ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Ranking: ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್‌ಸ್ವೀಪ್ ನಂತರ ಭಾರತವನ್ನು ಹಿಂದಿಕ್ಕಿದ ಪಾಕಿಸ್ತಾನ

ICC ODI Rankings: Pakistan Overtake India After Clean Sweep Against West Indies

ಮುಲ್ತಾನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ ನಂತರ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನವು ಸೋಮವಾರ ಬಿಡುಗಡೆಯಾದ ಐಸಿಸಿ ಏಕದಿನ ರ್‍ಯಾಂಕಿಂಗ್‌ನ ಇತ್ತೀಚಿನ ಮರುಹೊಂದಾಣಿಕೆಯಲ್ಲಿ ಟೀಮ್ ಇಂಡಿಯಾವನ್ನು ಐದನೇ ಸ್ಥಾನಕ್ಕೆ ತಳ್ಳಿ ನಾಲ್ಕನೇ ಸ್ಥಾನಕ್ಕ ಮೇಲೇರಿದೆ.

IND vs SA: ಟಿ20ಯ ಈ ಅಂಕಿ-ಅಂಶದಲ್ಲಿ ವೀರೇಂದ್ರ ಸೆಹ್ವಾಗ್‌ರನ್ನು ಹಿಂದಿಕ್ಕಿದ ಇಶಾನ್ ಕಿಶನ್IND vs SA: ಟಿ20ಯ ಈ ಅಂಕಿ-ಅಂಶದಲ್ಲಿ ವೀರೇಂದ್ರ ಸೆಹ್ವಾಗ್‌ರನ್ನು ಹಿಂದಿಕ್ಕಿದ ಇಶಾನ್ ಕಿಶನ್

ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ ಪಾಕಿಸ್ತಾನವು 106 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಟೀಮ್ ಇಂಡಿಯಾಗಿಂತ ಒಂದು ಅಂಕದಿಂದ ಮುನ್ನಡೆ ಸಾಧಿಸಿದೆ. ನ್ಯೂಜಿಲೆಂಡ್ 125 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ (124) ಮತ್ತು ಆಸ್ಟ್ರೇಲಿಯಾ (107) ನಂತರದ ಸ್ಥಾನಗಳಲ್ಲಿವೆ.

ಭಾರತವು ರ್‍ಯಾಂಕಿಂಗ್‌ನಲ್ಲಿ ಏರಿಕೆಯಾಗುವ ಅವಕಾಶವಿದೆ

ಭಾರತವು ರ್‍ಯಾಂಕಿಂಗ್‌ನಲ್ಲಿ ಏರಿಕೆಯಾಗುವ ಅವಕಾಶವಿದೆ

ಏಕದಿನ ಸರಣಿಯ ಆರಂಭದ ಮೊದಲು ಪಾಕಿಸ್ತಾನವು 102ರ ರೇಟಿಂಗ್‌ನೊಂದಿಗೆ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿತ್ತು. ಆದಾಗ್ಯೂ, ಪಾಕಿಸ್ತಾನವು ತನ್ನ ಮುಂದಿನ ಪಂದ್ಯವನ್ನು ಆಡುವ ಮೊದಲು ಆಗಸ್ಟ್‌ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ ಮೂರು ಏಕದಿನ ಪಂದ್ಯಗಳನ್ನು ಆಡುವುದರಿಂದ ಭಾರತವು ರ್‍ಯಾಂಕಿಂಗ್‌ನಲ್ಲಿ ಏರಿಕೆಯಾಗುವ ಅವಕಾಶವನ್ನು ಹೊಂದಿರುತ್ತದೆ.

ಕಳೆದೆರಡು ವರ್ಷಗಳಿಂದ 50 ಓವರ್‌ಗಳ ಮಾದರಿಯಲ್ಲಿ ಪಾಕಿಸ್ತಾನ ಅದ್ಭುತ ಪ್ರದರ್ಶನ ನೀಡಿತ್ತಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ಹೊರತಾಗಿ, ಪಾಕಿಸ್ತಾನಕ್ಕೆ ಬಂದ ಎಲ್ಲ ಪ್ರವಾಸಿ ತಂಡಗಳ ಮೇಲೆ ಸವಾರಿ ಮಾಡಿದೆ. ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 2-1 ಸರಣಿ ಗೆಲುವುಗಳನ್ನು ಒಳಗೊಂಡಂತೆ ಏಕದಿನ ಸರಣಿ ವಿಜಯಶಾಲಿಯಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ 3-0 ಅಂತರದಿಂದ ಗೆದ್ದ ಪಾಕಿಸ್ತಾನ

ವೆಸ್ಟ್ ಇಂಡೀಸ್ ವಿರುದ್ಧ 3-0 ಅಂತರದಿಂದ ಗೆದ್ದ ಪಾಕಿಸ್ತಾನ

ಪಾಕಿಸ್ತಾನವು 1998ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡ ಆಸ್ಟ್ರೇಲಿಯಾವನ್ನು ಅದೇ ಅಂತರದಿಂದ ಸೋಲಿಸಿದರು. ವೆಸ್ಟ್ ಇಂಡೀಸ್ ಪಾಕಿಸ್ತಾನದ ವಿರುದ್ಧ 3-0 ಅಂತರದಿಂದ ಸೋತಿದ್ದರಿಂದ ರ್‍ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿ ಮುಂದುವರೆದಿದೆ.

ಈ ಉತ್ತಮ ಮಟ್ಟದ ರ್‍ಯಾಂಕಿಂಗ್ ಬಾಬರ್ ಅಜಮ್ ಅವರ ನಾಯಕತ್ವದಲ್ಲಿ ಬಂದಿದೆ. ಅಜಮ್ ಅವರು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನಕ್ಕೆ ಉದಾಹರಣೆಯಾಗಿ ಮುನ್ನಡೆಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಶತಕ ಸೇರಿದಂತೆ, ಎರಡು ಬಾರಿ ಸತತ ಮೂರು ಏಕದಿನ ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ 2016ರಲ್ಲಿಯೂ ಸತತ ಮೂರು ಏಕದಿನ ಶತಕದ ಸಾಧನೆಯನ್ನು ಮಾಡಿದ್ದರು.

ಸತತ ಒಂಬತ್ತು ಬಾರಿಯ 50-ಪ್ಲಸ್ ಸ್ಕೋರ್‌

ಸತತ ಒಂಬತ್ತು ಬಾರಿಯ 50-ಪ್ಲಸ್ ಸ್ಕೋರ್‌

ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕದೊಂದಿಗೆ, ಬಾಬರ್ ಅಜಮ್ ಎಲ್ಲಾ ಸ್ವರೂಪಗಳಲ್ಲಿ ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಒಂಬತ್ತು ಬಾರಿಯ 50-ಪ್ಲಸ್ ಸ್ಕೋರ್‌ಗಳ ವಿಶ್ವ ದಾಖಲೆಯನ್ನು ಮುರಿದರು.

ಏಕದಿನ ಸ್ವರೂಪದಲ್ಲಿ ಅಗ್ರ ಶ್ರೇಯಾಂಕದ ಬ್ಯಾಟರ್ ವೃತ್ತಿ ಜೀವನದುದ್ದಕ್ಕೂ ವಿಶ್ವಾಸಾರ್ಹ ಆಟಗಾರರ ಪಡೆಯನ್ನು ನಿರ್ಮಿಸಿದ್ದಾರೆ. ಅವರಲ್ಲಿ ಒಬ್ಬರು ಇಮಾಮ್-ಉಲ್-ಹಕ್. ಅವರ ಕೊನೆಯ ಏಳು ಏಕದಿನ ಪಂದ್ಯಗಳಲ್ಲಿ 50-ಪ್ಲಸ್ ಸ್ಕೋರ್‌ಗಳನ್ನು ಹೊಂದಿದ್ದಾರೆ.

ಐಸಿಸಿ ವರ್ಷದ ಪುರುಷರ ಆಟಗಾರ ಶಾಹೀನ್ ಅಫ್ರಿದಿ ಅವರು ಹ್ಯಾರಿಸ್ ರೌಫ್, ಹಸನ್ ಅಲಿ, ಇಮಾದ್ ವಾಸಿಮ್ ಮತ್ತು ಶಾದಾಬ್ ಖಾನ್ ಅವರನ್ನು ಒಳಗೊಂಡಿರುವ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ICC ಪುರುಷರ ಮೇ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಏಂಜೆಲೊ ಮ್ಯಾಥ್ಯೂಸ್

ICC ಪುರುಷರ ಮೇ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಏಂಜೆಲೊ ಮ್ಯಾಥ್ಯೂಸ್

ಶ್ರೀಲಂಕಾದ ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಮೇ 2022ರ ಐಸಿಸಿ ಪುರುಷರ ತಿಂಗಳ ಆಟಗಾರ ಎಂದು ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಮೇ 2022ರ ತಿಂಗಳ ಆಟಗಾರರನ್ನು ಘೋಷಿಸಿದೆ.

ಏಂಜೆಲೊ ಮ್ಯಾಥ್ಯೂಸ್ ತಮ್ಮದೇ ದೇಶದ ಅಸಿತಾ ಫೆರ್ನಾಂಡೋ ಮತ್ತು ಬಾಂಗ್ಲಾದೇಶದ ಸ್ಟಾರ್ ಮುಶ್ಫಿಕರ್ ರಹೀಮ್ ಅವರ ನಡುವಿನ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗೆದ್ದರು. ಬಾಂಗ್ಲಾದೇಶದ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ನಂತರ ಮೇ ತಿಂಗಳಲ್ಲಿ ಮ್ಯಾಥ್ಯೂಸ್ ಅವರನ್ನು ಅತ್ಯುತ್ತಮ ಪುರುಷ ಆಟಗಾರನಾಗಿ ಆಯ್ಕೆ ಮಾಡಲಾಯಿತು. ಅಲ್ಲಿ ಅವರು ಎರಡು ಶತಕಗಳನ್ನು ಒಳಗೊಂಡಂತೆ 344 ರನ್‌ಗಳೊಂದಿಗೆ ಅತ್ಯಧಿಕ ರನ್ ಗಳಿಸಿದ ಆಟಗಾರರಾದರು.

Story first published: Monday, June 13, 2022, 18:35 [IST]
Other articles published on Jun 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X