ಫೆಂಗ್ ಶುಯಿ ಮೀಟೂ ಆರೋಪ; ಚೀನಾದಲ್ಲಿ ನಡೆಯಬೇಕಿದ್ದ ಎಲ್ಲಾ ಟೂರ್ನಿಗಳೂ ರದ್ದು!

ಈ ಹಿಂದೆ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ದೊಡ್ಡ ದೊಡ್ಡ ವಿವಾದಗಳನ್ನು ಸೃಷ್ಟಿಸಿದ್ದ ಮೀಟೂ ಅಭಿಯಾನ ಇದೀಗ ಕ್ರೀಡಾ ಜಗತ್ತಿಗೆ ಕಾಲಿಟ್ಟು ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿದೆ. ಈ ಮೀಟೂನಿಂದಾಗಿ ಇದೀಗ ಚೀನಾದಲ್ಲಿ ನಡೆಯಬೇಕಿದ್ದ ಎಲ್ಲಾ ಟೂರ್ನಮೆಂಟ್‌ಗಳು ರದ್ದಾಗಿವೆ.

ಹೌದು, ಚೀನಾದ ಟೆನಿಸ್ ಆಟಗಾರ್ತಿ ಫೆಂಗ್ ಶುಯಿ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಮಹಿಳಾ ಟೆನಿಸ್ ಸರ್ಕ್ಯೂಟ್ ಚೀನಾದಲ್ಲಿ ಎಲ್ಲಾ ಪಂದ್ಯಾವಳಿಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ವುಮೆನ್ಸ್ ಟೆನಿಸ್ ಅಸೋಸಿಯೇಶನ್ ಅಧ್ಯಕ್ಷ ಸ್ಟೀವ್ ಸೈಮನ್ ಬುಧವಾರ ಹೇಳಿದ್ದಾರೆ.

ಕೊರೋನಾವೈರಸ್ ಹರಡುವಿಕೆ ಮುನ್ನ ಚೀನಾ ಮತ್ತು ಹಾಂಕಾಂಗ್‍ನಲ್ಲಿ ಸುಮಾರು 11 ಟೂರ್ನಿಗಳನ್ನು ಈ ವರ್ಷ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಟೆನಿಸ್ ಆಟಗಾರ್ತಿ ಫೆಂಗ್ ಶುಯಿ ಪ್ರಕರಣ ದೊಡ್ಡ ಮಟ್ಟದ ತಿರುವು ಪಡೆದುಕೊಳ್ಳುತ್ತಿದ್ದಂತೆ ಈ ಎಲ್ಲಾ ಟೂರ್ನಿಗಳನ್ನು ರದ್ದುಗೊಳಿಸುತ್ತಿದ್ದೇವೆ ಎಂದು ವುಮೆನ್ಸ್ ಟೆನಿಸ್ ಅಸೋಸಿಯೇಶನ್ ಅಧ್ಯಕ್ಷ ಸ್ಟೀವ್ ಸೈಮನ್ ಹೇಳಿಕೆ ನೀಡಿದ್ದಾರೆ.

ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!

ಫೆಂಗ್ ಶುಯಿ ಪ್ರಕರಣದ ಕುರಿತು ಮಾತನಾಡಿರುವ ಸ್ಟೀವ್ ಸೈಮನ್ ಆಟಗಾರ್ತಿ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಾಡುತ್ತಿರುವ ಆರೋಪವನ್ನು ವಿರೋಧಿಸುತ್ತಿರುವವರ ನಡುವೆ ಉಳಿದ ಆಟಗಾರ್ತಿಯರಿಗೆ ಟೂರ್ನಿಗಳಲ್ಲಿ ಭಾಗವಹಿಸಿ ಎಂದು ನಾನು ಹೇಗೆ ಹೇಳಲಿ ಎಂದು ಸ್ಟೀವ್ ಸೈಮನ್ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಫೆಂಗ್ ಶುಯಿ ಕಳೆದ ಕೆಲ ವಾರಗಳ ಹಿಂದೆ ಮಾಡಿದ್ದ ಗಂಭೀರ ಮೀಟೂ ಆರೋಪ ಇದೀಗ ಭಾರೀ ದೊಡ್ಡ ಮಟ್ಟದ ಸಂಚಲನವನ್ನು ಹುಟ್ಟು ಹಾಕಿದ್ದು ಚೀನಾದಲ್ಲಿ ನಡೆಯಬೇಕಿದ್ದ ಟೂರ್ನಿಗಳನ್ನೇ ರದ್ದುಪಡಿಸುವ ಹಂತಕ್ಕೆ ಬಂದು ತಲುಪಿದೆ.

ಫೆಂಗ್ ಶುಯಿ ಯಾರು?

ಫೆಂಗ್ ಶೂಯಿ ಚೀನಾ ದೇಶದ ಖ್ಯಾತ ಟೆನಿಸ್ ಆಟಗಾರ್ತಿ. ಇದುವರೆಗೂ ಒಟ್ಟು 3 ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಫೆಂಗ್ ಶುಯಿ ಸದ್ಯ ಸಿಂಗಲ್ಸ್‌ನಲ್ಲಿ 189ನೇ ಶ್ರೇಯಾಂಕ ಮತ್ತು ಡಬಲ್ಸ್‌‌ನಲ್ಲಿ 248ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. 2013ರಲ್ಲಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಆಗಿದ್ದ ಫೆಂಗ್ ಶುಯಿ, 2014ರಲ್ಲಿ ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್ ಆಗಿದ್ದರು. ಈ ಬಳಿಕ ಡಬಲ್ಸ್‌‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದ ಫೆಂಗ್ ಶುಯಿ 2014ರಲ್ಲಿ ನಡೆದ ಯುಎಸ್ ಟೆನಿಸ್ ಓಪನ್ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

ಐಪಿಎಲ್: ರಿಟೈನ್ ನಂತರ ಆರ್‌ಸಿಬಿ ಅಭಿಮಾನಿಗಳಿಗೆ ಸಿರಾಜ್ ಸಂದೇಶ, ಮ್ಯಾಕ್ಸ್‌ವೆಲ್ ಭರವಸೆಐಪಿಎಲ್: ರಿಟೈನ್ ನಂತರ ಆರ್‌ಸಿಬಿ ಅಭಿಮಾನಿಗಳಿಗೆ ಸಿರಾಜ್ ಸಂದೇಶ, ಮ್ಯಾಕ್ಸ್‌ವೆಲ್ ಭರವಸೆ

ಫೆಂಗ್ ಶುಯಿ ಮಾಡಿದ ಆರೋಪವೇನು?

ನವೆಂಬರ್‌ 2ರಂದು ಟೆನಿಸ್ ಆಟಗಾರ್ತಿ ಫೆಂಗ್ ಶುಯಿ ಕಮ್ಯುನಿಸ್ಟ್ ಪಕ್ಷದ ಪ್ರಭಾವಿ ನಾಯಕನಾದ ಝಾಂಗ್ ಗೌಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಆ ದಿನದಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಧಿಕೃತ ಖಾತೆಯ ಮೂಲಕ ಈ ಆರೋಪವನ್ನು ಮಾಡಿ ಫೆಂಗ್ ಶೂಯಿ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಫೆಂಗ್ ಶುಯಿ ಬರೆದುಕೊಂಡಿದ್ದ ಆ ಪೋಸ್ಟ್ ಸಾಮಾಜಿಕ ಜಾಲತಾಣದಿಂದ ಕಣ್ಮರೆಯಾಗಿತ್ತು. ಅಷ್ಟೇ ಅಲ್ಲದೆ ಅಂತರ್ಜಾಲದಲ್ಲಿ ಎಲ್ಲಿ ಹುಡುಕಿದರೂ ಕೂಡ ಫೆಂಗ್ ಶೂಯಿ ಕುರಿತಾಗಿ ಯಾವುದೇ ಫಲಿತಾಂಶಗಳೂ ಕೂಡಾ ಲಭಿಸುತ್ತಿರಲಿಲ್ಲ. ಹೀಗೆ ಪ್ರಭಾವಿ ನಾಯಕನೋರ್ವನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮೀಟೂ ಆರೋಪವನ್ನು ಫೆಂಗ್ ಶೂಯಿ ಮಾಡಿದ್ದರು.

ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!

ಘಟನೆ ಬಳಿಕ ಕಣ್ಮರೆಯಾಗಿದ್ದ ಫೆಂಗ್ ಶುಯಿ

ಝಾಂಗ್ ಗೌಲಿ ವಿರುದ್ಧ ಮೀಟೂ ಆರೋಪ ಮಾಡಿದ ನಂತರ ಟೆನಿಸ್ ಆಟಗಾರ್ತಿ ಫೆಂಗ್ ಶುಯಿ ಸುಮಾರು 3 ವಾರಗಳ ಕಾಲ ಯಾರ ಕಣ್ಣಿಗೂ ಕೂಡ ಕಾಣಿಸಿಕೊಂಡಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿಯೂ ಫೆಂಗ್ ಶುಯಿ ಖಾತೆ ನಿಷ್ಕ್ರಿಯಗೊಂಡಿತ್ತು ಮತ್ತು ಅಂತರ್ಜಾಲದಲ್ಲಿ ಎಲ್ಲಿ ಹುಡುಕಿದರೂ ಕೂಡ ಫೆಂಗ್ ಶುಯಿ ಕುರಿತಾದ ಯಾವುದೇ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಹೀಗೆ ಫೆಂಗ್ ಶುಯಿ ಕಣ್ಮರೆಯಾಗಿರುವುದರ ಕುರಿತು ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಇದಾದ ಬಳಿಕ ದಿಢೀರನೆ ಪತ್ತೆಯಾದ ಫೆಂಗ್ ಶುಯಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್ ಜೊತೆ ಮಾತನಾಡಿದ್ದರು. ಇಷ್ಟೆಲ್ಲಾ ವಿದ್ಯಮಾನಗಳು ಜರುಗಿದ ನಂತರ ಒಲಿಂಪಿಕ್ ಸಮಿತಿ ಮತ್ತು ಚೀನಾ ಸರ್ಕಾರ ಫೆಂಗ್ ಶೂಯಿ ಪ್ರಕರಣವನ್ನು ಅಂತ್ಯಗೊಳಿಸಲು ತೀರ್ಮಾನಿಸಿತ್ತು.

For Quick Alerts
ALLOW NOTIFICATIONS
For Daily Alerts
Story first published: Thursday, December 2, 2021, 13:15 [IST]
Other articles published on Dec 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X