For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ವಿಜೇತ ಮಾಜಿ ಕ್ರಿಕೆಟರ್ ಯಶ್‌ಪಾಲ್ ಶರ್ಮಾ ನಿಧನ

Former Indian cricketer Yashpal Sharma passed away

ನವದೆಹಲಿ: ಟೀಮ್ ಇಂಡಿಯಾದ ವಿಶ್ವಕಪ್‌ ವಿಜೇತ ಮಾಜಿ ಕ್ರಿಕೆಟರ್ ಯಶ್‌ಪಾಲ್‌ ಶರ್ಮಾ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಶರ್ಮಾ ಮಂಗಳವಾರ (ಜುಲೈ 13) ನಿಧನರಾಗಿರುವುದಾಗಿ ತಿಳಿದುಬಂದಿದೆ. ಮೂಲತಃ ಪಂಜಾಬ್‌ನವರಾದ ಯಶ್‌ಪಾಲ್‌ಗೆ 66 ವರ್ಷ ವಯಸ್ಸಾಗಿತ್ತು.

70 ಮತ್ತು 80ನೇ ದಶಕದ ವೇಳೆ ಯಶ್‌ಪಾಲ್‌ ಶರ್ಮಾ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿದ್ದರು. 1983ರ ವಿಶ್ವಕಪ್‌ ವೇಳೆ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 61 ರನ್‌ ಬಾರಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಭಾರತ ತಂಡದ ಪರ ಯಶ್‌ಪಾಲ್ 37 ಟೆಸ್ಟ್‌ ಪಂದ್ಯ, 42 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದ ಯಶ್‌ಪಾಲ್ 37 ಟೆಸ್ಟ್‌ ಪಂದ್ಯಗಳಲ್ಲಿ 1606 ರನ್, 2 ಶತಕ, 9 ಅರ್ಧ ಶತಕ, 42 ಏಕದಿನ ಪಂದ್ಯಗಳಲ್ಲಿ 883 ರನ್, 4 ಅರ್ಧ ಶತಕ ಬಾರಿಸಿದ್ದಾರೆ. ಇನ್ನು ಲಿಸ್ಟ್‌ ಎ 74 ಪಂದ್ಯಗಳಲ್ಲಿ 1859 ರನ್, 160 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 8933 ರನ್ ದಾಖಲೆ ಹೊಂದಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಮೂಲಕ 1979ರಲ್ಲಿ ಪಾದಾರ್ಪಣೆ ಮಾಡಿದ್ದ ಯಶ್‌ಪಾಲ್, 1978ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಶರ್ಮಾ ಮಡದಿ ರೇಣು ಶರ್ಮಾ, ಇಬ್ಬರು ಪುತ್ರಿಯರಾದ ಪೂಜಾ, ಪ್ರೀತಿ ಮತ್ತು ಒಬ್ಬ ಪುತ್ರ ಚಿರಾಗ್ ಶರ್ಮಾ ಅವರನ್ನು ಅಗಲಿದ್ದಾರೆ.

ಕ್ರಿಕೆಟ್ ನಿವೃತ್ತಿಯ ಬಳಿಕ ಶರ್ಮಾ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ), ಪಂಜಾಬ್ ಮತ್ತು ಹರ್ಯಾಣ ಕ್ರಿಕೆಟ್‌ನಲ್ಲಿ ಬೇರೆ ಬೇರೆ ಕರ್ವವ್ಯಗಳನ್ನು ನಿಭಾಯಿಸಿದ್ದಾರೆ. ಕ್ರಿಕೆಟ್ ವಿಶ್ಲೇಷಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Story first published: Tuesday, July 13, 2021, 12:24 [IST]
Other articles published on Jul 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+