ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವರ್ಷದ ಮಹಿಳಾ ಟಿ20 ತಂಡದಲ್ಲಿ ನಾಲ್ವರು ಭಾರತೀಯರು: ದಾಖಲೆ ಬರೆದ ಸ್ಮೃತಿ ಮಂದಾನ

ICC Revealed Their Womens T20I Team Of The Year 2022: Smriti, Deepti, Renuka, Richa Get Place

ಬಹು ನಿರೀಕ್ಷಿತ ಐಸಿಸಿ ವರ್ಷದ ಮಹಿಳಾ ಟಿ20 ತಂಡವನ್ನು ಪ್ರಕಟಿಸಲಾಗಿದೆ. ಭಾರತದ ನಾಲ್ವರು ಕ್ರಿಕೆಟಿಗರು ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಐಸಿಸಿ ತಂಡದಲ್ಲಿ ಹೆಚ್ಚಿನ ಆಟಗಾರರನ್ನು ಹೊಂದಿರುವ ಹೆಮ್ಮೆ ಭಾರತದ ಪಾಲಿಗೆ ಸಂದಿದೆ.

ಭಾರತವನ್ನು ಹೊರತುಪಡಿಸಿ ಆಸ್ಟ್ರೇಲಿಯಾದ ಮೂವರು ಆಟಗಾರ್ತಿಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶ್ರೀಲಂಕಾ, ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್‌ ತಂಡದಿಂದ ತಲಾ ಒಬ್ಬರು ಮಾತ್ರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಸೋಫಿ ಡಿವೈನ್‌ರನ್ನು ವರ್ಷದ ಟಿ20 ತಂಡಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.

IND vs NZ T20 Series: ಟಿ20 ತಂಡಕ್ಕೆ ಆಯ್ಕೆಯಾದ ಆಟಗಾರರಿಗೆ ರಾಂಚಿಗೆ ಬರುವಂತೆ ಬಿಸಿಸಿಐ ಸೂಚನೆIND vs NZ T20 Series: ಟಿ20 ತಂಡಕ್ಕೆ ಆಯ್ಕೆಯಾದ ಆಟಗಾರರಿಗೆ ರಾಂಚಿಗೆ ಬರುವಂತೆ ಬಿಸಿಸಿಐ ಸೂಚನೆ

ಸ್ಮೃತಿ ಮಂದಾನ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ನಾಲ್ಕು ಬಾರಿ ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಎನ್ನುವ ಕೀರ್ತಿಗೆ ಭಾರತದ ಸ್ಟಾರ್ ಆಟಗಾರ್ತಿ ಭಾಜನರಾಗಿದ್ದಾರೆ. 2018, 2019, 2021 ಮತ್ತು 2022ರಲ್ಲಿ ಘೋಷಿಸಲಾದ ಐಸಿಸಿ ವರ್ಷದ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ. 2022ರ ವರ್ಷದಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ ವರ್ಷದ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.

 2022ರಲ್ಲಿ ಅತ್ಯುತ್ತಮ ಪ್ರದರ್ಶನ

2022ರಲ್ಲಿ ಅತ್ಯುತ್ತಮ ಪ್ರದರ್ಶನ

2022ರಲ್ಲಿ ಭಾರತ ತಂಡದಲ್ಲಿ ಸ್ಮೃತಿ ಮಂದಾನ ಮತ್ತು ಉಳಿದ ಮೂವರು ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸ್ಮೃತಿ ಮಂದಾನ 2022ರಲ್ಲಿ 21 ಟಿ20 ಇನ್ನಿಂಗ್ಸ್‌ನಲ್ಲಿ 33 ಸರಾಸರಿ ಮತ್ತು 133.48 ಸ್ಟ್ರೈಕ್‌ರೇಟ್‌ನಲ್ಲಿ 594 ರನ್ ಗಳಿಸಿ ಮಿಂಚಿದ್ದಾರೆ, ಇದರಲ್ಲಿ 5 ಅರ್ಧಶತಕ ಕೂಡ ಸೇರಿವೆ.

2022ರಲ್ಲಿ ಟಿ20 ಕ್ರಿಕೆಟ್‌ನಲ್ಲಿ 29 ವಿಕೆಟ್ ಪಡೆದು ಮಿಂಚಿದ ದೀಪ್ತಿ ಶರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್‌ನಲ್ಲಿ 13 ವಿಕೆಟ್ ಪಡೆದು ಭಾರತ ಕಪ್ ಗೆಲ್ಲುವಲ್ಲಿ ಸಹಕಾರಿಯಾಗಿದ್ದರು. ಅಲ್ಲದೆ, ಬ್ಯಾಟಿಂಗ್‌ನಲ್ಲಿ ಕೂಡ ಅವರು ಮಿಂಚಿದ್ದು, 2022ರಲ್ಲಿ 136.02 ಸ್ಟ್ರೈಕ್‌ರೇಟ್‌ನಲ್ಲಿ 370 ರನ್ ಗಳಿಸಿದ್ದಾರೆ.

2022ರಲ್ಲಿ ಟಿ20 ಮಾದರಿಯಲ್ಲಿ 150ಕ್ಕಿಂತ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ರಿಚಾ ಘೋಷ್ ಕೂಡ ಐಸಿಸಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 18 ಟಿ20 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ 259 ರನ್ ಗಳಿಸಿದ್ದಾರೆ.

ಬೌಲರ್ ರೇಣುಕಾ ಸಿಂಗ್ ಕೂಡ 2022ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಟಿ20 ಮಾದರಿಯಲ್ಲಿ 23.95 ಸರಾಸರಿಯಲ್ಲಿ 22 ವಿಕೆಟ್ ನೀಡಿದ್ದಾರೆ. ಅವರ ಎಕಾನಮಿ 6.50 ಆಗಿದೆ.

 ನ್ಯೂಜಿಲೆಂಡ್‌ನ ಸೋಫಿ ಡಿವೈನ್ ನಾಯಕಿ

ನ್ಯೂಜಿಲೆಂಡ್‌ನ ಸೋಫಿ ಡಿವೈನ್ ನಾಯಕಿ

ನ್ಯೂಜಿಲೆಂಡ್‌ನ ಆಲ್‌ರೌಂಡರ್ ಸೋಫಿ ಡಿವೈನ್‌ ವರ್ಷದ ತಂಡಕ್ಕೆ ನಾಯಕಿಯಾಗಿದ್ದಾರೆ. 2022ರಲ್ಲಿ ಟಿ20 ಮಾದರಿಯಲ್ಲಿ 389 ರನ್ ಗಳಿಸಿರುವ ಅವರು 13 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕಗಳನ್ನು ಗಳಿಸಿ ಅವರ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದರು. ಅಲ್ಲದೆ ಟೂರ್ನಿಯಲ್ಲಿ 6 ವಿಕೆಟ್ ಪಡೆದು ಮಿಂಚಿದ್ದರು. ನ್ಯೂಜಿಲೆಂಡ್ ತಂಡದ ಆಧಾರಸ್ಥಂಭವಾಗಿರುವ ಅವರು ಸಹಜವಾಗಿಯೇ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

 ತಂಡದಲ್ಲಿ ಸ್ಥಾನ ಪಡೆದ ಇತರರು

ತಂಡದಲ್ಲಿ ಸ್ಥಾನ ಪಡೆದ ಇತರರು

ಇನ್ನು 2022ರಲ್ಲಿ 14 ಟಿ20 ಪಂದ್ಯಗಳಲ್ಲಿ 56.12 ಸರಾಸರಿ ಮತ್ತು 134.43 ಸ್ಟ್ರೈಕ್‌ರೇಟ್‌ನಲ್ಲಿ 449 ರನ್ ಗಳಿಸಿರುವ ಬೆತ್ ಮೂನಿ ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 152.11 ಸ್ಟ್ರೈಕ್‌ರೇಟ್‌ನಲ್ಲಿ 216 ರನ್ ಕಲೆಹಾಕಿರುವ ಆಶ್‌ ಗಾರ್ಡನರ್ ಮತ್ತು 60ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 435 ರನ್‌ ಗಳಿಸಿ, 13 ವಿಕೆಟ್ ಪಡೆದಿರುವ ತಹಿಲಾ ಮೆಕ್‌ಗ್ರಾತ್‌ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಆಲ್‌ರೌಂಡರ್ ನಿದಾ ದರ್ ಪಾಕಿಸ್ತಾನದಿಂದ ಆಯ್ಕೆಯಾಗಿರುವ ಏಕೈಕ ಆಟಗಾರ್ತಿಯಾಗಿದ್ದಾರೆ. 18.33 ಸರಾಸರಿಯಲ್ಲಿ 15 ವಿಕೆಟ್ ಪಡೆದಿದ್ದಾರೆ, ಅವರ ಎಕಾನಮಿ 5.50 ಆಗಿದೆ. 17 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿರುವ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಮತ್ತು 19 ಪಂದ್ಯಗಳಲ್ಲಿ 27 ವಿಕೆಟ್ ಪಡೆದು ಮಿಂಚಿರುವ ಶ್ರೀಲಂಕಾದ ಸ್ಪಿನ್ನರ್ ಇನೋಕಾ ರಣವೀರ ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Story first published: Monday, January 23, 2023, 15:37 [IST]
Other articles published on Jan 23, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X