ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Team Of 2022: 3ನೇ ಏಕದಿನ ಪಂದ್ಯಕ್ಕೂ ಮುನ್ನ ಐತಿಹಾಸಿಕ ದಾಖಲೆ ಬರೆದ ವಿರಾಟ್ ಕೊಹ್ಲಿ

ICC T20 Team Of 2022: Virat Kohli Makes Another Historic Record Ahead Of 3rd ODI Against New Zealand

ಮಂಗಳವಾರ, ಜನವರಿ 24ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್‌ಸ್ವೀಪ್ ಮಾಡಲು ಎದುರು ನೋಡುತ್ತಿದೆ.

2023ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯನ್ನು ತವರಿನಲ್ಲಿ ಆಯೋಜಿಸಲು ಸಿದ್ಧವಾಗಿರುವ ಭಾರತ ತಂಡ, ಅದಕ್ಕೂ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರುವ ಸಾಧ್ಯತೆ ಇದೆ.

IND vs NZ 3rd ODI: ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ, ಟಿವಿ & ಲೈವ್ ಸ್ಟ್ರೀಮಿಂಗ್ ವಿವರIND vs NZ 3rd ODI: ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ, ಟಿವಿ & ಲೈವ್ ಸ್ಟ್ರೀಮಿಂಗ್ ವಿವರ

ಕ್ರಿಕೆಟ್ ಆಡಿದ ಪ್ರತಿ ದಿನವೂ, ಒಂದೊಂದು ದಾಖಲೆ ಮುರಿಯುವುದು ಮತ್ತು ದಾಖಲೆ ನಿರ್ಮಿಸುವುದು, ಇದು ಕಳೆದ ಒಂದು ದಶಕದಿಂದ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಮಾಡುತ್ತಿರುವ ಕೆಲಸವಾಗಿದೆ. 'ಸಾರ್ವಕಾಲಿಕ ಶ್ರೇಷ್ಠ'ರಲ್ಲಿ ಒಬ್ಬರಾಗಿರುವ ಭಾರತದ ಮಾಜಿ ನಾಯಕ ಇದೀಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದ್ದಾರೆ.

ವರ್ಷದ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ

ವರ್ಷದ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಭಾರತ ತಂಡದ ಮಾಜಿ ನಾಯಕನೂ ಆಗಿರುವ ವಿರಾಟ್ ಕೊಹ್ಲಿ, ಐಸಿಸಿ ಏಕದಿನ ವಿಶ್ವಕಪ್‌ನ ವರ್ಷವನ್ನು ಅದ್ಭುತ ಫಾರ್ಮ್‌ನೊಂದಿಗೆ ಆರಂಭಿಸಿದ್ದಾರೆ. ಇನ್ಮುಂದೆ ವಿರಾಟ್ ಕೊಹ್ಲಿ ಆಡುವ ಪ್ರತಿ ಪಂದ್ಯದಲ್ಲೂ ದಾಖಲೆಗಳನ್ನು ಅಳಿಸಿ ಹಾಕುವುದು ಮತ್ತು ಹೊಸ ದಾಖಲೆಗಳನ್ನು ಸ್ಥಾಪಿಸುವುದು ನಾವು ನೋಡಬಹುದು.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ, ಜನವರಿ 23ರಂದು ಐಸಿಸಿ 2022ರ ಟಿ20 ತಂಡವನ್ನು ಘೋಷಿಸಿದೆ. ಇದರಲ್ಲಿ ಭಾರತದ ವಿರಾಟ್ ಕೊಹ್ಲಿ ಸೇರಿ ಮೂವರು ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಅವರು ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗೆ ವರ್ಷದ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಎಲ್ಲ ಸ್ವರೂಪಗಳ ತಂಡದಲ್ಲಿ ಸ್ಥಾನ ವಿಶ್ವದ ಮೊದಲ ಆಟಗಾರ

ಎಲ್ಲ ಸ್ವರೂಪಗಳ ತಂಡದಲ್ಲಿ ಸ್ಥಾನ ವಿಶ್ವದ ಮೊದಲ ಆಟಗಾರ

ಕಳೆದ ವರ್ಷ ಟಿ20 ಕ್ರಿಕೆಟ್‌ನಲ್ಲಿ ಈ ಪ್ರಶಸ್ತಿಯನ್ನು ಪರಿಚಯಿಸಿದ ನಂತರ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಇನ್ನು ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ತನ್ನ ತಂಡವನ್ನು ಮುನ್ನಡೆಸಿದ್ದ ಇಂಗ್ಲೆಂಡ್‌ನ ನಾಯಕ ಜೋಸ್ ಬಟ್ಲರ್ ಅವರನ್ನು ಐಸಿಸಿ ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇದೀಗ ಪುರುಷರ ಕ್ರಿಕೆಟ್ ಇತಿಹಾಸದಲ್ಲಿ ವರ್ಷದ ಟೆಸ್ಟ್, ಏಕದಿನ ಮತ್ತು ಟಿ20 ತಂಡದ ಪಟ್ಟಿಯಲ್ಲಿ ಸ್ಥಾನ ಪಡೆದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವರ್ಷದ ಐಸಿಸಿ ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿ ಮೂರು ಬಾರಿ (2017, 2018, ಮತ್ತು 2019) ಕಾಣಿಸಿಕೊಂಡಿದ್ದಾರೆ. ಆರು ಬಾರಿ ವರ್ಷದ ಏಕದಿನ ತಂಡದಲ್ಲಿ (2012, 2014, 2016, 2017, 2018, 2019) ಮತ್ತು ಮೊದಲ ವರ್ಷದ ಟಿ20 ತಂಡದಲ್ಲಿ (2022) ವಿರಾಟ್ ಕೊಹ್ಲಿ ಹೆಸರನ್ನು ಸೇರಿಸಲಾಗಿದೆ.

ಭಾರತದ ಮಾಜಿ ನಾಯಕ ಒಟ್ಟು 74 ಅಂತಾರಾಷ್ಟ್ರೀಯ ಶತಕ

ಭಾರತದ ಮಾಜಿ ನಾಯಕ ಒಟ್ಟು 74 ಅಂತಾರಾಷ್ಟ್ರೀಯ ಶತಕ

46 ಏಕದಿನ ಶತಕಗಳು, 27 ಟೆಸ್ಟ್ ಶತಕಗಳು ಮತ್ತು 1 ಟಿ20 ಶತಕವ ಒಳಗೊಂಡಂತೆ ಭಾರತದ ಮಾಜಿ ನಾಯಕ ಒಟ್ಟು 74 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿ, ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಮೋಘ ಶತಕ ಸಿಡಿಸುವ ಮೂಲಕ ಬ್ಯಾಟಿಂಗ್‌ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ವರ್ಷಗಳಿಂದ ಶತಕದ ಬರ ಎದುರಿಸಿದ್ದನ್ನು ಕೊನೆಗೊಳಿಸಿದ್ದರು. ವಿರಾಟ್ ಕೊಹ್ಲಿ ಆಡಿದ ಕೊನೆಯ 6 ಏಕದಿನ ಪಂದ್ಯಗಳಲ್ಲಿ 3 ಶತಕಗಳನ್ನು ಗಳಿಸಿದ್ದಾರೆ.

ಐಸಿಸಿಯು ವರ್ಷದ ಪುರುಷರ ಏಕದಿನ ತಂಡ, ವರ್ಷದ ಮಹಿಳಾ ಏಕದಿನ ತಂಡ ಮತ್ತು ವರ್ಷದ ಪುರುಷರ ಟೆಸ್ಟ್ ತಂಡವನ್ನು ಮಂಗಳವಾರ, ಜನವರಿ 24ರಂದು ಪ್ರಕಟಿಸಲಿದೆ.

Story first published: Monday, January 23, 2023, 23:00 [IST]
Other articles published on Jan 23, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X