ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಡಿಯೋ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಬಿಗ್ ಸಂದೇಶ ಕೊಟ್ಟ ಹಾರ್ದಿಕ್ ಪಾಂಡ್ಯ

Team India All-rounder Hardik Pandya Shares Significant Message Ahead of the T20 Series Against South Africa; Video

ಭಾರತ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ ಹಾರ್ದಿಕ್ ಪಾಂಡ್ಯ ಅವರು ತಮ್ಮ ನಾಯಕತ್ವದ ಕೌಶಲ್ಯದಿಂದ ಎಲ್ಲರನ್ನು ಆಕರ್ಷಿಸಿದ್ದಾರೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಪ್ರಶಸ್ತಿಯನ್ನು ಶ್ರೀಮಂತ ಲೀಗ್‌ನ ತಮ್ಮ ಚೊಚ್ಚಲ ಋತುವಿನಲ್ಲಿ ನಾಯಕತ್ವ ವಹಿಸಿದ್ದರು.

2022ರ 15ನೇ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡ ತಮ್ಮ ಮೊದಲ ಋತುವಿನಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಳ್ಳುವಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರು ಪ್ರಮುಖ ಪಾತ್ರ ವಹಿಸಿದರು.

ಹಾರ್ದಿಕ್ ಪಾಂಡ್ಯರನ್ನು ಎಂಎಸ್ ಧೋನಿಯ ಜೂನಿಯರ್ ಆವೃತ್ತಿ ಎಂದ ಟೈಟನ್ಸ್ ಬೌಲರ್ಹಾರ್ದಿಕ್ ಪಾಂಡ್ಯರನ್ನು ಎಂಎಸ್ ಧೋನಿಯ ಜೂನಿಯರ್ ಆವೃತ್ತಿ ಎಂದ ಟೈಟನ್ಸ್ ಬೌಲರ್

ಹಾರ್ದಿಕ್ ಗುಜರಾತ್ ತಂಡವನ್ನು ಮುಂದೆ ನಿಂತು ಮುನ್ನಡೆಸಿದ ರೀತಿ ಅನನ್ಯವಾದದ್ದು. ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ 487 ರನ್‌ ಗಳಿಸುವುದರೊಂದಿಗೆ ತಂಡದ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಅದ್ಭುತ ಋತುವನ್ನು ಮುಗಿಸಿದರು.

ಅಲ್ಲದೇ 2022ರ ಐಪಿಎಲ್ ಪಂದ್ಯಾವಳಿಯಲ್ಲಿ ಒಟ್ಟು 8 ವಿಕೆಟ್‌ಗಳನ್ನು ಪಡೆದು, ಬಾಲ್‌ನೊಂದಿಗೂ ಅದ್ಭುತವಾಗಿ ಆಟವಾಡಿದರು. ಐಪಿಎಲ್ 2022ರ ಫೈನಲ್‌ನಲ್ಲಿನ ಅದ್ಭುತ ಆಲ್‌ರೌಂಡರ್ ಪ್ರದರ್ಶನಕ್ಕಾಗಿ 'ಪಂದ್ಯ ಪುರುಷೋತ್ತಮ' ಪ್ರಶಸ್ತಿಯನ್ನು ಗೆದ್ದುಕೊಂಡರು.

ಗುಜರಾತ್ ಟೈಟನ್ಸ್‌ನ ಚೊಚ್ಚಲ ಐಪಿಎಲ್‌ನಲ್ಲಿ ಟ್ರೋಫಿ

ಗುಜರಾತ್ ಟೈಟನ್ಸ್‌ನ ಚೊಚ್ಚಲ ಐಪಿಎಲ್‌ನಲ್ಲಿ ಟ್ರೋಫಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ಕ್ಕಿಂತ ಮುಂಚಿತವಾಗಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುವ ಹಾರ್ದಿಕ್ ಪಾಂಡ್ಯ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದ್ದರೂ ಗುಜರಾತ್ ಟೈಟನ್ಸ್‌ನ ಚೊಚ್ಚಲ ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲುವ ಮೂಲಕ ಉತ್ತರಿಸಿದರು.

ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅವರ 17/3 ಅದ್ಭುತ ಬೌಲಿಂಗ್ ಪ್ರದರ್ಶನ ಅವರ ಆಟವನ್ನು ವ್ಯಾಖ್ಯಾನಿಸುವಂತಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 9ರಿಂದ ಐದು ಪಂದ್ಯಗಳ ಟಿ20 ಸರಣಿ ಆಡಲು ಭಾರತ ಸಿದ್ಧವಾಗಿರುವಾಗ, ಆಲ್‌ರೌಂಡರ್ ಹಾದಿಕ್ ಪಾಂಡ್ಯ ತನ್ನ ಐಪಿಎಲ್ ಪ್ರದರ್ಶನವನ್ನು ಅಂತರಾಷ್ಟ್ರೀಯ ಮಟ್ಟದ ಆಟದಲ್ಲಿ ಪುನರಾವರ್ತಿಸಲು ನೋಡುವುದಾಗಿ ಹೇಳಿದ್ದಾರೆ, 'ಹಳೆಯ ಹಾರ್ದಿಕ್ ಹಿಂತಿರುಗುತ್ತಾನೆ' ಎಂದಿದ್ದಾರೆ.

ಹಳೆಯ ಹಾರ್ದಿಕ್ ಪಾಂಡ್ಯ ಹಿಂತಿರುಗುತ್ತಾನೆ

"ಹಳೆಯ ಹಾರ್ದಿಕ್ ಪಾಂಡ್ಯ ಹಿಂತಿರುಗುತ್ತಾನೆ. ಈಗ ಅಭಿಮಾನಿಗಳು ಹಿಂತಿರುಗಿದ್ದಾರೆ, ನಾನು ಪುನರಾಗಮನ ಮಾಡುವ ಸಮಯ ಬಂದಿದೆ. ಬಹಳಷ್ಟು ಪಂದ್ಯಗಳು ನಡೆಯಲಿವೆ ಮತ್ತು ನಾನು ಅದನ್ನು ಎದುರು ನೋಡುತ್ತಿದ್ದೇನೆ. ನನ್ನ ಫ್ರಾಂಚೈಸಿಗಾಗಿ ನಾನು ಏನು ಪ್ರದರ್ಶನ ನೀಡಿದ್ದೇನೆ, ಅದನ್ನು ಇಲ್ಲೂ ಮಾಡಲು ನೋಡುತ್ತೇನೆ. ನನ್ನ ದೇಶಕ್ಕಾಗಿ ನಾನು ಅದೇ ರೀತಿ ಆಡಬಲ್ಲೆ ಎಂದು ಖಚಿತಪಡಿಸಿಕೊಳ್ಳಿ," ಎಂದು ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

ಐಪಿಎಲ್‌ಗೆ ಮೊದಲು ಹಾರ್ದಿಕ್ ಪಾಂಡ್ಯ ದೀರ್ಘಕಾಲದ ಬೆನ್ನುನೋವಿನಿಂದಾಗಿ ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಫಿಟ್ನೆಸ್ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಊಹಾಪೋಹಗಳು ಇದ್ದಾಗ, ಆಲ್‌ರೌಂಡರ್ ಆಟದಿಂದ ವಿರಾಮ ತೆಗೆದುಕೊಳ್ಳಲು ಇದು ತಮ್ಮ ನಿರ್ಧಾರ ಎಂದು ಹೇಳಿದರು.

ಅವಕಾಶ ಮಾಡಿಕೊಟ್ಟಿದ್ದರಿಂದ ಬಿಸಿಸಿಐಗೆ ಧನ್ಯವಾದಗಳು

ಅವಕಾಶ ಮಾಡಿಕೊಟ್ಟಿದ್ದರಿಂದ ಬಿಸಿಸಿಐಗೆ ಧನ್ಯವಾದಗಳು

"ನಾನು ಹೊರ ನಡೆದಿದ್ದೇನೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ, ಇದು ನನ್ನ ನಿರ್ಧಾರ. ನನ್ನನ್ನು ಕೈಬಿಡಲಾಗಿದೆ ಎಂಬುದು ಬಹಳಷ್ಟು ತಪ್ಪು ಗ್ರಹಿಕೆಯಾಗಿದೆ. ನೀವು ಲಭ್ಯವಿದ್ದಾಗ ನಿಮ್ಮನ್ನು ಕೈಬಿಡಲಾಗುತ್ತದೆ. ಅವರು ನನಗೆ ದೀರ್ಘ ವಿರಾಮಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರಿಂದ ಬಿಸಿಸಿಐಗೆ ಧನ್ಯವಾದಗಳು. ನನ್ನನ್ನು ಮರಳಿ ಬರುವಂತೆ ಒತ್ತಾಯಿಸಲೂ ಇಲ್ಲ," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು.

2021ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ 28ರ ಹರೆಯದ ಹಾರ್ದಿಕ್ ಪಾಂಡ್ಯ ಕೊನೆಯ ಬಾರಿ ಭಾರತ ಪರ ಆಡಿದ್ದರು. "ನಾನು ಹಾರ್ದಿಕ್ ಪಾಂಡ್ಯ ಅವರನ್ನು ಎಂಎಸ್ ಧೋನಿಯ ಜೂನಿಯರ್ ಆವೃತ್ತಿ ಎಂದು ಕರೆಯುತ್ತೇನೆ," ಎಂದು ಗುಜರಾತ್ ಟೈಟನ್ಸ್ ಸ್ಪಿನ್ ಬೌಲರ್ ಸಾಯಿಕಿಶೋರ್ ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ಬೌಲರ್ ಗೆ ಟೀಮ್ ಇಂಡಿಯಾದಲ್ಲಿ ಅವಕಾಶ | OneIndia Kannada
ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಕೆ

ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಕೆ

28 ವರ್ಷ ವಯಸ್ಸಿನ ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವ ಮತ್ತು ಒತ್ತಡದ ಸಂದರ್ಭಗಳಲ್ಲಿ ಅವರ ಶಾಂತ ಸ್ವಭಾವದ ವರ್ತನೆಗಾಗಿ ಪಂದ್ಯಾವಳಿಯ ನಂತರ ಮಾಜಿ ಆಟಗಾರರು ಮತ್ತು ಸಹ ಆಟಗಾರರಿಂದ ಪ್ರಶಂಸೆ ಪಡೆದರು.

ಐಪಿಎಲ್ 2022ರ ಸೀಸನ್‌ಗೆ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಗುಜರಾತ್ ಟೈಟನ್ಸ್ ಎಡಗೈ ಸ್ಪಿನ್ನರ್ ಆರ್. ಸಾಯಿ ಕಿಶೋರ್, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವವನ್ನು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಕೆ ಮಾಡಿದ್ದಾರೆ.

Story first published: Friday, June 3, 2022, 18:46 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X