡಾಲರ್ ಸಂಪಾದನೆ ಮಾಡಿದ್ದಾರೆ ಎಂದು ಫೋರ್ಬ್ಸ್ ಮ್ಯಾಗಜಿನ್ ಲೆಕ್ಕಾಚಾರ ಹಾಕಿದೆ. ಸೆರೆನಾಗೂ ಮುನ್ನ ಈ ದಾಖಲೆ ಮರಿಯಾ ಶರಫೋವಾ ಹೆಸರಿನಲ್ಲಿತ್ತು. 2015ರಲ್ಲಿ ಶರಪೋವಾ 29.7 ಮಿಲಿಯನ್ ಡಾಲರ್ ವಾರ್ಷಿಕ ಗಳಿಕೆಯನ್ನು ಮಾಡಿದ್ದರು.

1990ರ ನಂತರ ಮಹಿಳಾ ಕ್ರೀಡಾಪಟುಗಳ ಗಳಿಕೆಯನ್ನು ಫೋರ್ಬ್ಸ್ ಮ್ಯಾಗಜಿನ್ ಲೆಕ್ಕಾಚಾರ ಹಾಕುತ್ತಿದೆ. ಪ್ರತಿ ವರ್ಷವೂ ಈ ಪಟ್ಟಿಯಲ್ಲಿ ಟೆನ್ನಿಸ್ ಆಟಗಾರ್ತಿಯರೇ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿಯೂ ಇದೇ ಮುಂದುವರಿದಿದೆ. ಸಂಪೂರ್ಣ ಫೋರ್ಬ್ಸ್ ಪಟ್ಟಿ ಮುಂದಿನವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ನಾನು ಧೋನಿಯ ಅಭಿಮಾನಿ ಎಂದ ಬಾಂಗ್ಲಾದೇಶದ ಟಿ20 ನಾಯಕನಾನು ಧೋನಿಯ ಅಭಿಮಾನಿ ಎಂದ ಬಾಂಗ್ಲಾದೇಶದ ಟಿ20 ನಾಯಕ

ಜಪಾನ್‌ನ ಒಸಕಾ 2018ರಲ್ಲಿ ಯುಎಸ್‌ ಓಪನ್ ಮತ್ತು 2019ರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಚಾಂಪಿಯನ್ ಆಗಿದ್ದರು. ಬಳಿಕ ಜಾಹಿರಾತು ಲೋಕದಲ್ಲಿ ಒಸಕಾಗೆ ಅಭೂತಪೂರ್ವ ಅವಕಾಶಗಳು ಅರಸಿಕೊಂಡು ಬಂತು. ಹೀಗಾಗಿ ಕಳೆದ 12 ತಿಂಗಳಲ್ಲಿ ದಾಖಲೆಯ ಆದಾಯವನ್ನು ಜಪಾನ್‌ನ ಟೆನ್ನಿಸ್ ತಾರೆ ನವೋಮಿ ಒಸಕಾ ಗಳಿಸುವ ಮೂಲಕ ನೂತನ ದಾಖಲೆ ಮಾಡಿದ್ದಾರೆ.

Story first published: Sunday, May 24, 2020, 18:34 [IST]
Other articles published on May 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X