ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Ban 2nd ODI : ಮೆಹಿದಿ ಹಸನ್ ಶತಕದ ಆಸರೆ: ಭಾರತಕ್ಕೆ 272 ರನ್‌ಗಳ ಗುರಿ ನೀಡಿದ ಬಾಂಗ್ಲಾದೇಶ

Ind vs Ban 2nd ODI : Mehidy Hasan Maiden Century Powers Bangladesh To Score 271 Runs

ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್‌ಗೆ 271 ರನ್ ಕಲೆಹಾಕಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಭಾರತೀಯ ಬೌಲರ್ ಗಳು ಆರಂಭದಲ್ಲಿ ಆಘಾತ ನೀಡಿದರು.

ಅನಾಮುಲ್ ಹಕ್ ಮಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಜೀವದಾನ ಪಡೆದರು ಅದರ ನಂತರದ ಎಸೆತದಲ್ಲಿಯೇ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ನಾಯಕ ಲಿಟ್ಟನ್ ದಾಸ್ ಕೂಡ 23 ಎಸೆತಗಳಲ್ಲಿ 7 ರನ್ ಗಳಿಸಿ ಬೌಲ್ಡ್ ಆದರು.

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಮತ್ತೆ ಅಗ್ರಸ್ಥಾನಕ್ಕೇರಿದ ಆಸಿಸ್ ಆಟಗಾರ ಮಾರ್ನಸ್ ಲ್ಯಾಬುಶೈನ್ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಮತ್ತೆ ಅಗ್ರಸ್ಥಾನಕ್ಕೇರಿದ ಆಸಿಸ್ ಆಟಗಾರ ಮಾರ್ನಸ್ ಲ್ಯಾಬುಶೈನ್

ನಜ್ಮುಲ್ ಹೊಸೈನ್ ಶಾಂಟೋ (21), ಶಕೀಬ್ ಅಲ್ ಹಸನ್ (8), ಮುಷ್ಫಿಕರ್ ರಹೀಮ್ (12) ಬೇಗನೆ ಔಟ್ ಆಗುವ ಮೂಲಕ ಬಾಂಗ್ಲಾದೇಶ ಸಂಕಷ್ಟಕ್ಕೆ ಸಿಲುಕಿತು. 18.6 ಓವರ್ ಗಳಲ್ಲಿ 69 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು, ಆದರೆ, ಇಂತಹ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿದ್ದು ಮೆಹಿದಿ ಹಸನ್ ಮಿರ್ಜಾ ಮತ್ತು ಮಹ್ಮದುಲ್ಲಾ. ಈ ಜೋಡಿ 168 ಎಸೆತಗಳಲ್ಲಿ 148 ರನ್ ಕಲೆಹಾಕುವ ಮೂಲಕ ಬಾಂಗ್ಲಾದೇಶ ಉತ್ತಮ ಮೊತ್ತ ಕಲೆಹಾಕಲು ಕಾರಣವಾದರು.

ಮೆಹಿದಿ ಹಸನ್ ಚೊಚ್ಚಲ ಶತಕ

ಮೆಹಿದಿ ಹಸನ್ ಚೊಚ್ಚಲ ಶತಕ

ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಈ ಜೋಡಿ ನಂತರ ವೇಗವಾಗಿ ರನ್ ಗಳಿಸಲು ಆರಂಭಿಸಿದರು. ಮಹ್ಮದುಲ್ಲಾ ರಿಯಾದ್ 96 ಎಸೆತಗಳಲ್ಲಿ 7 ಬೌಂಡರಿ ಸಹಿ 77 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಕಳೆದ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಿದ್ದ, ಮೆಹಿದಿ ಹಸನ್ ಮೀರಜ್ ಎರಡನೇ ಪಂದ್ಯದಲ್ಲಿ ಅದೇ ಆಟವನ್ನು ಮುಂದುವರೆಸಿದರು. 83 ಎಸೆತಗಳಲ್ಲಿ 8 ಬೌಂಡರಿ 4 ಶತಕದ ಸಹಿತ ಏಕದಿನ ಮಾದರಿಯಲ್ಲಿ ಚೊಚ್ಚಲ ಶತಕವನ್ನು ದಾಖಲಿಸಿದರು. ನಸುನ್ ಅಹ್ಮದ್ ಮತ್ತು ಮೆಹಿದಿ ಹಸನ್ ಕೊನೆಯ 24 ಎಸೆತಗಳಲ್ಲಿ 54 ರನ್ ಗಳಿಸುವ ಮೂಲಕ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು.

ಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಆರಂಭದಲ್ಲಿ ಮಿಂಚಿದ ಭಾರತ ಬೌಲರ್ ಗಳು

ಆರಂಭದಲ್ಲಿ ಮಿಂಚಿದ ಭಾರತ ಬೌಲರ್ ಗಳು

ಮೊಹಮ್ಮದ್ ಸಿರಾಜ್ ಇಬ್ಬರೂ ಆರಂಭಿಕರನ್ನು ಬೇಗನೆ ಔಟ್ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕೂಡ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಮುಷ್ಫೀಕರ್ ರಹೀಮ್, ಆಫಿಫ್ ಹೊಸೈನ್ ವಿಕೆಟ್ ಪಡೆಯುವ ಮೂಲಕ ಮಿಂಚಿದರು.

ಭರವಸೆಯ ವೇಗಿ ಉಮ್ರಾನ್ ಮಲಿಕ್ ಕೂಡ ಎರಡು ವಿಕೆಟ್ ಪಡೆಯುವ ಮೂಲಕ ಭರವಸೆ ಮೂಡಿಸಿದರು. ಉಮ್ರಾನ್ ಮಲಿಕ್ ವೇಗದ ಬೌಲಿಂಗ್‌ಗೆ ನಜ್ಮುಲ್ ಹೊಸೈನ್ ಶಾಂಟೋ ವಿಕೆಟ್ ಒಪ್ಪಿಸಿದರು. ಮಹ್ಮದುಲ್ಲಾ ರಿಯಾದ್ ಕೂಡ ಮಲಿಕ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಫೀಲ್ಡಿಂಗ್ ವೇಳೆ ಗಾಯಗೊಂಡ ರೋಹಿತ್ ಶರ್ಮಾ

ಫೀಲ್ಡಿಂಗ್ ವೇಳೆ ಗಾಯಗೊಂಡ ರೋಹಿತ್ ಶರ್ಮಾ

ಇನ್ನಿಂಗ್ಸ್‌ನ ಎರಡನೇ ಓವರ್ ನಲ್ಲಿಅನಾಮುಲ್ ಹಕ್ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ನಾಯಕ ರೋಹಿತ್ ಶರ್ಮಾ ಗಾಯಗೊಂಡರು. ಹೆಬ್ಬೆರಳಿಗೆ ಗಾಯವಾದ ನಂತರ ಅವರು ತಕ್ಷಣ ಮೈದಾನ ತೊರೆದರು. ಆಸ್ಪತ್ರೆಗೆ ತೆರಳಿ ಎಕ್ಸ್ ರೇ ಮಾಡಿಸಿದ ನಂತರ ಅವರು ಮೈದಾನಕ್ಕೆ ವಾಪಸಾದರು. ಗಾಯದ ಪ್ರಮಾಣ ಗಂಭೀರವಾಗಿರುವುದರಿಂದ ಅವರು ಬ್ಯಾಟಿಂಗ್ ಮಾಡದಿರಲು ನಿರ್ಧರಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಭಾರತದ ಪರವಾಗಿ ಇನ್ನಿಂಗ್ಸ್ ಆರಂಭಿಸುವುದು ನಿಶ್ಚಿತವಾಗಿದೆ. ಉಳಿದ ಪಂದ್ಯಗಳಿಗೆ ರೋಹಿತ್ ಶರ್ಮಾ ಲಭ್ಯವಿರುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಉಭಯ ತಂಡಗಳ ಪ್ಲೇಯಿಂಗ್ XI

ಉಭಯ ತಂಡಗಳ ಪ್ಲೇಯಿಂಗ್ XI

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್

ಬಾಂಗ್ಲಾದೇಶ : ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್

Story first published: Wednesday, December 7, 2022, 16:15 [IST]
Other articles published on Dec 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X