ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಯ್ಕೆ ಮಂಡಳಿ ಕಿತ್ತೆಸೆದ ಬಳಿಕ ಭಾರತ ತಂಡದಲ್ಲೂ ಪ್ರಮುಖ ಬದಲಾವಣೆಗೆ ಬಿಸಿಸಿಐ ನಿರ್ಧಾರ?

After BCCI sack selection committee BCCI look towards split captaincy in Indian cricket

ಈ ಬಾರಿಯ ಟಿ20 ವಿಶ್ವಕಪ್‌ನ ಸೆಮಿಫೈನಲ್ ಹಂತದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿ ನಿರಾಸೆ ಮೂಡಿಸಿದೆ. ಟೀಮ್ ಇಂಡಿಯಾದ ಈ ಪ್ರದರ್ಶನಕ್ಕೆ ಬಿಸಿಸಿಐ ಈಗಾಗಲೇ ಒಂದು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಚೇತನ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಪುರುಷರ ತಂಡದ ಆಯ್ಕೆ ಸಮಿತಿಯನ್ನು ಸಂಪೂರ್ಣವಾಗಿ ಕಿತ್ತು ಹಾಕಿದೆ. ನವೆಂಬರ್ 18 ಶುಕ್ರವಾರದಂದು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದ್ದು ಇದೀಗ ತಂಡದಲ್ಲಿಯೂ ಮತ್ತೊಂದು ಪ್ರಮುಖ ಬದಲಾವಣೆಯ ಮುನ್ಸೂಚನೆಗಳು ದೊರೆತಿದೆ.

ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಲೀಗ್ ಹಂತದಿಂದಲೇ ಸೋಲು ಅನುಭವಿಸಿ ಹೊರಬಿದ್ದ ಬಳಿಕ ಟೀಮ್ ಇಂಡಿಯಾ ದ್ವಿಪಕ್ಷೀಯ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸತತ ಗೆಲುವು ಸಾಧಿಸುತ್ತಾ ಬಂದಿತ್ತು. ಈ ಮಧ್ಯೆ ತಂಡದಲ್ಲಿ ಸಾಕಷ್ಟು ಪ್ರಯೋಗಗಳು ಕೂಡ ನಡೆದಿದ್ದವು. ಸಾಕಷ್ಟು ಯುವ ಆಟಗಾರರಿಗೆ ನಾಯಕತ್ವದ ಜವಾಬ್ಧಾರಿಯನ್ನು ಕೂಡ ನೀಡಲಾಗಿತ್ತು. ಆದರೆ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯತ್ವದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅದರಲ್ಲೂ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಹೀನಾಯ ಸೋಲು ಇದೀಗ ಆಯ್ಕೆ ಮಂಡಳಿಯನ್ನು ವಜಾಗೆ ಕಾರಣವಾಗಿದೆ. ಜೊತೆಗೆ ತಂಡದಲ್ಲಿಯೂ ಮಹತ್ವದ ಬದಲಾವಣೆಗೆ ಕಾರಣವಾಗುವ ಸಾಧ್ಯತೆಯಿದೆ.

ಐಪಿಎಲ್ ಹರಾಜಿನ ಬಗ್ಗೆ ಪ್ರಸ್ತಾಪಿಸಿ ಆಸ್ಟ್ರೇಲಿಯಾ ಸ್ಟಾರ್ ಆಟಗಾರನಿಗೆ ಸ್ಲೆಡ್ಜ್ ಮಾಡಿದ ಜೋಸ್ ಬಟ್ಲರ್ಐಪಿಎಲ್ ಹರಾಜಿನ ಬಗ್ಗೆ ಪ್ರಸ್ತಾಪಿಸಿ ಆಸ್ಟ್ರೇಲಿಯಾ ಸ್ಟಾರ್ ಆಟಗಾರನಿಗೆ ಸ್ಲೆಡ್ಜ್ ಮಾಡಿದ ಜೋಸ್ ಬಟ್ಲರ್

ಭಿನ್ನ ಮಾದರಿಗೆ ಭಿನ್ನ ನಾಯಕರು

ಭಿನ್ನ ಮಾದರಿಗೆ ಭಿನ್ನ ನಾಯಕರು

ಆಯ್ಕೆ ಸಮಿತಿಯನ್ನು ಬದಲಾವಣೆ ಮಾಡುವ ನಿರ್ಧಾರದ ಜೊತೆಗೆ ಬಿಸಿಸಿಐ ಟೀಮ್ ಇಂಡಿಯಾದ ನಾಯಕತ್ವದ ವಿಚಾರವಾಗಿಯೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಉತ್ಸುಕವಾಗಿದೆ ಎನ್ನಲಾಗಿದೆ. ಟೀಮ್ ಇಂಡಿಯಾ ಮೂರು ಮಾದರಿಗೆ ಭಿನ್ನ ನಾಯಕರನ್ನು ಹೊಂದುವ ಬಗ್ಗೆ ಬಿಸಿಸಿಐ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. ಮುಂದಿನ ಆಯ್ಕೆ ಮಂಡಳಿಗೆ ಬಿಸಿಸಿಐ ಟೀಮ್ ಇಂಡಿಯಾಗೆ ಭಿನ್ನ ನಾಯಕರನ್ನು ಆಯ್ಕೆ ಮಾಡುವ ಜವಾಬ್ಧಾರಿಯನ್ನು ಕೂಡ ವಹಿಸುವ ನಿಟ್ಟಿನಲ್ಲಿ ಬೆಳವಣಿಗೆಗಳು ನಡೆಯುತ್ತಿದೆ ಎನ್ನಲಾಗಿದೆ.

ಒಂದೇ ಮಾದರಿಗೆ ನಾಯಕನಾಗಿ ಮುಂದುವರಿಯುತ್ತಾರಾ ರೋಹಿತ್

ಒಂದೇ ಮಾದರಿಗೆ ನಾಯಕನಾಗಿ ಮುಂದುವರಿಯುತ್ತಾರಾ ರೋಹಿತ್

ಈ ಬೆಳವಣಿಗೆ ನಡೆಯುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಖಾಯಂ ನಾಯಕ ರೋಹಿತ್ ಶರ್ಮಾ ಅವರ ಪಾತ್ರದ ಬಗ್ಗೆಯೂ ಪ್ರಶ್ನೆಗಳು ಏಳುತ್ತವೆ. ಮೂರು ಮಾದರಿಗಳ ಪೈಕಿ ಯಾವುದಾದರೂ ಒಂದು ಮಾದರಿಗೆ ಮಾತ್ರವೇ ರೋಹಿತ್ ನಾಯಕನಾಗಿ ಮುಂದುವರಿಯುತ್ತಾರಾ ಎಂಬುದು ಕುತೂಹಲ ಮೂಡಿಸುತ್ತದೆ. ಆದರೆ ಮುಂದಿನ ವರ್ಷ ಏಕದಿನ ವಿಶ್ವಕಪ್ ಟೂರ್ನಿ ಕೂಡ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಎಚ್ಚರಿಕೆಯ ಹೆಜ್ಜೆಯನ್ನಿಡುವ ಅಗತ್ಯವಿದೆ. ಸದ್ಯದ ಮಟ್ಟಿಗೆ ಟೀಮ್ ಇಂಡಿಯಾದ ಟಿ20 ಮಾದರಿಗೆ ಪ್ರತ್ಯೇಕ ನಾಯಕನನ್ನು ಆಯ್ಕೆ ಮಾಡಿದರೆ ಏಕದಿನ ಹಾಗೂ ಟೆಸ್ಟ್ ಮಾದರಿಗೆ ರೋಹಿತ್ ಶರ್ಮಾ ಅವರೇ ಮುಂದುವರಿಯುವ ಸಾಧ್ಯತೆಯಿದೆ.

ಹೊಸ ಆಯ್ಕೆ ಸಮಿತಿಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಹೊಸ ಆಯ್ಕೆ ಸಮಿತಿಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಇನ್ನು ಬಿಸಿಸಿಐ ಭಾರತೀಯ ಪುರುಷರ ತಂಡದ ಆಯ್ಕೆ ಸಮಿತಿಯನ್ನು ಸಂಪೂರ್ಣವಾಗಿ ಬದಲಾಯಿಸುವ ನಿಟ್ಟಿನಲ್ಲಿ ಹೊಸ ಮಂಡಳಿ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಇದ್ದ ಚೇತನ್ ಶರ್ಮಾ ನೇತೃತ್ವದ ತಂಡವನ್ನು ಅವಧಿಗೆ ಮುನ್ನವೇ ವಜಾಗೊಳಿಸಲಾಗಿದೆ. ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯಲ್ಲಿ ಹರ್ವಿಂದರ್ ಸಿಂಗ್, ಸುನಿಲ್ ಜೋಶಿ ಮತ್ತು ದೇಬಾಶಿಶ್ ಮೊಹಂತಿ ಸದಸ್ಯರಾಗಿದ್ದರು.

Story first published: Saturday, November 19, 2022, 16:04 [IST]
Other articles published on Nov 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X