ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ನಲ್ಲಿ ಪ್ರಯೋಗ ಯಾಕೆ ಮಾಡಬೇಕಿತ್ತು? ರೋಹಿತ್ ಶರ್ಮಾ ವಿರುದ್ಧ ವೆಂಗ್‌ಸರ್ಕಾರ್ ಕಿಡಿ

ಏಷ್ಯಾಕಪ್‌ 2022ರಲ್ಲಿ ಭಾರತ ತಂಡದ ಪ್ರದರ್ಶನ ಹಲವರಿಗೆ ಅಸಮಾಧಾನ ಮೂಡಿಸಿದೆ. ಇಂದಿಗೂ ಹಲವು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪರಿಣಿತರು ಭಾರತ ತಂಡದ ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡುತ್ತಲೇ ಇದ್ದಾರೆ. ಈಗ ಭಾರತ ತಂಡದ ಮಾಜಿ ನಾಯಕ ದಿಲೀಪ್‌ ವೆಂಗ್‌ಸರ್ಕಾರ್ ಕೂಡ ಭಾರತ ಸೋಲಿಗೆ ಕಾರಣವನ್ನು ನೀಡಿದ್ದು, ರೋಹಿತ್ ಶರ್ಮಾ ನೇತೃತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಗತ್ಯಕ್ಕೂ ಮೀರಿ ಹಲವು ಪ್ರಯೋಗಗಳನ್ನು ಮಾಡಿದ್ದೆ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಅದರಲ್ಲೂ ದಿನೇಶ್ ಕಾರ್ತಿಕ್‌ರನ್ನು ಮುಖ್ಯ ಪಂದ್ಯಗಳಲ್ಲಿ ಆಡಿಸದ ಬಗ್ಗೆ ಭಾರತ ತಂಡದ ಮಾಜಿ ನಾಯಕ ವೆಂಗ್‌ಸರ್ಕಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಾಸ್ ಸೋತರೂ ನಾವು ತಲೆ ಕೆಡಿಸಿಕೊಳ್ಳಲ್ಲ: ಪಾಕ್‌ಗೆ ಎಚ್ಚರಿಕೆ ನೀಡಿದ ಶ್ರೀಲಂಕಾ ನಾಯಕಟಾಸ್ ಸೋತರೂ ನಾವು ತಲೆ ಕೆಡಿಸಿಕೊಳ್ಳಲ್ಲ: ಪಾಕ್‌ಗೆ ಎಚ್ಚರಿಕೆ ನೀಡಿದ ಶ್ರೀಲಂಕಾ ನಾಯಕ

ಏಷ್ಯಾಕಪ್‌ ಗುಂಪು ಹಂತದ ಪಾಕಿಸ್ತಾನ ವಿರುದ್ಧದ ಮೊದಲ ಎರಡು ಪಂದ್ಯದಲ್ಲಿ ಆಡಿದ್ದ ದಿನೇಶ್ ಕಾರ್ತಿಕ್, ನಂತರದ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ದಿನೇಶ್‌ ಕಾರ್ತಿಕ್‌ಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ, ಅದರಲ್ಲೂ ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಮುಖ್ಯ ಪಂದ್ಯದಲ್ಲಿ ಅವರನ್ನು ಆಡಿಸದೇ ಇರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ದಿನೇಶ್ ಕಾರ್ತಿಕ್‌ ಇರಲಿಲ್ಲ, ಎರಡೂ ಮುಖ್ಯ ಪಂದ್ಯಗಳಲ್ಲಿ ಸೋಲನ್ನಪ್ಪಿದ್ದ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿತ್ತು.

ಪ್ರಮುಖ ಟೂರ್ನಿಗಳಲ್ಲಿ ಪ್ರಯೋಗ ಅನಾವಶ್ಯಕ

ಪ್ರಮುಖ ಟೂರ್ನಿಗಳಲ್ಲಿ ಪ್ರಯೋಗ ಅನಾವಶ್ಯಕ

ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಮಾಜಿ ನಾಯಕ ದಿನೇಶ್ ಕಾರ್ತಿಕ್ ಅನುಪಸ್ಥಿತಿಯನ್ನು ಅವರು ಪ್ರಶ್ನೆ ಮಾಡಿದ್ದಾರೆ. "ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್‌ರನ್ನು ಆಯ್ಕೆ ಮಾಡಿದರು, ಆದರೆ ದಿನೇಶ್‌ ಕಾರ್ತಿಕ್‌ಗೆ ಅವಕಾಶ ನೀಡಬೇಕಿತ್ತು." ಎಂದು ಹೇಳಿದ್ದಾರೆ.

"ನೀವು ದ್ವಿಪಕ್ಷೀಯ ಸರಣಿಯಲ್ಲಿ ಪ್ರಯೋಗ ಮಾಡಬಹುದು, ಆದರೆ ಏಷ್ಯಾ ಕಪ್‌ಗಳು ಮತ್ತು ವಿಶ್ವಕಪ್‌ಗಳು ಪ್ರಮುಖ ಟೂರ್ನಿಗಳಾಗಿವೆ. ಈ ಪಂದ್ಯಾವಳಿಗಳಲ್ಲಿ, ನೀವು ಗೆಲ್ಲಬೇಕು, ಅದು ಬಹಳ ಮುಖ್ಯ." ಎಂದು ದಿಲೀಪ್ ವೆಂಗ್‌ಸರ್ಕಾರ್ ಹೇಳಿದ್ದಾರೆ.

ಟಿ20 ವಿಶ್ವಕಪ್: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ಬೂಮ್ರಾ, ಹರ್ಷಲ್ ಫಿಟ್

ರಿಷಬ್ ಪಂತ್ ಕಳಪೆ ಪ್ರದರ್ಶನ

ರಿಷಬ್ ಪಂತ್ ಕಳಪೆ ಪ್ರದರ್ಶನ

ಬಲಗೈ ಬ್ಯಾಟರ್ ಕಾರ್ತಿಕ್ ಏಷ್ಯಾ ಕಪ್‌ನಲ್ಲಿ ಭಾರತಕ್ಕಾಗಿ ಮೊದಲ ಎರಡು ಗುಂಪು ಪಂದ್ಯಗಳನ್ನು ಆಡಿದರೆ, ಎಡಗೈ ಆಟಗಾರ ರಿಷಬ್ ಪಂತ್ ಅವರನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಸೂಪರ್ 4 ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು. ಈ ಇಬ್ಬರೂ ಆಟಗಾರರು ಅಫ್ಘಾನಿಸ್ತಾನ ವಿರುದ್ಧ ಭಾರತದ ಕೊನೆಯ ಸೂಪರ್ 4 ಪಂದ್ಯವನ್ನು ಆಡಿದರು.

ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಕಾರ್ತಿಕ್ ಪಂದ್ಯಾವಳಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಪಂತ್ 14 (12), 17(13) ಮತ್ತು ಅಜೇಯ 20(16) ರನ್ ಗಳಿಸಿದರು.

ಟೂರ್ನಿಗಳಲ್ಲಿ ಪಂದ್ಯ ಗೆಲ್ಲವುದು ಮುಖ್ಯ

ಟೂರ್ನಿಗಳಲ್ಲಿ ಪಂದ್ಯ ಗೆಲ್ಲವುದು ಮುಖ್ಯ

ಏಷ್ಯಾ ಕಪ್‌ನಂತಹ ದೊಡ್ಡ ಪಂದ್ಯಾವಳಿಗಳಲ್ಲಿ ಪಂದ್ಯಗಳನ್ನು ಗೆಲ್ಲುವುದು ಪಂದ್ಯಾವಳಿಯ ನೈತಿಕತೆಯನ್ನು ಹೆಚ್ಚಿಸುತ್ತದೆ ಎಂದು ವೆಂಗ್‌ಸರ್ಕರ್ ಹೇಳಿದ್ದಾರೆ. ರೋಹಿತ್ ಶರ್ಮಾ ಮತ್ತು ತಂಡ ನಿಸ್ಸಂಶಯವಾಗಿ ವಿಶ್ವಕಪ್‌ಗಾಗಿ ಅತ್ಯುತ್ತಮ ತಂಡದ ಸಂಯೋಜನೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಆದರೆ ಏಷ್ಯಾ ಕಪ್ ಪ್ರಯೋಗಕ್ಕೆ ವೇದಿಕೆಯಾಗದಿರಬಹುದು ಎಂದು ದಿಲೀಪ್ ವೆಂಗ್‌ಸರ್ಕಾರ್ ಹೇಳಿದ್ದಾರೆ.

ನಿಸ್ಸಂಶಯವಾಗಿ, ತಂಡದ ನಿರ್ವಹಣೆಯು ಮುಂದಿನ ತಿಂಗಳ ವಿಶ್ವಕಪ್‌ಗೆ ತಮ್ಮ ಅತ್ಯುತ್ತಮ ತಂಡವನ್ನು ಹುಡುಕಲು ಪ್ರಯತ್ನಿಸುತ್ತಿರುವುದರಿಂದ ಎಲ್ಲಾ ಆಟಗಾರರಿಗೆ ಅವಕಾಶವನ್ನು ನೀಡಲು ಬಯಸುತ್ತದೆ. ಆದರೆ ಏಷ್ಯಾಕಪ್ ದೊಡ್ಡ ಟೂರ್ನಿ. "ಈ ರೀತಿಯ ಪಂದ್ಯಾವಳಿಯಲ್ಲಿ ಪಂದ್ಯಗಳನ್ನು ಗೆಲ್ಲುವುದು ತಂಡದ ನೈತಿಕತೆಗೆ ಬಹಳ ಮುಖ್ಯ. ಅಲ್ಲದೆ, ಗೆಲುವಿನ ಸಂಯೋಜನೆಯನ್ನು ಹೊಂದುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.

ಸರಣಿಗಳಲ್ಲಿ ಪ್ರಯೋಗ ಮಾಡಬಹುದಿತ್ತು

ಸರಣಿಗಳಲ್ಲಿ ಪ್ರಯೋಗ ಮಾಡಬಹುದಿತ್ತು

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ವೈಟ್ ಬಾಲ್ ಸರಣಿಗಳನ್ನು ಆಡಲಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಂಗಳವಾರ (ಸೆಪ್ಟೆಂಬರ್ 20) ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ತಂಡ ಪ್ರಯೋಗಕ್ಕೆ ಮುಂದಾಗಬಹುದಿತ್ತು ಎಂದು ದಿಲೀಪ್ ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.

Story first published: Sunday, September 11, 2022, 18:42 [IST]
Other articles published on Sep 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X