'ಮುಖ್ಯ ಆಯ್ಕೆದಾರನಾಗಿ ದಂತಕತೆಗಳ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳುತ್ತಿದ್ದೆ'

ಮುಂಬೈ: ಮುಖ್ಯ ಆಯ್ಕೆದಾರನಾಗಿದ್ದಾಗ ನಾನು ದಂತಕತೆಗಳ ವಿರುದ್ಧ ಕೂಡ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಾಜಿ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಸೋಮವಾರ (ಜೂನ್ 7) ಹೇಳಿದ್ದಾರೆ.
4 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಬೋರ್ಡ್‌ನಲ್ಲಿ ಆಯ್ಕೆದಾರರಾಗಿದ್ದ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಎಂಎಸ್‌ಕೆ ಪ್ರಸಾದ್, ತನ್ನ ಅಧಿಕಾರವಧಿ ವೇಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ನಾಯಕ ಎಂಎಸ್ ಧೋನಿಯ ನಿವೃತ್ತಿಯ ವೇಳೆ ಸವಾಲಿನ ಸನ್ನಿವೇಶ ಸೃಷ್ಠಿಯಾಗಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ ಪ್ರಸಾದ್ ಮಾತನಾಡಿದರು.
'ನೀವು ಮುಖ್ಯ ಆಯ್ಕೆದಾರ ಜವಾಬ್ದಾರಿಯಲ್ಲಿದ್ದಾಗ ಕೆಲವು ಬಾರಿ ಕ್ರಿಕೆಟ್‌ನ ದಂತಕತೆಗಳ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರುತ್ತದೆ. ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ಯೋಚಿಸಿ ನೀವು ಅಂಥ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರುತ್ತದೆ,' ಎಂದು ಪ್ರಸಾದ್ ವಿವರಿಸಿದ್ದಾರೆ.
'ಕ್ರಿಕೆಟ್‌ನ ಯಶಸ್ವಿ ಆಟಗಾರನನ್ನು ಗುರುತಿಸೋದು ಆಯ್ಕೆದಾರ ಪ್ರಮುಖ ಕೆಲಸವಾಗಿರುತ್ತದೆ. ಆಯ್ಕೆ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ಆದರೆ ನಿರ್ಧಾರಗಳನ್ನು ಕೈಗೊಳ್ಳುವಾಗ ನೀವು ಭಾವುಕರಾಗುವಂತಿರಬಾರದು,' ಎಂದು ಪ್ರಸಾದ್ ತನ್ನ ಅನುಭವಗಳನ್ನು ಹರವಿಕೊಂಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಪ್ರಸಾದ್ ಅವರ ಒಪ್ಪಂದದ ಅವಧಿ ಮುಕ್ತಾಯಗೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications