ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಗಮನ ಸೆಳೆದ ಪೋರನ ಕರುಣಾಜನಕ ಕತೆ!

7-year-old Archie Schiller to co-captain Australia in Boxing Day Test at MCG

ಮೆಲ್ಬರ್ನ್, ಡಿಸೆಂಬರ್ 26: ತೀವ್ರ ಕುತೂಹಲ ಮೂಡಿಸಿರುವ ಆಸ್ಟ್ರೇಲಿಯಾ vs ಭಾರತ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡಕ್ಕೆ ಸಹ ನಾಯಕನಾಗಿ 7ರ ಹರೆಯದ ಪುಟ್ಟ ಪೋರ ಆರ್ಚೀ ಷಿಲ್ಲರ್ ಆಯ್ಕೆಯಾಗಿದ್ದರು. ಡಿಸೆಂಬರ್ 26ರಂದು ಆರಂಭಗೊಂಡ ಮೆಲ್ಬರ್ನ್ ಪಂದ್ಯದ ವೇಳೆ ಆರ್ಚೀ ಕೂಡ ಆಸೀಸ್ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್: ಹಾರ್ದಿಕ್ ಪಾಂಡ್ಯ ಫುಲ್ ಫಿಟ್; ಅಶ್ವಿನ್, ಜಡೇಜಾ ಡೌಟ್!ಬಾಕ್ಸಿಂಗ್‌ ಡೇ ಟೆಸ್ಟ್: ಹಾರ್ದಿಕ್ ಪಾಂಡ್ಯ ಫುಲ್ ಫಿಟ್; ಅಶ್ವಿನ್, ಜಡೇಜಾ ಡೌಟ್!

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳು 1-1ರ ಸಮಬಲ ಸಾಧಿಸಿವೆ. ಡಿಸೆಂಬರ್ 26ರ ಬುಧವಾರ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ಭಾರತ-ಆಸ್ಟ್ರೇಲಿಯಾ ಪ್ರಮುಖ ಪಂದ್ಯಕ್ಕಾಗಿ ಮೈದಾನಕ್ಕಿಳಿದಿವೆ. ಈ ವೇಳೆ ಆರ್ಚೀ ಕೂಡ ಗಮನ ಸೆಳೆದರು.

ಭಾರತದಿಂದ ನ್ಯೂಜಿಲೆಂಡ್ ಪ್ರವಾಸ ಸಂಪೂರ್ಣ ವೇಳಾಪಟ್ಟಿಭಾರತದಿಂದ ನ್ಯೂಜಿಲೆಂಡ್ ಪ್ರವಾಸ ಸಂಪೂರ್ಣ ವೇಳಾಪಟ್ಟಿ

ಕ್ರಿಕೆಟ್ ಎಂದರೆ ಅತೀವ ಪ್ರೀತಿ ಇಟ್ಟುಕೊಂಡಿರುವ ಷಿಲ್ಲರ್ ಲೆಗ್ ಸ್ಪಿನ್ ಬೌಲರ್. ಕ್ರಿಕೆಟ್ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೇ ಸ್ವತಃ ಆರ್ಚೀಗೆ ಕರೆ ಮಾಡಿ ವಿಸ್ತೃತ ತಂಡದಲ್ಲಿ ಬಾಲಕ ಷಿಲ್ಲರ್ ಕೂಡ ಇದ್ದಾರೆ ಎಂಬುದನ್ನು ಬಾಲಕನಿಗೂ ಅವನ ಹೆತ್ತವರಿಗೂ ಖಾತರಿ ಪಡಿಸಿದ್ದಾರೆ. ಇವೆಲ್ಲದಕ್ಕೂ ಒಂದು ಕಾರಣವಿದೆ!

ಆರ್ಚೀಯ ಹೃದಯ ಹಿಂಡುವ ಕಥೆ!

ಕ್ರಿಕೆಟ್‌ ಮೇಲೆ ಜೀವ ಇಟ್ಟುಕೊಂಡಿರುವ ಆರ್ಚೀಯ ಜೀವದ ವಿಚಾರದಲ್ಲಿ ಮಾತ್ರ ದೇವರ ನಿಷ್ಕರುಣಿಯಾಗಿದ್ದಾನೆ. ಖಾಯಿಲೆಗೀಡಾಗಿರುವ ಈ ಬಾಲಕನ ಜೀವ ಈಗ ನೀರ ಮೇಲಿನ ಗುಳ್ಳೆಯಂತಾಗಿದೆ. ಬಾಲಕ ಹೆಚ್ಚು ಕಾಲ ಬದುಕುಳಿದಾನು ಎಂಬುದಕ್ಕೆ ಖಾತರಿಯಿಲ್ಲ. ಆರ್ಚಿ ಆಸೀಸ್ ತಂಡದ ಸಹನಾಯಕನಾಗಲು ಕಾರಣವಿದು.

ಮರುಗಿದ ಆಸ್ಟ್ರೇಲಿಯಾ ಕ್ರಿಕೆಟ್

ಬ್ಯಾಟ್-ಬಾಲಿನ ಆಟದ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಪುಟಾಣಿಗೆ ಹೃದಯದ ಖಾಯಿಲೆಯಿದೆ. ಆತನ ಜೀವಕ್ಕೆ ಗ್ಯಾರಂಟಿಯಿಲ್ಲ ಎಂಬುದು ತಿಳಿದಾಗ ಕ್ರಿಕೆಟ್ ಆಸ್ಟ್ರೇಲಿಯಾ ಮರುಗಿದೆ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಒಂದಿನ ನಾಯಕನಾಗುವ ಕನಸು ಕಂಡಿದ್ದ ಬಾಲಕನ ಕನಸಿನ ಬೆಂಗಾವಲಿಗೆ ಆಸೀಸ್ ನಿಂತಿದೆ. ಮೆಲ್ಬರ್ನ್ ಟೆಸ್ಟ್ ನಲ್ಲಿ ಆಸೀಸ್ ತಂಡದ ಸಹ ನಾಯಕನನ್ನಾಗಿ ಆರ್ಚೀಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಆರಿಸಿದೆ.

7 ತಿಂಗಳ ಎಳೆಗೂಸಿಗೆ ಅಂಟಿದ ಖಾಯಿಲೆ

ಆರ್ಚೀ ಷಿಲ್ಲರ್ 7 ತಿಂಗಳ ಕೂಸಿದ್ದಾಗ ಆತನಿಗೆ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿದ್ದಿದ್ದು ಪತ್ತೆಯಾಗಿತ್ತು. ಪುಟ್ಟ ಮಗುವಿದ್ದಾಗಿನಿಂದಲೇ ಆರ್ಚೀ ಹೃದಯ ಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯವಾಗಿತ್ತು. ಹುಟ್ಟಿದ 3ನೇ ತಿಂಗಳಿಗೆ, 9ನೇ ತಿಂಗಳಿಗೆ ಮತ್ತು ಕಳೆದ ವರ್ಷ ಕ್ರಿಸ್ಮಸ್ ಹೊತ್ತಿಗೆ ಹೀಗೆ ಒಟ್ಟು ಮೂರುಬಾರಿ ಆರ್ಚೀ ಹೃದಯದ ಚಿಕಿತ್ಸೆಗೆ ಒಳಗಾಗಿದ್ದಾನೆ.

7ನೇ ವರ್ಷದ ಹುಟ್ಟು ಹಬ್ಬ

ಇದೇ ಡಿಸೆಂಬರ್ 22ರಂದು ಷಿಲ್ಲರ್ 7ನೇ ಹರೆಯಕ್ಕೆ ಕಾಲಿಟ್ಟಿದ್ದಾನೆ. ಪಾಕಿಸ್ತಾನ ವಿರುದ್ಧದ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಯುಎಇಯಲ್ಲಿದ್ದಾಗಲೇ ಆಸ್ಟ್ರೇಲಿಯಾ, ಆರ್ಚಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ವಿಚಾರವನ್ನು ತಿಳಿಸಿತ್ತು. ಕೋಚ್ ಲ್ಯಾಂಗರ್ ಅವರು ಷಿಲ್ಲರ್‌ಗೆ ಕರೆ ಮಾಡಿ ತಂಡಕ್ಕೆ ಸಹ ನಾಯಕನಾಗಿ ಆಯ್ಕೆಯಾಗಿರುವ ವಿಚಾರ ತಿಳಿಸಿದ್ದರಲ್ಲದೆ, ಮೆಲ್ಬರ್ನ್ ಟೆಸ್ಟ್‌ಗೂ ಮುನ್ನ ನೀನು ತಂಡದ ಅಭ್ಯಾಸದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಮೂಲಕ ಮುಗ್ಧ ಮಗುವಿನ ಮೊಗದಲ್ಲಿ ನಲಿವಿನ ಹೂದೋಟ ನಿರ್ಮಿಸಿದ್ದರು. ಅಂದ್ಹಾಗೆ, ಈ ಪುಟಾಣಿ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಆಸೆ ವ್ಯಕ್ತಪಡಿಸಿದ್ದಾನೆ.

Story first published: Wednesday, December 26, 2018, 12:13 [IST]
Other articles published on Dec 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X