ಸಚಿನ್, ಕೊಹ್ಲಿ, ಪಾಂಟಿಂಗ್, ಎಬಿಡಿ; ಯಾರೂ ಮಾಡಿರದ ಸಾಧನೆ ಮಾಡಿದ ಮೊಹಮ್ಮದ್ ಶಮಿ!

ಕಾಲೆಳೆದ ಆಂಗ್ಲರಿಗೆ ಶಮಿ ಬುಮ್ರಾ ಮೈದಾನದಲ್ಲೇ ತಿರುಗೇಟು ಕೊಟ್ಟ ವಿಡಿಯೊ ವೈರಲ್ | Oneindia Kannada

ಮೊಹಮ್ಮದ್ ಶಮಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಐತಿಹಾಸಿಕ ಹಿನ್ನೆಲೆಯುಳ್ಳ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ ಭಾರತದ ಪರ ಆಕರ್ಷಕ ಅರ್ಧ ಶತಕ ಸಿಡಿಸುವುದರ ಮೂಲಕ ಮಿಂಚಿದರು.

ತುಟಿ ಮೇಲೆ ಬೆರಳಿಟ್ಟು ಸಂಭ್ರಮಿಸುವುದು ಯಾರ ವಿರುದ್ಧ ಎಂಬುದನ್ನು ಬಹಿರಂಗಪಡಿಸಿದ ಸಿರಾಜ್ತುಟಿ ಮೇಲೆ ಬೆರಳಿಟ್ಟು ಸಂಭ್ರಮಿಸುವುದು ಯಾರ ವಿರುದ್ಧ ಎಂಬುದನ್ನು ಬಹಿರಂಗಪಡಿಸಿದ ಸಿರಾಜ್

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ತಂಡ ತನ್ನ ನಾಲ್ಕನೇ ದಿನದಾಟವನ್ನು ಮುಗಿಸಿ 6 ವಿಕೆಟ್ ನಷ್ಟಕ್ಕೆ ಕೇವಲ 181 ರನ್ ಗಳಿಸಿತ್ತು. ಟೀಮ್ ಇಂಡಿಯಾ ಪರ ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ಅಜೇಯರಾಗಿ ಉಳಿದು ಐದನೇ ದಿನದ ಬ್ಯಾಟಿಂಗ್ ಆರಂಭಿಸಿದರು. ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳ ಪೈಕಿ ಅಜೇಯರಾಗಿ ಉಳಿದುಕೊಂಡಿದ್ದು ಕೇವಲ ರಿಷಭ್ ಪಂತ್ ಮಾತ್ರ. ಹೀಗಾಗಿ ಸಾಮಾನ್ಯವಾಗಿ ರಿಷಭ್ ಪಂತ್ ಮೇಲೆ ಕ್ರಿಕೆಟ್ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಇತ್ತು.
ಆದರೆ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾದ ರಿಷಭ್ ಪಂತ್ 22 ರನ್ ಗಳಿಸಿ ನಿರಾಸೆ ಮೂಡಿಸಿದರು, ಅತ್ತ ಇಶಾಂತ್ ಶರ್ಮಾ ಕೂಡ 16 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ನಲ್ಲಿ 39 ವರ್ಷಗಳಿಂದ ಯಾರೂ ಮುಟ್ಟದ ದಾಖಲೆಯನ್ನು ಮಾಡಿದ ಸಿರಾಜ್!ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ನಲ್ಲಿ 39 ವರ್ಷಗಳಿಂದ ಯಾರೂ ಮುಟ್ಟದ ದಾಖಲೆಯನ್ನು ಮಾಡಿದ ಸಿರಾಜ್!

ನಂತರ ಒಂಬತ್ತನೇ ವಿಕೆಟ್‍ಗೆ ಒಂದಾದ ಮೊಹಮ್ಮದ್ ಶಮಿ ಮತ್ತು ಬುಮ್ರಾ ಜೋಡಿ 89 ರನ್‌ಗಳ ಜತೆಯಾಟವಾಡುವ ಮೂಲಕ ಸೋಲಿನತ್ತ ಸಾಗುತ್ತಿದ್ದ ಟೀಮ್ ಇಂಡಿಯಾವನ್ನು ರಕ್ಷಿಸಿದರು. ಅದರಲ್ಲಿಯೂ ಯಾರೂ ಊಹಿಸಿರದ ರೀತಿ ಮೊಹಮ್ಮದ್ ಶಮಿ ಅರ್ಧಶತಕ ಬಾರಿಸಿ ಮಿಂಚಿದರು. 70 ಎಸೆತಗಳಿಗೆ ಅಜೇಯ 56 ರನ್ ಬಾರಿಸಿ ಮೊಹಮ್ಮದ್ ಶಮಿ ಮಿಂಚಿದರೆ, ಬುಮ್ರಾ 64 ಎಸೆತಗಳಲ್ಲಿ 34 ರನ್ ಬಾರಿಸಿ ಮಿಂಚಿದರು. ಹೀಗೆ ಅರ್ಧ ಶತಕ ಬಾರಿಸಿ ಟೀಂ ಇಂಡಿಯಾಗೆ ನೆರವಾದ ಮೊಹಮ್ಮದ್ ಶಮಿ ಲಾರ್ಡ್ಸ್ ಅಂಗಳದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನೇ ಮೊಹಮ್ಮದ್ ಶಮಿ ಹಿಂದಿಕ್ಕಿದ್ದು, ಅವರು ಮಾಡಿರುವ ಸಾಧನೆ ಈ ಕೆಳಕಂಡಂತಿದೆ ನೋಡಿ..

ಲಾರ್ಡ್ಸ್‌ನಲ್ಲಿ ಕೊಹ್ಲಿ, ಸಚಿನ್, ಪಾಂಟಿಂಗ್ ಮತ್ತು ಎಬಿಡಿಗಿಂತ ಮೊಹಮ್ಮದ್ ಶಮಿಯದ್ದೇ ಅತ್ಯಧಿಕ ರನ್!

ಲಾರ್ಡ್ಸ್‌ನಲ್ಲಿ ಕೊಹ್ಲಿ, ಸಚಿನ್, ಪಾಂಟಿಂಗ್ ಮತ್ತು ಎಬಿಡಿಗಿಂತ ಮೊಹಮ್ಮದ್ ಶಮಿಯದ್ದೇ ಅತ್ಯಧಿಕ ರನ್!

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ಬುಮ್ರಾ ಜತೆಗೂಡಿ 89 ರನ್‌ಗಳ ಅತ್ಯದ್ಭುತ ಜತೆ ಆಟವನ್ನಾಡಿದ ಮೊಹಮ್ಮದ್ ಶಮಿ ವೈಯಕ್ತಿಕವಾಗಿ 70 ಎಸೆತಗಳಲ್ಲಿ ಅಜೇಯ 56 ರನ್ ಬಾರಿಸಿ ಮಿಂಚಿದರು. ಈ ಮೂಲಕ ಲಾರ್ಡ್ಸ್ ಅಂಗಳದಲ್ಲಿ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಕಲೆ ಹಾಕದೆ ಇರುವಷ್ಟು ಅತ್ಯಧಿಕ ರನ್‌ನ್ನು ಮೊಹಮ್ಮದ್ ಶಮಿ ಕಲೆಹಾಕಿದ್ದಾರೆ. ಹೌದು ಮೊಹಮ್ಮದ್ ಶಮಿ ದಾಖಲಿಸಿರುವಷ್ಟು ರನ್‌ನ್ನು ಲಾರ್ಡ್ಸ್ ಅಂಗಳದಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್, ಜಾಕ್ಸ್ ಕಾಲಿಸ್, ಎಬಿ ಡಿವಿಲಿಯರ್ಸ್ ಮತ್ತು ಚೇತೇಶ್ವರ ಪೂಜಾರ ಕೂಡ ದಾಖಲಿಸಿಲ್ಲ!

ಅರ್ಧಶತಕ ಪೂರೈಸಿಕೊಳ್ಳಲು ಬೌಂಡರಿ ಮತ್ತು 92 ಮೀ ಸಿಕ್ಸರ್ ಚಚ್ಚಿದ ಮೊಹಮ್ಮದ್ ಶಮಿ

ಅರ್ಧಶತಕ ಪೂರೈಸಿಕೊಳ್ಳಲು ಬೌಂಡರಿ ಮತ್ತು 92 ಮೀ ಸಿಕ್ಸರ್ ಚಚ್ಚಿದ ಮೊಹಮ್ಮದ್ ಶಮಿ

ಇನ್ನು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ 40 ರನ್ ಕಲೆ ಹಾಕಿದ್ದಾಗ ಮೊಯಿನ್ ಅಲಿ ಓವರ್‌ನಲ್ಲಿ ಸತತವಾಗಿ ಒಂದು ಬೌಂಡರಿ ಮತ್ತು 92 ಮೀಟರ್ ಉದ್ದದ ಸಿಕ್ಸರ್ ಬಾರಿಸುವ ಮೂಲಕ ಅರ್ಧ ಶತಕವನ್ನು ಪೂರೈಸಿದರು.

ಯಾವುದೇ ಭಯವಿಲ್ಲದೇ ಸರಾಗವಾಗಿ ಬ್ಯಾಟ್ ಬೀಸಿದ ಶಮಿ

ಯಾವುದೇ ಭಯವಿಲ್ಲದೇ ಸರಾಗವಾಗಿ ಬ್ಯಾಟ್ ಬೀಸಿದ ಶಮಿ

ಭಾರತ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಔಟ್ ಆಗಿ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ ಕಣಕ್ಕಿಳಿದ ಮೊಹಮ್ಮದ್ ಶಮಿ ಯಾವುದೇ ಭಯವಿಲ್ಲದೆ ಐತಿಹಾಸಿಕ ಹಿನ್ನೆಲೆಯುಳ್ಳ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನುರಿತ ಬ್ಯಾಟ್ಸ್‌ಮನ್‌ ರೀತಿ ಹೊಡೆತಗಳನ್ನು ಹೊಡೆಯಲು ಆರಂಭಿಸಿದರು. ಓರ್ವ ಬೌಲರ್ ಈ ರೀತಿ ಭಯವಿಲ್ಲದೆ ಬ್ಯಾಟ್ ಬೀಸಬಹುದಾ ಎಂದು ಕ್ರಿಕೆಟ್ ಅಭಿಮಾನಿಗಳು ಶಮಿ ಬ್ಯಾಟಿಂಗ್ ನೋಡಿ ಆಶ್ಚರ್ಯಕ್ಕೊಳಗಾದದ್ದಂತೂ ನಿಜ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, August 17, 2021, 9:18 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X