ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಪಾಕ್ ಏಷ್ಯಾಕಪ್‌ ಫೈನಲ್ ಆಡಲಿವೆ ಎಂದು ಟಿಕೆಟ್ ಖರೀದಿಸಿದ್ದೆ: ಶೋಯೆಬ್ ಅಖ್ತರ್

ind vs pak

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಪಂದ್ಯಗಳನ್ನ ನೋಡಲು ನಾನು ಎಲ್ಲಿ ಬೇಕಾದರೂ ಹೋಗುತ್ತೇನೆ ಎಂದು ಹೇಳಿದ್ದಾರೆ.

ಪ್ರಸ್ತುತ ಏಷ್ಯಾಕಪ್‌ನಲ್ಲಿ ಸತತ ಎರಡು ಪಂದ್ಯ ಸೋಲುವ ಮೂಲಕ ಏಷ್ಯಾಕಪ್ ಗೆಲ್ಲುವ ಆಸೆ ಕೈ ಬಿಟ್ಟಿರುವ ಟೀಂ ಇಂಡಿಯಾ ಫೈನಲ್ ತಲುಪುವ ಆಸೆ ಮರೆತಿದೆ. ಭಾರತಕ್ಕೆ ಏಷ್ಯಾಕಪ್ ಫೈನಲ್ ಬಹುತೇಕ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇಲ್ಲ. ಏಕೆಂದರೆ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಅಥವಾ ಶ್ರೀಲಂಕಾ ವಿರುದ್ಧ ಭಾರತ ಅಥವಾ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ಫೈನಲ್ ನಡೆಯುತ್ತದೆ ಆದರೆ ಭಾರತ ವಿರುದ್ಧ ಪಾಕಿಸ್ತಾನ ಪಂದ್ಯ ಅಸಾಧ್ಯವಾಗಿದೆ.

ಏಷ್ಯಾಕಪ್ ಸೋಲು ಭಾರತಕ್ಕೆ ಬಹುದೊಡ್ಡ ಪಾಠ, ವಿಶ್ವಕಪ್‌ಗೂ ಮುನ್ನ ಎಚ್ಚೆತ್ತುಕೊಳ್ಳಲಿ: ಶೋಯೆಬ್ ಅಖ್ತರ್ಏಷ್ಯಾಕಪ್ ಸೋಲು ಭಾರತಕ್ಕೆ ಬಹುದೊಡ್ಡ ಪಾಠ, ವಿಶ್ವಕಪ್‌ಗೂ ಮುನ್ನ ಎಚ್ಚೆತ್ತುಕೊಳ್ಳಲಿ: ಶೋಯೆಬ್ ಅಖ್ತರ್

ಈ ಹಿನ್ನಲೆಯಲ್ಲಿ ಅಖ್ತರ್ ಮಾತನಾಡಿದ್ದು ''ಏಷ್ಯಾ ಕಪ್‌ನ ಫೈನಲ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನವನ್ನು ಆಡಬೇಕೆಂದು ನಾನು ಬಯಸಿದ್ದೆ ಮತ್ತು ಅದಕ್ಕಾಗಿ ಈಗಾಗಲೇ ಟಿಕೆಟ್ ಖರೀದಿಸಿದ್ದೇನೆ. ಪಂದ್ಯದ ವೇಳೆ ಎರಡೂ ತಂಡಗಳ ಅಭಿಮಾನಿಗಳೊಂದಿಗೆ ಸಂವಾದ ನಡೆಸಲು ಬಯಸಿದ್ದೆ. ಆದರೆ ಈಗ ಏನೂ ಆಗುವುದಿಲ್ಲ'' ಎಂದು ಶೋಯೆಬ್ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ T20 ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯ ನಡೆಯಲಿದೆ. ಮೆಲ್ಬೋರ್ನ್‌ನ ಐಕಾನಿಕ್ ಸ್ಥಳದಲ್ಲಿ ಮುಂಬರುವ ಪಂದ್ಯವು ತುಂಬಾ ಆಸಕ್ತಿದಾಯಕವಾಗಿದೆ ಎಂದು ಅಖ್ತರ್ ಹೇಳಿದರು. ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ನಾನು ಮೆಲ್ಬೋರ್ನ್‌ಗೆ ಕೂಡ ಹೋಗುತ್ತೇನೆ ಎಂದು ಅಖ್ತರ್ ಹೇಳಿದ್ದಾರೆ.

ನಾಯಕತ್ವದ ವಿಷಯದಲ್ಲಿ ರೋಹಿತ್ ಶರ್ಮಾ ತಮ್ಮ ಕೌಶಲ್ಯವನ್ನು ತೀಕ್ಷ್ಣಗೊಳಿಸಬೇಕಾಗಿದೆ ಎಂದು ಅಖ್ತರ್ ಇದೇ ವೇಳೆಯಲ್ಲಿ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 72 ರನ್ ಗಳಿಸಿದ್ದು ಗೊತ್ತೇ ಇದೆ. ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಉತ್ತಮ ಆರಂಭವನ್ನು ನೀಡಲು ಅವರು ಕಠಿಣ ಆಟವಾಡಿದರು. ಆದರೆ, ಆ ಎರಡೂ ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು.

ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಮೊಹಮ್ಮದ್ ನಬಿ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಫೈನಲ್‌ಗೆ ತಲುಪಬೇಕಾದರೆ ಭಾರತ ಈ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಲೇಬೇಕು. ಅದಕ್ಕೂ ಮುನ್ನ ಪಾಕಿಸ್ತಾನದ ಅಫ್ಘಾನಿಸ್ತಾನ ಗೆಲ್ಲಬೇಕು ಹಾಗೂ ಶ್ರೀಲಂಕಾ ಜಯಿಸಬೇಕಾಗಿದೆ. ಆಗ ಮಾತ್ರ ಭಾರತಕ್ಕೆ ಅವಕಾಶಗಳು ಸಿಗುತ್ತವೆ. ಇಲ್ಲದಿದ್ದರೆ ಟೀಂ ಇಂಡಿಯಾದ ಅವಕಾಶಗಳು ಕೈತಪ್ಪಿ ಹೋಗುತ್ತವೆ.

ಬುಧವಾರ ಶಾರ್ಜಾದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಪಂದ್ಯ ನಡೆದಿದ್ದು, ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್‌ ಆಯ್ದುಕೊಂಡಿದೆ. . ಇತ್ತೀಚೆಗೆ ಅಫ್ಘಾನಿಸ್ತಾನ ಅಗ್ರ ತಂಡವಾಗಿ ಗುರುತಿಸಿಕೊಂಡಿದ್ದು, ಗುರುವಾರ ಭಾರತದೆದುರು ಆಡಲಿದೆ.

Story first published: Wednesday, September 7, 2022, 20:12 [IST]
Other articles published on Sep 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X