ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು

Star Weightlifter Mirabai Chanu Won Silver At World Weightlifting Championship In Colombia

ಭಾರತದ ಹೆಮ್ಮೆಯ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಮಣಿಕಟ್ಟಿನ ಗಾಯದ ನಡುವೆಯೂ ಛಲ ಬಿಡದೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಅವರು ಬೆಳ್ಳಿಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಟೋಕಿಯೋ ಒಲಿಂಪಿಕ್ ಬೆಳ್ಳಿಪದಕ ವಿಜೇತೆ ಮೀರಾಬಾಯಿ ಚಾನು, ಕೊಲಂಬಿಯಾದ ಬೊಗೋಟಾದಲ್ಲಿ ಬುಧವಾರ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಒಟ್ಟು 200 ಕೆ.ಜಿ. ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.

ಸ್ನ್ಯಾಚ್‌ನಲ್ಲಿ 87 ಕೆಜಿ ಎತ್ತುವಲ್ಲಿ ಯಶಸ್ವಿಯಾದ ಅವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದರು. ಚೀನಾದ ಜಿಯಾಂಗ್ ಹುಯಿಹುವಾ ಒಟ್ಟು 206 ಕೆ.ಜಿ. ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಚೀನಾದ ಮತ್ತೊಬ್ಬ ಆಟಗಾರ್ತಿ ಹೌ ಝಿಹುವಾ ಒಟ್ಟು 198 ಕೆ.ಜಿ. ಎತ್ತುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಪದಕ ಗೆದ್ದ ನಂತರ ಪ್ರತಿಕ್ರಿಯೆ ನೀಡಿದ ಮೀರಾಬಾಯಿ ಚಾನು ಮುಖ್ಯಕೋಚ್ ವಿಜಯ್ ಶರ್ಮಾ, "ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಾಗಿ ನಾವು ಯಾವುದೇ ಒತ್ತಡ ತೆಗೆದುಕೊಂಡಿಲ್ಲ. ಇದು ಮೀರಾಬಾಯಿ ಎತ್ತುವ ಸಾಮಾನ್ಯ ತೂಕವಾಗಿದೆ. ಇನ್ನುಮುಂದೆ ತೂಕವನ್ನು ಹೆಚ್ಚಿಸಲು ಮತ್ತು ಸುಧಾರಣೆ ಮಾಡುವ ಬಗ್ಗೆ ಅಭ್ಯಾಸ ಪ್ರಾರಂಭಿಸುತ್ತೇವೆ" ಎಂದು ಹೇಳಿದರು.

Star Weightlifter Mirabai Chanu Won Silver At World Weightlifting Championship In Colombia

2017ರಲ್ಲಿ ಕೂಡ ಗಾಯದ ನಡುವೆ ಚಿನ್ನ ಗೆದ್ದಿದ್ದ ಚಾನು

2017ರ ಸೆಪ್ಟೆಂಬರ್‍‌ ವೇಳೆ ತರಬೇತಿ ಅವಧಿಯಲ್ಲಿ ಮಣಿಕಟ್ಟಿಗೆ ಗಾಯಮಾಡಿಕೊಂಡಿದ್ದರು. ಅಕ್ಟೋಬರ್‌ನಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗಾಯದ ನಡುವೆಯೂ ಭಾಗವಹಿಸಿದ್ದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಜೊತೆಗೆ ಅದೇ ವರ್ಷ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದರು. ಈಗಲೂ ಅವರು ಮಣಿಕಟ್ಟಿನ ಗಾಯದ ನಡುವೆಯೇ ಬೆಳ್ಳಿ ಪದಕ ಗೆದ್ದಿದ್ದಾರೆ.

"ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದನ್ನು ತಪ್ಪಿಸಿಕೊಳ್ಳಲು ನಮಗೆ ಇಷ್ಟವಿರಲಿಲ್ಲ. ಆದರೆ, ಗಾಯದ ಸಮಸ್ಯೆಯಿಂದ ನಾವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇನ್ನುಮುಂದೆ ಅವರ ಮಣಿಕಟ್ಟಿನ ಗಾಯ ಸುಧಾರಿಸುವ ಬಗ್ಗೆ ಗಮನ ಹರಿಸಲಾಗುವುದು. ಮುಂದಿನ ಸ್ಪರ್ಧೆಗೆ ಸಾಕಷ್ಟು ಸಮಯ ಇರುವುದರಿಂದ ಅವರು ಸುಧಾರಿಸಿಕೊಳ್ಳಲಿದ್ದಾರೆ" ಎಂದು ಶರ್ಮಾ ತಿಳಿಸಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ ಮೀರಾಬಾಯಿ ಚಾನು, ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪದಕ ಗೆದ್ದುಕೊಂಡಿದ್ದಾರೆ.

2022 ರ ವಿಶ್ವ ಚಾಂಪಿಯನ್‌ಶಿಪ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಪಂದ್ಯವಾಗಿದೆ. 2024 ರ ಒಲಿಂಪಿಕ್ ಅರ್ಹತಾ ನಿಯಮದ ಅಡಿಯಲ್ಲಿ, ವೇಟ್ ಲಿಫ್ಟರ್ 2022 ವಿಶ್ವ ಚಾಂಪಿಯನ್‌ಶಿಪ್, 2023 ಕಾಂಟಿನೆಂಟಲ್ ಚಾಂಪಿಯನ್‌ಶಿಪ್, 2023 ಗ್ರ್ಯಾಂಡ್ ಪ್ರಿಕ್ಸ್ 1, 2023 ಗ್ರ್ಯಾಂಡ್ ಪ್ರಿಕ್ಸ್ II ಮತ್ತು 2024 ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾಗುತ್ತದೆ.

Story first published: Wednesday, December 7, 2022, 10:50 [IST]
Other articles published on Dec 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X