ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ: ಪ್ರಮುಖ ಆಟಗಾರ ತಂಡದಿಂದ ಔಟ್

Denov injury

ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಹಾಟ್ ಫೇವರಿಟ್ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಆಘಾತವಾಗಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿ ಅಂತಿಮ ಹಣಾಹಣಿಕ ಟಿಕೆಟ್ ಪಡೆದಿದ್ದ ಕಿವೀಸ್ ಬಳಗದಲ್ಲಿ ಪ್ರಮುಖ ಆಟಗಾರ ಫೈನಲ್‌ಗೆ ಅಲಭ್ಯರಾಗಿದ್ದಾರೆ.

ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿರುವ ನ್ಯೂಜಿಲೆಂಡ್ ಪ್ರಶಸ್ತಿ ಗೆಲ್ಲಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಆದ್ರೆ ಫೈನಲ್ ಸಮೀಪಿಸುತ್ತಿದ್ದಂತೆ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದಾನೆ.

ಕಿವೀಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ ಬಲಗೈ ಗಾಯಕ್ಕೆ ತುತ್ತಾಗಿರುವ ಕಾರಣ ಭಾನುವಾರ ನಡೆಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಇಷ್ಟಕ್ಕೆ ಮಾತ್ರವಲ್ಲದೆ ಭಾರತದ ವಿರುದ್ಧ ಟಿ20 ಸರಣಿಗೂ ಡೆವೊನ್ ಅಲಭ್ಯರಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಅಜಿಂಕ್ಯಾ ರಹಾನೆಗೆ ನಾಯಕತ್ವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಅಜಿಂಕ್ಯಾ ರಹಾನೆಗೆ ನಾಯಕತ್ವ

ಬುಧವಾರ (ನ. 10) ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಡೆವೊನ್ ಕಾನ್ವೇ ಕೇವಲ 38 ಎಸೆತಗಳಲ್ಲಿ 46 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಒಂದು ಅಮೋಘ ಸಿಕ್ಸರ್ ಕಾಣಬಹುದು.

ಇವರು 46 ರನ್ ಬಾರಿಸಿ ಔಟಾದ ಸಂದರ್ಭದಲ್ಲಿ ಕೋಪದಲ್ಲಿ ತಮ್ಮ ಬ್ಯಾಟ್‌ನಿಂದಲೇ ಡೆವೊನ್ ತಮ್ಮ ಕೈಗೆ ಹೊಡೆದುಕೊಂಡಿದ್ದರು. ಈ ಸಂದರ್ಭ ಇವರು ಗಾಯಗೊಂಡಿದ್ದು, ತಮ್ಮ ಕೈಯಾರೆ ತಾವೇ ತಂಡದಿಂದ ಹೊರಬೀಳುವಂತೆ ಮಾಡಿಕೊಂಡ್ರು.

ಪಂದ್ಯ ಮುಗಿದ ಬಳಿಕ ಆತನನ್ನ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್ ಮಾಡಿಸಿದಾಗ ಅವರ ಬಲಗೈ ಐದನೇ ಮೆಟಾಕಾರ್ಪಲ್ ಮುರಿದಿರುವುದು ತಿಳಿದುಬಂದಿದೆ.

"ಮೈದಾನದಲ್ಲಿ ಏನು ನಡೆಯಿತು ಅದು ಅವರಿಗೆ ನಿಜವಾಗಲೂ ನಿರಾಶೆ ಮೂಡಿಸಿತ್ತು. ಈ ಸಿಟ್ಟನ್ನು ಹೊರಹಾಕುವ ಭರದಲ್ಲಿ ಅವರು ಗೊತ್ತಿಲ್ಲದೆ ಈ ರೀತಿ ಮಾಡಿಕೊಂಡಿದ್ದಾರೆ. ಅವರ ಅನುಪಸ್ಥಿತಿಯು ವಿಕೆಟ್‌ ಕೀಪಿಂಗ್‌ ಹಾಗೂ ಬ್ಯಾಟಿಂಗ್‌ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಅವರು ಗಾಯಕ್ಕೆ ತುತ್ತಾಗಿರುವುದು ನಿಜಕ್ಕೂ ದುರದೃಷ್ಟಕರ'' ಎಂದು ನ್ಯೂಜಿಲೆಂಡ್‌ ಹೆಡ್‌ ಕೋಚ್‌ ಗ್ಯಾರಿ ಸ್ಟೀಡ್‌ ಹೇಳಿದ್ದಾರೆ.

ಕಿವೀಸ್ ತಂಡದಿಂದ ಗಾಯಾಳುವಾಗಿ ತಂಡದಿಂದ ಹೊರಬೀಳುತ್ತಿರುವ ಮೊದಲ ಆಟಗಾರ ಇವರೇನಲ್ಲ. ಇದಕ್ಕೂ ಮೊದಲು ವೇಗಿ ಲ್ಯೂಕಿ ಫರ್ಗುಸನ್ ಸೂಪರ್ 12 ಹಂತದಲ್ಲೇ ಗಾಯಾಳುವಾಗಿ ಇಡೀ ಟೂರ್ನಿಯಿಂದ ಹೊರಬಿದ್ದರು. ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ ತಾವೇ ಮಾಡಿಕೊಂಡ ಗಾಯದಿಂದ ಫೈನಲ್‌ನಲ್ಲಿ ಆಡದೇ ಇರುವಂತಾಗಿದೆ.

ಸೂಪರ್‌ ಸಂಡೇಯಂದು ಫೈನಲ್ ಪಂದ್ಯ
ನವೆಂಬರ್ 14ರಂದು ನ್ಯೂಜಿಲೆಂಡ್ ವರ್ಸಸ್ ಆಸ್ಟ್ರೇಲಿಯಾ ತಂಡವು ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. ಈ ಎರಡು ತಂಡಗಳು ಭಾರತ-ಪಾಕಿಸ್ತಾನದ ತಂಡದಷ್ಟೇ ಬದ್ಧ ವೈರಿಗಳಾಗಿದ್ದು, ಪಂದ್ಯವು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಫೈನಲ್ ಪಂದ್ಯದಲ್ಲಿ ಯಾರೇ ಗೆದ್ದರೂ ಚೊಚ್ಚಲ ಟ್ರೋಫಿಯನ್ನ ತನ್ನದಾಗಿಸಿಕೊಳ್ಳಲಿವೆ.

Story first published: Friday, November 12, 2021, 15:30 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X