ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಂಚೆಸ್ಟರ್ ಪಂದ್ಯ ರದ್ದುಗೊಳಿಸುವ ಮುನ್ನ ಕೊಹ್ಲಿ ಮಾಡಿದ್ದ ಈ ಮನವಿಯನ್ನು ತಿರಸ್ಕರಿಸಿತ್ತು ಇಂಗ್ಲೆಂಡ್!

IND vs ENG: ECB rejected the request of Virat Kohli before postponing the Manchester test

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಚರ್ಚೆಗೀಡಾಗಿರುವ ವಿಷಯವೆಂದರೆ ಅದು ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ವಿಷಯ. ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 10ರ ಶುಕ್ರವಾರದಂದು ಆರಂಭವಾಗಬೇಕಿತ್ತು. ಆದರೆ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಇರುವಾಗ ಘೋಷಣೆಯೊಂದನ್ನು ಹೊರಡಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಐದನೇ ಟೆಸ್ಟ್ ಪಂದ್ಯ ರದ್ದಾಗಿದೆ ಎಂಬ ಮಾಹಿತಿಯನ್ನು ಕ್ರಿಕೆಟ್ ಅಭಿಮಾನಿಗಳ ಜೊತೆ ಹಂಚಿಕೊಂಡಿತು.

ಈ ಕಳಪೆ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲು ಆಗುವುದಿಲ್ಲ ಎಂದು ಕೊಂಕು ನುಡಿದ ಶೋಯೆಬ್ ಅಖ್ತರ್ಈ ಕಳಪೆ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲು ಆಗುವುದಿಲ್ಲ ಎಂದು ಕೊಂಕು ನುಡಿದ ಶೋಯೆಬ್ ಅಖ್ತರ್

ಈ ಪಂದ್ಯ ಆರಂಭಕ್ಕೂ ಮುನ್ನ ಭಾರತದ ತರಬೇತುದಾರರುಗಳಾದ ರವಿಶಾಸ್ತ್ರಿ, ಭರತ್ ಅರುಣ್ ಮತ್ತು ಆರ್ ಶ್ರೀಧರ್ ಹಾಗೂ ಫಿಸಿಯೋ ಓರ್ವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದಾದ ಬೆನ್ನಲ್ಲೇ ಪಂದ್ಯಕ್ಕೆ ಇನ್ನೆರಡು ದಿನಗಳು ಬಾಕಿ ಇರುವಾಗ ಮತ್ತೋರ್ವ ಫಿಸಿಯೋ ಯೋಗೇಶ್ ಪಾರ್ಮರ್ ಕೂಡ ಕೊರೋನಾ ಸೋಂಕಿಗೆ ಒಳಗಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈ ಕಾರಣದಿಂದಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರನ್ನು ಕಣಕ್ಕಿಳಿಸದಿರಲು ಬಿಸಿಸಿಐ ತೀರ್ಮಾನಿಸಿತು.

ನಂತರ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ಚರ್ಚೆಯನ್ನು ನಡೆಸಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಮುಂದಿನ ದಿನಗಳಲ್ಲಿ ಈ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಿದವು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಮುನ್ನಡೆಯನ್ನು ಸಾಧಿಸಿದ್ದು ಮುಂದಿನ ದಿನಗಳಲ್ಲಿ ರದ್ದಾಗಿರುವ ಐದನೇ ಟೆಸ್ಟ್ ಪಂದ್ಯ ಯಶಸ್ವಿಯಾಗಿ ಸಂಪೂರ್ಣಗೊಂಡ ನಂತರ ಸರಣಿಯಲ್ಲಿ ಟೀಮ್ ಇಂಡಿಯಾ ವಿಜೇತ ತಂಡವಾಗಿ ಹೊರಹೊಮ್ಮಲಿದೆಯಾ ಅಥವಾ ಸರಣಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆಯಾ ಎಂಬ ಫಲಿತಾಂಶ ಸಿಗಲಿದೆ.

ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್‌ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್‌ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!

ಇನ್ನು ಇಷ್ಟೆಲ್ಲಾ ಮಹತ್ವದ ಬೆಳವಣಿಗೆಗಳು ನಡೆದ ನಂತರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮ್ಯಾಂಚೆಸ್ಟರ್ ಪಂದ್ಯ ಆರಂಭಕ್ಕೂ ಕೆಲ ಗಂಟೆಗಳ ಮುನ್ನ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ಮಾಡಿದ್ದ ಮನವಿಯೊಂದು ಬೆಳಕಿಗೆ ಬಂದಿದ್ದು ಸಾಕಷ್ಟು ಸುದ್ದಿಗೆ ಕಾರಣವಾಗಿದೆ. ಹೌದು, ಮ್ಯಾಂಚೆಸ್ಟರ್ ಪಂದ್ಯ ರದ್ದಾಗುವ ಮುನ್ನ ವಿರಾಟ್ ಕೊಹ್ಲಿ ಮನವಿಯೊಂದನ್ನು ಮಾಡಿದ್ದು ಅದನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ ತಿರಸ್ಕರಿಸಿದೆ. ವಿರಾಟ್ ಕೊಹ್ಲಿ ಐದನೇ ಟೆಸ್ಟ್ ಪಂದ್ಯದ ಕುರಿತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬಳಿ ಮಾಡಿದ್ದ ಮನವಿಯ ಕುರಿತ ಮಾಹಿತಿ ಈ ಕೆಳಕಂಡಂತಿದೆ ಓದಿ..

ಮ್ಯಾಂಚೆಸ್ಟರ್ ಪಂದ್ಯದ ಕುರಿತಾಗಿ ಮನವಿ ಮಾಡಿಕೊಂಡಿದ್ದ ಕೊಹ್ಲಿ

ಮ್ಯಾಂಚೆಸ್ಟರ್ ಪಂದ್ಯದ ಕುರಿತಾಗಿ ಮನವಿ ಮಾಡಿಕೊಂಡಿದ್ದ ಕೊಹ್ಲಿ

ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗ ಪಂದ್ಯ ರದ್ದುಗೊಂಡು ಮುಂದೂಡಲ್ಪಟ್ಟಿತು. ಆದರೆ ಇದಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬಳಿ ಪಂದ್ಯವನ್ನು ಒಂದೆರಡು ದಿನಗಳ ಕಾಲ ಮುಂದೂಡುವಂತೆ ವಿರಾಟ್ ಕೊಹ್ಲಿ ಮನವಿಯನ್ನು ಮಾಡಿದ್ದರು. ತಂಡದಲ್ಲಿ ಕೊರೊನಾ ಭೀತಿಯಿದೆ, ಹೀಗಾಗಿ ಒಂದೆರಡು ದಿನಗಳ ಕಾಲ ಪಂದ್ಯವನ್ನು ಮುಂದೂಡಿದರೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಿಂದ ವಿರಾಟ್ ಕೊಹ್ಲಿ ಈ ಮನವಿಯನ್ನು ಮಾಡಿದ್ದರು. ಆದರೆ ವಿರಾಟ್ ಕೊಹ್ಲಿ ಮನವಿಯನ್ನು ಪರಿಗಣಿಸದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೊಹ್ಲಿ ಸಲಹೆಯನ್ನು ತಳ್ಳಿ ಹಾಕಿ ಪಂದ್ಯವನ್ನು ಮುಂದಿನ ದಿನಗಳಲ್ಲಿ ನಡೆಸುತ್ತೇವೆಂದು ಹೇಳಿ ರದ್ದು ಮಾಡಿತು.

ಬಿಸಿಸಿಐ ಜೊತೆ ಮಾತುಕತೆ ನಡೆಸಿ ಪಂದ್ಯವನ್ನು ಮುಂದೂಡಿದ ಇಸಿಬಿ

ಬಿಸಿಸಿಐ ಜೊತೆ ಮಾತುಕತೆ ನಡೆಸಿ ಪಂದ್ಯವನ್ನು ಮುಂದೂಡಿದ ಇಸಿಬಿ

ವಿರಾಟ್ ಕೊಹ್ಲಿ ಮನವಿಯನ್ನು ತಿರಸ್ಕರಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಂತರ ಬಿಸಿಸಿಐ ಅಧಿಕಾರಿಗಳ ಜೊತೆ ಮಾತುಕತೆಯನ್ನು ನಡೆಸಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯವನ್ನು ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ನಡೆಸಲು ತೀರ್ಮಾನಿಸಿ ಪಂದ್ಯವನ್ನು ಮುಂದೂಡಿ ಘೋಷಣೆಯನ್ನು ಹೊರಡಿಸಿತು.

ಮುಂದೂಡಲ್ಪಟ್ಟಿರುವ ಪಂದ್ಯ ಯಾವಾಗ ನಡೆಯಬಹುದು?

ಮುಂದೂಡಲ್ಪಟ್ಟಿರುವ ಪಂದ್ಯ ಯಾವಾಗ ನಡೆಯಬಹುದು?

ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಪಂದ್ಯವನ್ನು ಮುಂದಿನ ದಿನಗಳಲ್ಲಿ ನಡೆಸಲು ತೀರ್ಮಾನಿಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮುಂದೂಡಿದೆ. ಆದರೆ ಹೀಗೆ ಮುಂದೂಡಲ್ಪಟ್ಟಿರುವ ಟೆಸ್ಟ್ ಪಂದ್ಯ ಯಾವಾಗ ನಡೆಯಲಿದೆ ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ. ಮೂಲಗಳ ಪ್ರಕಾರ ಮುಂದಿನ ವರ್ಷ ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಸರಣಿಯನ್ನಾಡಲು ಮತ್ತೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ, ಈ ಸಂದರ್ಭದಲ್ಲಿಯೇ ಪ್ರಸ್ತುತ ಮುಂದೂಡಲ್ಪಟ್ಟಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ ಎಂಬ ಸುದ್ದಿ ಇದೆ.

Story first published: Saturday, September 11, 2021, 15:19 [IST]
Other articles published on Sep 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X