ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹುಟ್ಟಿದ ದಿನಾಂಕ ಮುಚ್ಚಿಟ್ಟಿ ಆಡಿದ್ರಾ CSK ಪ್ಲೇಯರ್‌? ವೇಗಿ ರಾಜವರ್ಧನ್ ಹಂಗರ್ಗೇಕರ್ ಮೇಲೆ ಗಂಭೀರ ಆರೋಪ!

Rajvardhan hangargekar

ಇತ್ತೀಚೆಗಷ್ಟೇ ಅಂಡರ್-19 ವಿಶ್ವಕಪ್‌ನಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನ ಮಣಿಸಿ ಐದನೇ ಬಾರಿಗೆ ದಾಖಲೆಯ ವಿಶ್ವಕಪ್ ಎತ್ತಿಹಿಡಿಯಿತು. ಇದ್ರ ಬೆನ್ನಲ್ಲೇ ಐಪಿಎಲ್ ಹರಾಜು ಬಂದ ಹಿನ್ನಲೆಯಲ್ಲಿ ಜ್ಯೂನಿಯರ್ ವಿಶ್ವಕಪ್‌ನಲ್ಲಿ ಮಿಂಚಿದ ಆಟಗಾರರು ಉತ್ತಮ ಮೊತಕ್ಕೆ ವಿವಿಧ ಫ್ರಾಂಚೈಸಿ ಸೇರಿಕೊಂಡಿದ್ದಾರೆ.

ಅಂಡರ್-19 ವಿಶ್ವಕಪ್‌ನಲ್ಲಿ ಉತ್ತಮ ಬೌಲಿಂಗ್ ನಡೆಸಿದ ಬೌಲರ್ ರಾಜವರ್ಧನ್ ಹಂಗರ್ಗೇಕರ್ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿ ಪಾಲಾಗಿದ್ದಾರೆ. ಹಂಗೇಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿಗೆ ಖರೀದಿಸಿದೆ. ಮುಂಬೈ ಇಂಡಿಯನ್ಸ್ ಕೂಡ ಅವರನ್ನು ಖರೀದಿಸಲು ಬಿಡ್ ಮಾಡಿತು ಆದರೆ ಅಂತಿಮವಾಗಿ ಚೆನ್ನೈ ಗೆದ್ದಿತು. ಆದರೆ, ಈಗ ಈ ವಿವಾದದ ಮೂಲಕ ಹಂಗರ್ಗೇಕರ್ ಸುದ್ದಿ ಆಗಿದ್ದಾರೆ.

ಐಪಿಎಲ್ 2022 : ಸನ್‌ರೈಸರ್ಸ್ ಹೈದ್ರಾಬಾದ್ ಸಂಭಾವ್ಯ ಪ್ಲೇಯಿಂಗ್ 11 ಐಪಿಎಲ್ 2022 : ಸನ್‌ರೈಸರ್ಸ್ ಹೈದ್ರಾಬಾದ್ ಸಂಭಾವ್ಯ ಪ್ಲೇಯಿಂಗ್ 11

ರಾಜವರ್ಧನ್ ಅವರ ನಿಜವಾದ ವಯಸ್ಸನ್ನು ಮುಚ್ಚಿಟ್ಟು ಅಂಡರ್-19 ವಿಶ್ವಕಪ್ ಆಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಂಗರ್ಗೆಕರ್ ಅವರ ನಿಜವಾದ ವಯಸ್ಸು 21 ವರ್ಷಗಳು ಮತ್ತು ಇದರ ಹೊರತಾಗಿಯೂ ಅವರು ಅಂಡರ್-19 ವಿಶ್ವಕಪ್ ಆಡಿದರು.

ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹಂಗರ್ಗೇಕರ್ ತನ್ನ ವಯಸ್ಸನ್ನ ಮುಚ್ಚಿಟ್ಟು ಭಾರತ ಪರ ಆಡಿದ್ದಾರೆ ಎಂದು ಮಹಾರಾಷ್ಟ್ರದ ಕ್ರೀಡಾ ಮತ್ತು ಯುವಜನ ಇಲಾಖೆ ಆಯುಕ್ತ ಓಂಪ್ರಕಾಶ್ ಬಕೋರಿಯಾ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಬಿಸಿಸಿಐಗೆ ದೂರು ಸಹ ನೀಡಿದ್ದಾರೆ.

"ಹೌದು, ನಮಗೆ ಮಹಾರಾಷ್ಟ್ರ ಡಿವೈಎಸ್ ಅವರಿಂದ ಪತ್ರ ಬಂದಿದೆ. ಇದೊಂದು ಗಂಭೀರ ಆರೋಪವಾಗಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ. ಆದರೆ ಸದ್ಯಕ್ಕೆ ಅವರು ಆಡಲು ಸ್ವತಂತ್ರರಾಗಿದ್ದಾರೆ. ನಾವು ವ್ಯವಸ್ಥೆಯನ್ನು ಸಂಪೂರ್ಣವಾಗಿ ನಂಬುತ್ತೇವೆ'' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದರು.

ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!

ಓಂಪ್ರಕಾಶ್ ಬಕೋರಿಯಾ ಅವರು ಬಿಸಿಸಿಐಗೆ ಬರೆದ ಪತ್ರದಲ್ಲಿ '' ಧರಾಶಿವ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್ ಗುಪ್ತಾ ಅವರು ರಾಜವರ್ಧನ್ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕವನ್ನು ಖಚಿತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ರಾಜ್ಯವರ್ಧನ್ ಧರಶಿವ್‌ನ ಟೆರ್ನಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ. ಶಾಲೆಯ ದಾಖಲೆಗಳ ಪ್ರಕಾರ, 1 ರಿಂದ 7 ನೇ ತರಗತಿಯವರೆಗೆ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕ ಜನವರಿ 10, 2001. ಆದರೆ, 8ನೇ ತರಗತಿಗೆ ಹೊಸ ಪ್ರವೇಶವನ್ನು ನೀಡುವಾಗ, ಮುಖ್ಯೋಪಾಧ್ಯಾಯರು ಅನೌಪಚಾರಿಕವಾಗಿ ರಾಜ್ಯವರ್ಧನ್ ಅವರ ಜನ್ಮ ದಿನಾಂಕವನ್ನು 10 ನವೆಂಬರ್ 2002 ಕ್ಕೆ ಬದಲಾಯಿಸಿದ್ದಾರೆ. ಜನವರಿ 14 ಮತ್ತು ಫೆಬ್ರವರಿ 5 ರ ನಡುವೆ ನಡೆದ ಅಂಡರ್-19 ಕ್ರಿಕೆಟ್ ವಿಶ್ವಕಪ್‌ ನಡೆಯುವ ವೇಳೆಗೆ ರಾಜ್ಯವರ್ಧನ್ ಹಂಗರ್ಗೇಕರ್ ಅವರ ವಯಸ್ಸು 21 ವರ್ಷಗಳು ಎಂಬುದು ಸಾಭೀತಾಗಿದೆ'' ಎಂದಿದ್ದಾರೆ.

ಆದ್ದರಿಂದ, ಅಂಡರ್-19 ವಿಶ್ವಕಪ್‌ಗೆ (ಜನವರಿ 14-ಫೆಬ್ರವರಿ 5) ಭಾರತದ ತಂಡಕ್ಕೆ ಹಂಗರ್ಗೇಕರ್ ಅವರನ್ನು ಆಯ್ಕೆ ಮಾಡಿದಾಗ, ಅವರು ಈಗಾಗಲೇ 21 ವರ್ಷ ವಯಸ್ಸಿನವರಾಗಿದ್ದರು - ವಯಸ್ಸಿನ ವರ್ಗಕ್ಕೆ ಅರ್ಹರಾಗಿರಲಿಲ್ಲ. ಐಸಿಸಿ ಪ್ರಕಾರ, U19 ವಿಶ್ವಕಪ್‌ನಲ್ಲಿ ಭಾಗವಹಿಸುವ ಆಟಗಾರನು ಅರ್ಹತೆ ಪಡೆಯಲು 19 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು (15 ಕ್ಕಿಂತ ಕಡಿಮೆ ಕೂಡ ಆಗಿರುವಂತಿಲ್ಲ).

ವಯಸ್ಸಿನ ವಂಚನೆ ಪ್ರಕರಣದಲ್ಲಿ ಬಿಸಿಸಿಐ ಏನು ಕ್ರಮ ಕೈಗೊಳ್ಳಲಿದೆ. ಹಂಗರ್ಗೇಕರ್ ನಿಜವಾಗಿಯೂ ತಮ್ಮ ನಿಜವಾದ ವಯಸ್ಸನ್ನ ಮುಚ್ಚಿಟ್ಟಿದ್ದೀರಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Story first published: Saturday, February 19, 2022, 8:59 [IST]
Other articles published on Feb 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X