ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಷ್ಟದ ದಿನಗಳಲ್ಲಿ ಆತ್ಮವಿಶ್ವಾಸ ತುಂಬಿದ ವಿಶೇಷ ವ್ಯಕ್ತಿಯನ್ನು ನೆನಪಿಸಿಕೊಂಡ ವಿರಾಟ್ ಕೊಹ್ಲಿ

ಏಷ್ಯಾಕಪ್‌ 2022ರ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿದ್ದಾರೆ. 1021 ದಿನಗಳಿಂದ ರನ್ ಬರ ಅನುಭವಿಸುತ್ತಿದ್ದ ವಿರಾಟ್ ಕೊಹ್ಲಿ ಗುರುವಾರ ಏಷ್ಯಾಕಪ್ ಸೂಪರ್ 4 ಹಂತದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದಾರೆ. ಮುಂದಿನ ವಿಶ್ವಕಪ್ ದೃಷ್ಟಿಯಿಂದ ಇದು ವಿರಾಟ್ ಕೊಹ್ಲಿಗೆ ಮಾತ್ರವಲ್ಲ ಭಾರತ ತಂಡಕ್ಕೆ ಕೂಡ ಸಿಹಿ ಸುದ್ದಿ.

61 ಎಸೆತಗಳಲ್ಲಿ 122 ರನ್ ಬಾರಿಸಿದ ವಿರಾಟ್ ಕೊಹ್ಲಿ ತಮ್ಮ 71ನೇ ಶತಕವನ್ನು ಪೂರೈಸಿದರು. ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು. ಜಗತ್ತಿನ ಮೂಲೆ ಮೂಲೆಯಿಂದ ವಿರಾಟ್ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಎಂತಹ ಮನೋಹರ ದೃಶ್ಯ: ವಿರಾಟ್ ಕೊಹ್ಲಿ ಶತಕದ ಬಗ್ಗೆ ಎ ಬಿ ಡಿವಿಲಿಯರ್ಸ್ ಹೇಳಿದ್ದೇನು?ಎಂತಹ ಮನೋಹರ ದೃಶ್ಯ: ವಿರಾಟ್ ಕೊಹ್ಲಿ ಶತಕದ ಬಗ್ಗೆ ಎ ಬಿ ಡಿವಿಲಿಯರ್ಸ್ ಹೇಳಿದ್ದೇನು?

ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಬೃಹತ್ ಮೊತ್ತವನ್ನು ಬೆನ್ನತ್ತಿದ ಅಫ್ಘಾನಿಸ್ತಾನ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತು. ಭಾರತ 101 ರನ್‌ಗಳ ಬೃಹತ್ ಜಯ ಸಾಧಿಸಿತು. ಏಷ್ಯಾಕಪ್‌ನಿಂದ ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ ಹೊರಬಿದ್ದಿವೆ.

ಅನುಷ್ಕಾ, ವಾಮಿಕಾಗೆ ಶತಕ ಅರ್ಪಣೆ

ಅನುಷ್ಕಾ, ವಾಮಿಕಾಗೆ ಶತಕ ಅರ್ಪಣೆ

ಶತಕ ಗಳಿಸಿದ ನಂತರ ಮಾತನಾಡಿದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ನೆನಪಿಸಿಕೊಂಡರು. "ನಾನು ಇಲ್ಲಿ ನಿಂತಿರುವುದನ್ನು ನೀವು ನೋಡುತ್ತೀರಿ, ಒಬ್ಬ ವ್ಯಕ್ತಿ ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದಾರೆ, ಅದು ಅನುಷ್ಕಾ" ಎಂದು ಹೇಳಿದ ಕೊಹ್ಲಿ ತಮ್ಮ 71ನೇ ಶತಕವನ್ನು ಪತ್ನಿ ಅನುಷ್ಕಾ ಮತ್ತು ಮಗಳು ವಾಮಿಕಾಗೆ ಅರ್ಪಿಸಿದರು.

"ನೀವು ಕುಗ್ಗಿದಾಗ ಯಾರಾದರೂ ನಿಮ್ಮ ಜೊತೆಗೆ ಇರಬೇಕೆಂದು ಅನಿಸುತ್ತದೆ. ಅವರು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾರೆ, ಸರಿಯಾದ ದಿಕ್ಕಿನಲ್ಲಿ ಆಲೋಚಿಸುವಂತೆ ಮಾಡುತ್ತಾರೆ, ಇದು ನಿಮ್ಮ ಯಶಸ್ಸಿಗೆ ಸಹಾಯವಾಗುತ್ತದೆ. ಎಲ್ಲಾ ಸಮಯದಲ್ಲೂ ಅನುಷ್ಕಾ ನನ್ನ ಪಕ್ಕದಲ್ಲಿದ್ದಳು" ಎಂದು ಹೇಳಿದ್ದಾರೆ.

1021 ದಿನಗಳ ಬಳಿಕ ಶತಕ ದಾಖಲಿಸಿದ ವಿರಾಟ್, 83 ಇನ್ನಿಂಗ್ಸ್ ನಂತರ ಮೂರಂಕಿ ಸ್ಕೋರ್

ಮದುವೆಯ ಉಂಗುರುಕ್ಕೆ ಚುಂಬಿಸಿದ ಕೊಹ್ಲಿ

ಮದುವೆಯ ಉಂಗುರುಕ್ಕೆ ಚುಂಬಿಸಿದ ಕೊಹ್ಲಿ

ಅಫ್ಘಾನಿಸ್ತಾನದ ವಿರುದ್ಧ ಶತಕ ಬಾರಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಸಂಭ್ರಮಾಚರಣೆ ಮಾಡಿದರು. ತಮ್ಮ ಕೊರಳಿನಲ್ಲಿ ಸರಕ್ಕೆ ಜೋಡಿಸಿದ್ದ ತಮ್ಮ ಮದುವೆಯ ಉಂಗುರವನ್ನು ತೆಗೆದು ಮುತ್ತಿಟ್ಟದ್ದು ವಿಶೇಷವಾಗಿತ್ತು.

ಕಳೆದ ಎರಡೂವರೆ ವರ್ಷಗಳು ನನಗೆ ಬಹಳಷ್ಟು ಪಾಠಗಳನ್ನು ಕಲಿಸಿವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ನನಗೆ ಸಹಾಯ ಮಾಡಿದ್ದಕ್ಕಾಗಿ ಭಾರತೀಯ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ, ಇದು ನನಗೆ ಮತ್ತು ತಂಡಕ್ಕೆ ತುಂಬಾ ವಿಶೇಷವಾದ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ರಾಂತಿ ವೇಳೆ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ

ವಿಶ್ರಾಂತಿ ವೇಳೆ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ

ಆಟದಿಂದ ದೂರವಿರುವ ಸಮಯ ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿದೆ. ವಿಶ್ರಾಂತಿ ಬಳಿಕ ಹಿಂತಿರುಗಿದಾಗ, ಹತಾಶನಾಗಿರಲಿಲ್ಲ. ದೇವರು ನನ್ನನ್ನು ಮೊದಲು ಆಶೀರ್ವದಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೆ. ನಾನು ಮೊದಲಿಗಿಂತ ಶಾಂತವಾಗಿದ್ದೇನೆ" ಎಂದು ಹೇಳಿದ್ದಾರೆ.

"ಆರು ವಾರಗಳ ರಜೆ ನಾನು ರಿಫ್ರೆಶ್ ಆಗಿದ್ದೆ. ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಷ್ಟು ದಣಿದಿದ್ದೇನೆ ಎಂದು ವಿರಾಮ ತೆಗೆದುಕೊಂಡ ನಂತರ ನನಗೆ ಅರ್ಥವಾಯಿತು. ಸ್ಪರ್ಧೆಯಲ್ಲಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಆದರೆ ವಿಶ್ರಾಂತಿ ಸಿಕ್ಕಿದ್ದು ನನಗೆ ಆಶೀರ್ವಾದವಾಗಿತ್ತು. ನೆಟ್ಸ್‌ನಲ್ಲಿ ಆಡಲು ಪ್ರಾರಂಭಿಸಿದಾಗ, ನಾನು ನನ್ನ ಹಳೆಯ ಲಯವನ್ನು ಮರಳಿ ಪಡೆಯುತ್ತಿದ್ದೇನೆ ಎಂದು ಅನಿಸಿತು."

Virat Kohli ಆಟ ನೋಡಿದ ಕೋಚ್ ಹಾಗು ಕ್ಯಾಪ್ಟನ್ ಮಾಡಿದ್ದೇನು | *Cricket | OneIndia Kannada
ಟೀಕಾಕಾರರಿಗೆ ಬ್ಯಾಟ್‌ನಿಂದಲೇ ಉತ್ತರ

ಟೀಕಾಕಾರರಿಗೆ ಬ್ಯಾಟ್‌ನಿಂದಲೇ ಉತ್ತರ

ವಿರಾಟ್ ಕೊಹ್ಲಿ ಕೊನೆಯ ಬಾರಿ ಶತಕ ಗಳಿಸಿದ್ದು 1021 ದಿನಗಳ ಹಿಂದೆ. 2019ರ ನವೆಂಬರ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದ್ದರು. ಫಾರ್ಮ್‌ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ಇಂಗ್ಲೆಂಡ್ ವಿರುದ್ಧದ ಸರಣಿ ನಂತರ ವಿರಾಟ್ ಕೊಹ್ಲಿ ದೀರ್ಘ ಕಾಲದ ವಿಶ್ರಾಂತಿ ಪಡೆದಿದ್ದರು. 84 ಇನ್ನಿಂಗ್ಸ್‌ಗಳ ನಂತರ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಶತಕ ಬಾರಿಸಿ, ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

Story first published: Friday, September 9, 2022, 8:54 [IST]
Other articles published on Sep 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X