ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022:ಪಾಕ್ ವಿರುದ್ಧ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಟಿಯಲ್ಲಿ ಕೆ.ಎಲ್ ರಾಹುಲ್‌ ಮಹತ್ವದ ಹೇಳಿಕೆ

KL Rahul

ಏಷ್ಯಾಕಪ್‌ ಟೂರ್ನಮೆಂಟ್‌ಗೆ ಶನಿವಾರ (ಆಗಸ್ಟ್ 27) ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಇದಾದ ಬಳಿಕ ಭಾನುವಾರ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಸಾಕ್ಷಿಯಾಗಲಿದೆ.

ಭಾರತ ಮತ್ತು ಪಾಕಿಸ್ತಾನ ಭಾನುವಾರ (ಆಗಸ್ಟ್ 28) ಒಂದು ವರ್ಷದ ಬಳಿಕ ಮುಖಾಮುಖಿಯಾಗುತ್ತಿದ್ದು, ಪಂದ್ಯಕ್ಕೂ ಮುನ್ನ ಶುಕ್ರವಾರ ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ "ನಾವು ಯಾವಾಗಲೂ ಭಾರತ-ಪಾಕಿಸ್ತಾನದ ಘರ್ಷಣೆಯನ್ನು ಎದುರು ನೋಡುತ್ತೇವೆ. ಏಕೆಂದರೆ ನಾವು ಬೇರೆಲ್ಲಿಯೂ ಪರಸ್ಪರ ಆಡುವುದಿಲ್ಲ ಆದರೆ ಈ ದೊಡ್ಡ ಪಂದ್ಯಾವಳಿಗಳಲ್ಲಿ ಮಾತ್ರ ಆಡುತ್ತೇವೆ. ಆದ್ದರಿಂದ ಇದು ಯಾವಾಗಲೂ ಪಾಕಿಸ್ತಾನದಂತಹ ತಂಡದೊಂದಿಗೆ ಆಡುವುದು ರೋಚಕವಾಗಿರುತ್ತದೆ" ಎಂದು ಅವರು ಹೇಳಿದರು.

ಏಷ್ಯಾ ಕಪ್ 2022: ಟೀಂ ಇಂಡಿಯಾ ಆಟಗಾರರು ತಲುಪಲಿರುವ ಮೈಲಿಗಲ್ಲುಗಳುಏಷ್ಯಾ ಕಪ್ 2022: ಟೀಂ ಇಂಡಿಯಾ ಆಟಗಾರರು ತಲುಪಲಿರುವ ಮೈಲಿಗಲ್ಲುಗಳು

''ನಾವು ಪಾಕಿಸ್ತಾನ ವಿರುದ್ಧ ಎಷ್ಟು ಬಾರಿ ಆಡಿದ್ದೇವೆ ಮತ್ತು ಪ್ರತಿ ಪಂದ್ಯವನ್ನ ಗೆದ್ದಿದ್ದೇವೆ ಎಂಬ ಇತಿಹಾಸವಿರಬಹುದು. ಆದರೆ ಅದು ಯಾವುದಕ್ಕೂ ಲೆಕ್ಕವಿಲ್ಲ. ಇದು ಯಾವಾಗಲೂ 0 ರಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಟೂರ್ನಿಯಲ್ಲಿ ಚೆನ್ನಾಗಿ ಪ್ರಾರಂಭಿಸಲು ಬಯಸುತ್ತೇವೆ'' ಎಂದು ರಾಹುಲ್ ಹೇಳಿದ್ದಾರೆ

ವಿರಾಟ್ ಫಾರ್ಮ್ ಬಗ್ಗೆ ರಾಹುಲ್ ಮಾತು
'' ಕಳೆದ ವಿಶ್ವಕಪ್‌ ಬಳಿಕ ಭಾರತ ತಂಡದಲ್ಲಿ ಹೊಸ ವಿಧಾನವನ್ನು ನೋಡುತ್ತಿರುವುದು ಸಂತಸ ತಂದಿದೆ, ನಾಯಕನ ಮಾತುಗಳನ್ನು ಅನುಸರಿಸಿ ನಾವು ಅದನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ''

"ನಾವೆಲ್ಲರೂ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಬೇಕೆಂದು ಬಯಸುತ್ತೇವೆ, ನಾವು ಅವರ ಫಾರ್ಮ್‌ ಬಗ್ಗೆ ಚಿಂತಿಸುವುದಿಲ್ಲ. ಅವರ ಮನಸ್ಥಿತಿ ಯಾವಾಗಲೂ ಒಂದೇ ಆಗಿರುತ್ತದೆ, ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವುದಾಗಿದೆ ಮತ್ತು ಅವರು ಅದನ್ನು ಹಲವು ವರ್ಷಗಳಿಂದ ಮಾಡಿದ್ದಾರೆ. ಶಾಹೀನ್ ಅಫ್ರಿದಿ ವಿಶ್ವ ದರ್ಜೆಯ ಬೌಲರ್, ಅವರು ಆಡಿದ್ದರೆ ನಮಗೆ ಒಳ್ಳೆಯ ಅನುಭವವಾಗುತ್ತಿತ್ತು, ಆದರೆ ದುರದೃಷ್ಟವಶಾತ್ ಅವರು ಗಾಯಗೊಂಡು ಔಟ್ ಆದರು'' ಎಂದು ಕೆ.ಎಲ್ ರಾಹುಲ್ ಪಂದ್ಯ ಪೂರ್ವ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11

ಟೀಂ ಇಂಡಿಯಾ
ಕೆ.ಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

ಪಾಕಿಸ್ತಾನ
ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಆಸಿಫ್ ಅಲಿ, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಹನವಾಜ್ ಧಹಾನಿ

Story first published: Saturday, August 27, 2022, 9:00 [IST]
Other articles published on Aug 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X