ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ನಾಯಕತ್ವದ ಬದಲಾವಣೆ ಬಗ್ಗೆ ಹರ್ಭಜನ್ ಸಿಂಗ್ ಕುತೂಹಲಕಾರಿ ಹೇಳಿಕೆ

Harbhajan Singh statement on Team India t20 captaincy said Hardik Pandya best option

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಘಾತಕಾರಿಯಾಗಿ ಸೋಲು ಅನುಭವಿಸಿ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಳಿಸಿಕೊಂಡಿತ್ತು. ಈ ಸೋಲಿನ ಬಳಿಕ ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾ ಟಿ20 ಮಾದರಿಗೆ ನಾಯಕನ ಬದಲಾವಣೆಯಾಗಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅಭಿಮಾನಿಗಲು ಕೂಡ ಈ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅದರಲ್ಲೂ ಟೀಮ್ ಇಂಡಿಯಾದ ಟಿ20 ನಾಯಕತ್ವ ರೋಹಿತ್ ಶರ್ಮಾ ಅವರಿಂದ ಹಾರ್ದಿಕ್ ಪಾಂಡ್ಯ ಹೆಗಲೇರಲಿ ಎಂಬ ಅಭಿಪ್ರಾಯ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ಅನೇಕ ಮಾಜಿ ಕ್ರಿಕೆಟಿಗರು ಕೂಡ ಇದೇ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಈ ಬಗ್ಗೆ ಮಾತನಾಡಿದ್ದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?

ನಾಯಕತ್ವದ ರೇಸ್‌ನಲ್ಲೇ ಇರಲಿಲ್ಲ ಹಾರ್ದಿಕ್ ಪಾಂಡ್ಯ!

ನಾಯಕತ್ವದ ರೇಸ್‌ನಲ್ಲೇ ಇರಲಿಲ್ಲ ಹಾರ್ದಿಕ್ ಪಾಂಡ್ಯ!

ಹಾಗೆ ನೋಡಿದರೆ ಹಾರ್ದಿಕ್ ಪಾಂಡ್ಯ ಈ ಹಿಂದೆ ಟೀಮ್ ಇಂಡಿಯಾ ನಾಯಕತ್ವದ ಸ್ಪರ್ಧೆಯಲ್ಲೇ ಇರಲಿಲ್ಲ. ಹಿಂದೆ ಯಾವುದೇ ತಂಡವನ್ನು ಮುನ್ನಡೆಸಿದ ಅನುಭವ ಕೂಡ ಹಾರ್ದಿಕ್ ಪಾಂಡ್ಯ ಅವರಲ್ಲಿ ಇರಲಿಲ್ಲ. ಆದರೆ ಐಪಿಎಲ್ 2022ರಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು ನಾಯಕನಾಗಿ ಹಾಗೂ ಆಟಗಾರನಾಗಿ ಅಮೋಗ ಪ್ರದರ್ಶಣ ನೀಡಿದ ಹಾರ್ದಿಕ್ ಪಾಂಡ್ಯ ಮೊದಲ ಪ್ರಯತ್ನದಲ್ಲಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು. ಬಳಿಕ ಟೀಮ್ ಇಂಡಿಯಾದ ನಾಯಕನ ಸರ್ಧೆಯಲ್ಲಿಯೂ ಹಾರ್ದಿಕ್ ಹೆಸರು ಪ್ರಮುಖವಾಗಿ ಕೇಳಿ ಬರತೊಡಗಿದೆ.

ನಾಯಕನಾಗಿ ಮತ್ತೆ ಮಿಂಚಿದ ಹಾರ್ದಿಕ್

ನಾಯಕನಾಗಿ ಮತ್ತೆ ಮಿಂಚಿದ ಹಾರ್ದಿಕ್

ಇನ್ನು ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಈ ಬಗ್ಗೆ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಮುನ್ನಡೆಸಿದ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಭಾರತ ತಂಡ ಚುಟುಕು ಸರಣಿಯನ್ನು ಕೂಡ ತನ್ನ ವಶಕ್ಕೆ ಪಡೆದುಕೊಂಡಿದೆ. ಹೀಗಾಗಿ ಈ ಕೂಡ ಈಗ ಮತ್ತಷ್ಟು ಜೋರಾಗಿದೆ.

ಹಾರ್ದಿಕ್ ಸೂಕ್ತ ಆಯ್ಕೆ ಎಂದ ಭಜ್ಜಿ

ಹಾರ್ದಿಕ್ ಸೂಕ್ತ ಆಯ್ಕೆ ಎಂದ ಭಜ್ಜಿ

ಇನ್ನು ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪಿಟಿಐ ಜೊತೆಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಹರ್ಭಜನ್ ಸಿಂಗ್‌ ಬಳಿ ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾ ನಾಯಕತ್ವ ಹಾರ್ದಿಕ್ ಪಾಂಡ್ಯ ಹೆಗಲೇರಬೇಕಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಹರ್ಭಜನ್ ಸಿಂಗ್ "ನಾಯಕತ್ವ ಬದಲಾವಣೆಯಾದರೆ ಅದಕ್ಕೆ ಹಾರ್ದಿಕ್ ಪಾಂಡ್ಯ ಸೂಕ್ತವಾದ ಆಯ್ಕೆ" ಎಂದಿದ್ದಾರೆ.

ಕೋಚ್ ಸ್ಥಾನಕ್ಕೆ ನೆಹ್ರಾ ಸೂಕ್ತ ಎಂದಿದ್ದ ಹರ್ಭಜನ್

ಕೋಚ್ ಸ್ಥಾನಕ್ಕೆ ನೆಹ್ರಾ ಸೂಕ್ತ ಎಂದಿದ್ದ ಹರ್ಭಜನ್

ಇನ್ನು ಇದಕ್ಕೂ ಮುನ್ನ ಹರ್ಭಜನ್ ಸಿಂಗ್ ಟೀಮ್ ಇಂಡಿಯಾ ಟಿ20 ತಂಡದ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರಿಗಿಂತಲೂ ಆಶಿಶ್ ನೆಹ್ರಾ ಅತ್ಯಂತ ಸೂಕ್ತ ಎಂದಿದ್ದರು. "ಟಿ20 ಮಾದರಿಯಲ್ಲಿ ಆಶಿಶ್ ನೆಹ್ರಾ ಅವರಂತಾ ಇತ್ತೀಚೆಗೆ ನಿವೃತ್ತ ಆಟಗಾರರು ಕೋಚ್ ಆಗುವುದು ಹೆಚ್ಚು ಸೂಕ್ತವಾಗುತ್ತದೆ. ರಾಹುಲ್ ದ್ರಾವಿಡ್ ಅವರ ಮೇಲೆ ಗೌರವದೊಂದಿಗೆ ಹೇಳುತ್ತಿದ್ದೇನೆ, ನೆಹ್ರಾ ಅವರು ಈ ಮಾದರಿಯನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು ಎಂದಿದ್ದಾರೆ. ನಾವು ದ್ರಾವಿಡ್ ಅವರೊಂದಿಗೆ ಸುದೀರ್ಘ ಕಾಲ ಆಡಿದ್ದೇವೆ. ಅವರಲ್ಲಿ ಅಗಾಧವಾದ ಜ್ಞಾನವಿದೆ. ಆದರೆ ಟಿ20 ಮಾದರಿ ಕಠಿಣವಾಗಿದೆ" ಎಂದಿದ್ದಾರೆ ಹರ್ಭಜನ್ ಸಿಂಗ್.

Story first published: Saturday, November 26, 2022, 21:36 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X