ಟೋಕಿಯೋ ಒಲಿಂಪಿಕ್ಸ್, ಟೆನಿಸ್: ಕರೆನ್ ಖಚಾನೋವ್ ಸೋಲಿಸಿ ಬಂಗಾರ ಗೆದ್ದ ಅಲೆಕ್ಸಾಂಡರ್ ಜ್ವೆರೆವ್

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಭಾನುವಾರ (ಆಗಸ್ಟ್ 1) ನಡೆದ ಫೈನಲ್ ಪಂದ್ಯದಲ್ಲಿ ರಷ್ಯಾದ ಕರೆನ್ ಖಚಾನೋವ್ ಸೋಲಿಸಿರುವ ಜ್ವೆರೆವ್ ಬಂಗಾರದ ಪದಕ ಜಯಿಸಿದ್ದಾರೆ. ಇದು 1992ರ ಬಳಿಕ ಜರ್ಮನಿಗೆ ಒಲಿಂಪಿಕ್ಸ್‌ ಟೆನಿಸ್‌ನಲ್ಲಿ ಬರುತ್ತಿರುವ ಮೊದಲ ಚಿನ್ನದ ಪದಕ. ಹೀಗಾಗಿ ಜ್ವೆರೆವ್ ಅಪರೂಪದ ದಾಖಲೆಗೂ ಕಾರಣರಾಗಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!

ಒಲಿಂಪಿಕ್ಸ್ ಶ್ರೇಯಾಂಕದಲ್ಲಿ 4ರಲ್ಲಿರುವ ಅಲೆಕ್ಸಾಂಡರ್ ಜ್ವೆರೆವ್ ಕರೆನ್ ಅವರು ಖಚಾನೋವ್ ಅವರನ್ನು 6-3, 6-1 ಅಂತರದ ನೇರ ಸೆಟ್‌ನಿಂದ ಸೋಲಿಸಿದ್ದಾರೆ. ಇಬ್ಬರ ಮಧ್ಯೆ 79 ನಿಮಿಷಗಳ ಕದನ ನಡೆಯಿತು. ಒಲಿಂಪಿಕ್ಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಟೆನಿಸ್ ನಲ್ಲಿ ಬಂಗಾರ ಗೆದ್ದ ಎರಡನೇ ಜರ್ಮನ್ ಆಟಗಾರ ಎಂಬ ದಾಖಲೆಗೆ ಜ್ವೆರೆವ್ ಕಾರಣರಾಗಿದ್ದಾರೆ.

ಈಜಿನಲ್ಲಿ ಐದು ಚಿನ್ನದ ಪದಕಗಳೊಂದಿಗೆ ವಿಶ್ವದಾಖಲೆ ಬರೆದ ಕೈಲೆಬ್ ಡ್ರೆಸೆಲ್ಈಜಿನಲ್ಲಿ ಐದು ಚಿನ್ನದ ಪದಕಗಳೊಂದಿಗೆ ವಿಶ್ವದಾಖಲೆ ಬರೆದ ಕೈಲೆಬ್ ಡ್ರೆಸೆಲ್

ಅಲೆಕ್ಸಾಂಡರ್ ಜ್ವೆರೆವ್ ಹೆಸರಿಗೆ ದಾಖಲೆ
ಜರ್ಮನಿಯ ಸ್ಟೆಫಿ ಗ್ರಾಫ್ ಅವರು ಪುರುಷ ಸಿಂಗಲ್ಸ್‌ನಲ್ಲಿ 1988ರ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದರು. ಅದಾಗಿ ನಾಲ್ಕು ವರ್ಷಗಳ ಬಳಿಕ ಬೋರಿಸ್ ಬೆಕರ್ ಮತ್ತು ಮೈಕೆಲ್ ಸ್ಟಿಚ್ ಅವರು ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್ಸ್ ಆಗಿ ಮಿನುಗಿದ್ದರು. ಇದಾಗಿ ಈಗ ಅಲೆಕ್ಸಾಂಡರ್ ಜ್ವೆರೆವ್ ಮತ್ತೆ ಜರ್ಮನಿಗೆ ಬಂಗಾರ ಗೆದ್ದಿದ್ದಾರೆ. ವಿಶ್ವ ಶ್ರೇಯಾಂಕದಲ್ಲಿ ನಂ.4ನೇ ಸ್ಥಾನದಲ್ಲಿರುವ ಜ್ವೆರೆವ್ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ. ಅನೇಕ ಪ್ರಮುಖ ಗ್ರ್ಯಾಂಡ್‌ಸ್ಲ್ಯಾಮ್‌ ಟೂರ್ನಿಗಳಲ್ಲಿ ಜ್ವೆರೆವ್ ಹತ್ತಿರದಲ್ಲಿ ಪ್ರಶಸ್ತಿ ಕಳೆದುಕೊಂಡಿದ್ದರು. ಆದರೆ 24ರ ಹರೆಯದ ಜ್ವೆರೆವ್ ಹೆಸರಿನಲ್ಲಿ 2018ರ ಎಟಿಪಿ ಟೂರ್ ಫೈನಲ್ ಪ್ರಶಸ್ತಿ, ನಾಲ್ಕು ಮಾಸ್ಟರ್ಸ್ ಪ್ರಶಸ್ತಿಗಳು ಇವೆ.

ನೊವಾಕ್ ಜೊಕೋವಿಕ್ ಸೋಲಿಸಿದ್ದ ಜ್ವೆರೆವ್
ವಿಶ್ವ ನಂ.1 ಟೆನಿಸ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೋವಿಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆಲ್ಲುವ ಆಸೆ ಹೊಂದಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಜೊಕೋವಿಕ್ ಅವರನ್ನು ಸೋಲಿಸಿದ್ದು ಇದೇ ಅಲೆಕ್ಸಾಂಡರ್ ಜ್ವೆರೆವ್. ಜುಲೈ 30ರಂದು ನಡೆದಿದ್ದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಜ್ವೆರೆವ್, ಜೊಕೋವಿಕ್ ಅವರನ್ನು 1-6, 6-3, 6-1ರ ಅಂತರದಲ್ಲಿ ಸೋಲಿಸಿದ್ದರು. ಹೀಗಾಗಿ ಜೊಕೋವಿಕ್ ಅವರ ಗೋಲ್ಡನ್ ಸ್ಲ್ಯಾಮ್ ಆಸೆ ಮಣ್ಣಾಗಿತ್ತು. ವಿಂಬಲ್ಸನ್, ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್ ಗೆದ್ದಿದ್ದ ಜೊಕೋವಿಕ್ ಒಲಿಂಪಿಕ್ಸ್‌ನಲ್ಲೂ ಬಂಗಾರ ಗೆದ್ದು ವಿಶ್ವದಾಖಲೆ ನಿರ್ಮಿಸುವ ಯೋಚನೆಯಲ್ಲಿದ್ದರು. ಆದರೆ ಜ್ವೆರೆವ್, ಜೊಕೋವಿಕ್ ಕನಸಿಗೆ ಬ್ರೇಕ್ ಹಾಕಿದ್ದರು. ಈ ಸೋಲಿನಿಂದ ಹತಾಶರಾದ ಜೊಕೋವಿಕ್ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲೂ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಎದುರು ಜೊಕೋವಿಕ್ ಸೋತು ಬರಿಗೈಯಲ್ಲಿ ವಾಪಸ್ಸಾಗುವಂತಾಗಿತ್ತು.

ಒಲಿಂಪಿಕ್ಸ್: ಹಾಕಿಯಲ್ಲಿ ಐತಿಹಾಸಿಕ ಸಾಧನೆಯ ಮೇಲೆ ಭಾರತ ಚಿತ್ತಒಲಿಂಪಿಕ್ಸ್: ಹಾಕಿಯಲ್ಲಿ ಐತಿಹಾಸಿಕ ಸಾಧನೆಯ ಮೇಲೆ ಭಾರತ ಚಿತ್ತ

ನಿರಾಸೆ ಅನುಭವಿಸಿದ್ದ ಜೊಕೋವಿಕ್
ವಿಶ್ವದಲ್ಲಿ 20 ಗ್ರ್ಯಾಂಡ್‌ಸ್ಲ್ಯಾಮ್‌ಗಳ ದಾಖಲೆಯಿರುವುದು ಸರ್ಬಿಯಾದ ನೊವಾಕ್ ಜೊಕೋವಿಕ್, ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಸ್ವಿಟ್ಜರ್ಲ್ಯಾಂಡ್‌ನ ರೋಜರ್ ಫೆಡರರ್ ಹೆಸರಿನಲ್ಲಿ ಮಾತ್ರ. ಈ ಅಪರೂಪದ ದಾಖಲೆಯಿರುವ ಜೊಕೋವಿಕ್ ದೀರ್ಘ ಕಾಲ ಟೆನಿಸ್ ಸಿಂಗಲ್ಸ್‌ನಲ್ಲಿ ಬೆನ್ನು ಬೆನ್ನಿಗೆ ಎರಡೆರಡು ಪಂದ್ಯಗಳನ್ನು ಸೋತಿದ್ದೇ ಇಲ್ಲ. 2019ರ ಎಟಿಪಿ ಟೂರ್ ಫೈನಲ್‌ನಲ್ಲಿ ಜೊಕೋವಿಕ್, ಆಸ್ಟ್ರಿಯನ್ ಆಟಗಾರ ಡೊಮಿನಿಕ್ ಥೀಮ್ ಮತ್ತು ರೋಜರ್ ಫೆಡರರ್ ವಿರುದ್ಧ ಸೋತಿದ್ದೇ ಕೊನೆ. ಇಲ್ಲೀವರೆಗೂ ಜೊಕೋವಿಕ್ ಜೊತೆ ಜೊತೆಗೆ ಎರಡು ಪಂದ್ಯಗಳನ್ನು ಸೋತಿದ್ದಿಲ್ಲ. ಆದರೆ ಈ ಬಾರಿ ನೊವಾಕ್‌ಗೆ ಜಾಗತಿಕ ಕ್ರೀಡೆಯಲ್ಲೇ ಮುಖಭಂಗವಾಗಿದೆ. ಮಿಶ್ರ ಡಬಲ್ಸ್‌ನಲ್ಲೂ ಸೋತಿರುವ ಜೊಕೋವಿಕ್ ಈ ಒಲಿಂಪಿಕ್ಸ್‌ನಲ್ಲಿ ಅಕ್ಷರಶಃ ಹತಾಶೆ ಅನುಭವಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, August 1, 2021, 17:19 [IST]
Other articles published on Aug 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X