ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ಗೆ ಭಾರತದ ವೇಗಿಗಳನ್ನು ಆರಿಸಿದ ಅಗರ್ಕರ್; ಸಿರಾಜ್‌ಗಿಲ್ಲ ಸ್ಥಾನ

 Ajit Agarkar reveals his choice of Team India’s pace attack for the WTC final

ಜೂನ್ 18-22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದ್ದು ಟೀಮ್ ಇಂಡಿಯಾ ತಂಡ ಈಗಾಗಲೇ ಸೌತಂಪ್ಟನ್ ತಲುಪಿ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದೆ.

ಈತ ಸೆಹ್ವಾಗ್ ಹಾಗೂ ಗಿಲ್‌ಕ್ರಿಸ್ಟ್ ರೀತಿ ಎದುರಾಳಿಗಳಲ್ಲಿ ಭಯ ಹುಟ್ಟಿಸಬಲ್ಲ ಎಂದ ದಿನೇಶ್ ಕಾರ್ತಿಕ್

ಜೂನ್ 18ರಿಂದ ಆರಂಭವಾಗಲಿರುವ ಈ ಪಂದ್ಯದ ಬಗ್ಗೆ ಈಗಿನಿಂದಲೇ ನಿರೀಕ್ಷೆಗಳು ಹೆಚ್ಚಾಗುತ್ತಿದ್ದು ಕ್ರೀಡಾಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಇನ್ನು ಈ ಪ್ರತಿಷ್ಠಿತ ಪಂದ್ಯದ ಕುರಿತು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಹಾಗೂ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳನ್ನು ಆರಂಭಿಸಿದ್ದು ಯಾವ ತಂಡ ಗೆಲ್ಲಲಿದೆ ಮತ್ತು ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಊಹಿಸುತ್ತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್; ಕೊಹ್ಲಿ ಬೇಡ ಎಂದಿದ್ದ ವಿಷಯವನ್ನೇ ಕೆದಕಿದ ಲಕ್ಷ್ಮಣ್

ಇದೀಗ ಮಾಜಿ ಆಟಗಾರ ಅಜಿತ್ ಅಗರ್ಕರ್ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿದ್ದು ಟೀಮ್ ಇಂಡಿಯಾ ಪರ ಯಾವ ವೇಗಿಗಳು ಕಣಕ್ಕಿಳಿಯಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 'ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾದ ಗೆಲುವಿನಲ್ಲಿ ವೇಗಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಉತ್ತಮ ಪ್ರದರ್ಶನವನ್ನು ನೀಡಿರುವ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಆಡುವ ಬಳಗದಲ್ಲಿ ಅವಕಾಶ ನೀಡಬೇಕು. ಈ ಬಾರಿ ವಿಶೇಷವಾಗಿ ಡ್ಯೂಕ್ ಬಾಲನ್ನು ಪಂದ್ಯದಲ್ಲಿ ಬಳಸುವುದರಿಂದ ವೇಗಿಗಳಿಗೆ ಹೆಚ್ಚಿನ ಅನುಕೂಲಕರವಾಗಲಿದೆ. ಈ ಮೂವರನ್ನು ಆರಿಸಿದರೆ ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸಬಲ್ಲರು' ಎಂದು ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

Story first published: Sunday, June 6, 2021, 11:04 [IST]
Other articles published on Jun 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X