ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಮಂಕಿ' ಎಂದು ಹರ್ಭಜನ್ ಹೀಯಾಳಿಸಿದ್ದಕ್ಕೆ ಮಹಾ ಕುಡುಕರಾದರಂತೆ ಸೈಮಂಡ್ಸ್

ಸಿಡ್ನಿ, ನವೆಂಬರ್ 2: ಸುಮಾರು 11 ವರ್ಷದ ಹಿಂದೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 'ಮಂಕಿಗೇಟ್' ವಿವಾದವನ್ನು ಆಸ್ಟ್ರೇಲಿಯಾದ ಕ್ರಿಕೆಟಿಗ ಆಂಡ್ರೂ ಸೈಮಂಡ್ಸ್ ಮತ್ತೆ ನೆನಪಿಸಿಕೊಂಡಿದ್ದಾರೆ.

2008ರ ಜನವರಿಯಲ್ಲಿ ಸಿಡ್ನಿ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮನ್ನು ಕೆಟ್ಟ ಪದದಿಂದ ಬೈಯ್ದು, ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದ ಸೈಮಂಡ್ಸ್, ಆ ಘಟನೆ ಬಳಿಕ ತಾವು ಮದ್ಯಪಾನದ ದಾಸರಾಗಿದ್ದಾಗಿ ಹೇಳಿಕೊಂಡಿದ್ದಾರೆ.

ಭಾರತವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಆಡುತ್ತಿತ್ತು. ಆಗ ಹರ್ಭಜನ್ ಸಿಂಗ್ ತಮ್ಮನ್ನು 'ಮಂಗ' ಎಂದು ಕರೆದಿದ್ದಾಗಿ ಸೈಮಂಡ್ಸ್ ಆರೋಪಿಸಿದ್ದರು. ಈ ಆರೋಪವನ್ನು ಹರ್ಭಜನ್ ನಿರಾಕರಿಸಿದ್ದರು. ಹರ್ಭಜನ್ ಮೇಲೆ ಮೂರು ಪಂದ್ಯಗಳ ನಿಷೇಧ ಹೇರಲಾಗಿತ್ತು.

ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಸಹಾಯ ಬೇಕು: ಗವಾಸ್ಕರ್ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಸಹಾಯ ಬೇಕು: ಗವಾಸ್ಕರ್

ಆದರೆ, ಪ್ರವಾಸವನ್ನು ರದ್ದುಗೊಳಿಸಿ ಹಿಂದಿರುಗುವುದಾಗಿ ಭಾರತ ಬೆದರಿಕೆ ಒಡ್ಡಿದ್ದರಿಂದ ನಿಷೇಧವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು.

ಅಲ್ಲಿಂದಲೇ ಅವನತಿ ಆರಂಭ

ಅಲ್ಲಿಂದಲೇ ಅವನತಿ ಆರಂಭ

ಅದಾದ ಬಳಿಕವೂ ಸೈಮಂಡ್ಸ್ ಹಲವು ಕಡೆ ಈ ವಿವಾದವನ್ನು ಪ್ರಸ್ತಾಪಿಸಿದ್ದರು. 'ಹರ್ಭಜನ್ ನನ್ನನ್ನು ಎರಡು ಮೂರು ಬಾರಿ ಮಂಗ ಎಂದು ನಿಂದಿಸಿದ್ದರು' ಎಂಬುದಾಗಿ ಅವರು ಹೇಳಿದ್ದಾರೆ.

'ಆ ಘಟನೆಯ ಬಳಿಕ ನನ್ನ ಕ್ರೀಡಾ ಬದುಕಿನ ಅವನತಿಯ ಆರಂಭವಾಯಿತು' ಎಂದು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಪಾಪ ಬೂಮ್ರಾ! ಆಡಲು ಮೊಬೈಲ್ ಇಲ್ಲದೆ ಒಂಟಿಯಾದರು: ಟ್ವಿಟ್ಟರ್‌ನಲ್ಲಿ ತಮಾಷೆ

ಕಾಡಿದ ತಪ್ಪಿತಸ್ಥ ಮನೋಭಾವ

ಕಾಡಿದ ತಪ್ಪಿತಸ್ಥ ಮನೋಭಾವ

ತಮ್ಮನ್ನು ಜನಾಂಗೀಯವಾಗಿ ನಿಂದಿಸಲಾಗಿದೆ ಎಂದು ಸಹ ಆಟಗಾರರು ತಮ್ಮ ಬೆಂಬಲಕ್ಕೆ ಬರಬೇಕಾಗಿದ್ದರಿಂದ ಅವರೂ ಈ ವಿವಾದದಲ್ಲಿ ಒಳಗೊಳ್ಳಬೇಕಾಯಿತು ಎನ್ನುವ ತಪ್ಪಿತಸ್ಥ ಮನೋಭಾವ ಕಾಡಿತ್ತು.

ಇದರ ಪರಿಣಾಮವಾಗಿ ನಾನು ವಿಪರೀತವಾಗಿ ಕುಡಿಯಲು ಆರಂಭಿಸಿದ್ದೆ. ನನ್ನ ಬದುಕು ಅಲ್ಲಿಂದ ಹಾಳಾಗಲು ಆರಂಭವಾಯಿತು.

ನಾನು ಈ ವಿವಾದವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲಿಲ್ಲ. ಈ ವಿವಾದದಲ್ಲಿ ನನ್ನ ಸಹ ಆಟಗಾರರನ್ನು ಎಳೆದು ತಂದಿದ್ದಕ್ಕಾಗಿ ನನ್ನಲ್ಲಿ ತಪ್ಪಿತಸ್ಥ ಭಾವನೆ ಕಾಡತೊಡಗಿತು. ಅವರನ್ನು ಇದರಲ್ಲಿ ಎಳೆದು ತರಬಾರದಾಗಿತ್ತು ಎಂದು ಸೈಮಂಡ್ಸ್ ಹೇಳಿದ್ದಾರೆ.

ಧೋನಿ ನಿವೃತ್ತಿಯಿಲ್ಲ, ಅವರು ಏಕದಿನ ತಂಡದ ಅವಿಭಾಜ್ಯ ಅಂಗ: ವಿರಾಟ್ ಕೊಹ್ಲಿ

ಕುಡಿದು ಗಲಾಟೆ ಮಾಡಿದ್ದರು

ಕುಡಿದು ಗಲಾಟೆ ಮಾಡಿದ್ದರು

ಮದ್ಯ ಸೇವಿಸಿ ನಡೆದ ಗಲಾಟೆಯೊಂದರ ಘಟನೆ ಬಳಿಕ ವಿಶ್ವಕಪ್ ಟಿ20 ಸರಣಿಯಿಂದ ಅವರನ್ನು ತವರಿಗೆ ಮರಳಿ ಕಳುಹಿಸಲಾಗಿತ್ತು. 2009ರ ಜೂನ್‌ನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ, ಸೈಮಂಡ್ಸ್ ಅವರೊಂದಿಗಿನ ಒಪ್ಪಂದವನ್ನು ಹಿಂದಕ್ಕೆ ಪಡೆದುಕೊಂಡಿತ್ತು.

ಭಾರತದಲ್ಲಿಯೂ ಬೈಯ್ದಿದ್ದರು

ಭಾರತದಲ್ಲಿಯೂ ಬೈಯ್ದಿದ್ದರು

ಹರ್ಭಜನ್ ಸಿಂಗ್ ತಮ್ಮನ್ನು ನಿಂದಿಸಿರುವುದು ಅದೇ ಮೊದಲ ಸಲವೇನಲ್ಲ ಎಂದು ಸೈಮಂಡ್ಸ್ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

ಆ ಸರಣಿಗೂ ಮುನ್ನ ಭಾರತದಲ್ಲಿ ನಡೆದ ಸರಣಿಯ ವೇಳೆಯಲ್ಲಿಯೂ ಹರ್ಭಜನ್ ನನ್ನನ್ನು 'ಮಂಗ' ಎಂದು ಕರೆದಿದ್ದರು ಎಂಬುದಾಗಿ ಸೈಮಂಡ್ಸ್ ಹೇಳಿದ್ದಾರೆ.

'ಬಳಿಕ ಅವರ ಡ್ರೆಸ್ಸಿಂಗ್ ಕೊಠಡಿಗೆ ತೆರಳಿ, ಹರ್ಭಜನ್ ಜೊತೆ ಹೊರಗೆ ಮಾತನಾಡಬಹುದೇ ಎಂದು ಕೇಳಿದ್ದೆ. ಅವರು ಹೊರಕ್ಕೆ ಬಂದಿದ್ದರು. ಆಗ, ಈ ರೀತಿ ಕರೆಯುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂದು ಹೇಳಿದ್ದೆ' ಎಂದು ಹೇಳಿಕೊಂಡಿದ್ದಾರೆ.

ಮತ್ತೆ ಜತೆಗೂಡಿ ಆಡಿದ್ದರು

ಮತ್ತೆ ಜತೆಗೂಡಿ ಆಡಿದ್ದರು

ಆದರೆ, ಈ ಎಲ್ಲ ವಿವಾದಗಳ ಬಳಿಕವೂ ಹರ್ಭಜನ್ ಮತ್ತು ಸೈಮಂಡ್ಸ್ ಜತೆಯಾಗಿ ಆಡಿದ್ದರು. ಹರ್ಭಜನ್ ಜತೆಯಲ್ಲಿಯೇ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. ಇದಾದ ಬಳಿಕ ಅವರ ನಡುವೆ ಮತ್ತೆ ಜಗಳ ನಡೆದ ಘಟನೆಗಳು ವರದಿಯಾಗಿಲ್ಲ.

Story first published: Friday, November 2, 2018, 17:37 [IST]
Other articles published on Nov 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X