ಭಾರತೀಯ ಬ್ಯಾಟರ್‌ಗಳ ಹುಳುಕು ಒಪ್ಪಿಕೊಂಡ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಭಾರತ ಆಘಾತಕಾರಿಯಾಗಿ ಸೋಲು ಕಂಡಿದೆ. ಮೊದಲ ಮೂರು ದಿನಗಳ ಕಾಲ ಪಂದ್ಯ ಸಂಪೂರ್ಣವಾಗಿ ಭಾರತದ ಹಿಡಿತದಲ್ಲಿದ್ದರೂ ನಂತರ ನಿಡಿದ ಕಳಪೆ ಪ್ರದರ್ಶನಕ್ಕೆ ಭಾರತ ಭಾರೀ ಬೆಲೆ ತೆತ್ತಿದೆ. ಈ ಮೂಲಕ ಭಾರತ ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲುವ ಮತ್ತೊಂದು ಅವಕಾಶವನ್ನು ಕಳೆದುಕೊಂಡಿದ್ದು ಸರಣಿ ಸಮಬಲದೊಂದಿಗೆ ಅಂತ್ಯವಾಗಿದೆ.

ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ಎರಡನೆ ಇನ್ನಿಂಗ್ಸ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿಯೂ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಹೊರತುಪಡಿಸಿ ಇರತ ಆಟಗಾರರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಹೀಗಾಗಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಬ್ಯಾಟಿಂಗ್ ಕೋಚ್ ಪ್ರಮುಖ ಹೇಳಿಕೆಯನ್ನು ನಿಡಿದ್ದು ಭಾರತೀಯ ಬ್ಯಾಟ್ಸ್‌ಮನ್‌ಗಳ ಒಂದು ದೌರ್ಬಲ್ಯವನ್ನು ಹೇಳಿಕೊಂಡಿದ್ದಾರೆ.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಶಾರ್ಟ್ ಎಸೆತಗಳನ್ನು ಪರಿಣಾಮಕಾರಿಯಾಗಿ ಬಳಸಿದ ಇಂಗ್ಲೆಂಡ್

ಶಾರ್ಟ್ ಎಸೆತಗಳನ್ನು ಪರಿಣಾಮಕಾರಿಯಾಗಿ ಬಳಸಿದ ಇಂಗ್ಲೆಂಡ್

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 416 ರನ್‌ಗಳನ್ನು ಗಳಿಸಿ ಪಂದ್ಯದಲ್ಲಿ ಹಿಡಿತವನ್ನು ಸಾಧಿಸಿತ್ತು. ಆದರೆ ಎರಡನೆ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಗಳಿಸಲು ಸಾಧ್ಯವಾಗಿದ್ದು 245 ರನ್‌ಗಳನ್ನು ಮಾತ್ರ. ಭಾರತ ಬ್ಯಾಟಿಂಗ್ ವಿಭಾಗದ ಈ ಮಟ್ಟದ ಕುಸಿತಕ್ಕೆ ಕಾರಣವಾಗಿದ್ದು ಇಂಗ್ಲೆಂಡ್ ಬೌಲರ್‌ಗಳು ಶಾರ್ಟ್ ಎಸೆತಗಳನ್ನು ಭಾರತದ ವಿರುದ್ಧ ಪರಿಣಾಮಕಾರಿಯಾಗಿ ಪ್ರಯೋಗಿಸಿದ್ದು. ಅದರಲ್ಲೂ ವಿಶೇಷವಾಗಿ ಭಾರತದ ಕೆಳ ಕ್ರಮಾಂಕದ ದಾಂಡಿಗರ ವಿರುದ್ಧ. ಹತ್ತು ವಿಕೆಟ್‌ಗಳ ಪೈಕಿ ನಾಲ್ಕು ವಿಕೆಟ್‌ಗಳು ಶಾರ್ಟ್ ಎಸೆತಗಳಿಗೆ ಉರುಳಿದ್ದವು.

ವಿಕ್ರಮ್ ರಾಥೋರ್ ಹೇಳಿದ್ದೇನು?

ವಿಕ್ರಮ್ ರಾಥೋರ್ ಹೇಳಿದ್ದೇನು?

"ಹೌದು ಅವರು ನಮ್ಮ ವಿರುದ್ಧ ಶಾರ್ಟ್ ಎಸೆತಗಳನ್ನು ಬಳಸುವ ಯೋಜನೆ ಪ್ರಯೋಗಿಸಿದರು. ಇದನ್ನು ನಾವು ಇನ್ನಷ್ಟು ಉತ್ತಮವಾಗಿ ಎದುರಿಸಬಹುದಾಗಿತ್ತು. ನಾವು ಸ್ವಲ್ಪ ಭಿನ್ನವಾಗಿ ಆ ಎಸೆತಗಳಿಗೆ ಆಡಬಹುದಾಗಿತ್ತು. ಈ ಎಸೆತಗಳಿಗೆ ಆಟಗಾರರು ಆಡಲು ಮುಂದಾಗುತ್ತಿದ್ದರು. ಆದರೆ ತಮ್ಮ ಯೋಜನೆಯಂತೆ ಆಡಲು ವಿಫಲವಾಗಿದ್ದಾರೆ. ಹಾಗಿ ವಿಕೆಟ್‌ಗಳು ಉರುಳಿದೆ. ಇಂಥಾ ಸಂದರ್ಭಗಳಲ್ಲಿ ಅವುಗಳನ್ನು ಹೇಗೆ ಎದುರಸಿಬೇಕೆಂದು ನಾವು ಮತ್ತೊಮ್ಮೆ ಯೋಚಿಸಬೇಕಿದೆ" ಎಂದಿದ್ದಾರೆ ವಿಕ್ರಮ್ ರಾಥೋರ್.

ಸೋಲು ಅನುಭವಿಸಿದ ಭಾರತ

ಸೋಲು ಅನುಭವಿಸಿದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಮೊದಲ ಮೂರು ದಿನಗಳ ಕಾಲ ಅಮೋಘ ಪ್ರದರ್ಶನ ನೀಡಿತ್ತು. ಈ ಮೂಲಕ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸುವುದರ ಜೊತೆಗೆ ಗೆಲುವು ಸಾಧಿಸುವ ಆತ್ಮವಿಶ್ವಾಸದಲ್ಲಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಸಂಪೂರ್ಣ ವೈಫಲ್ಯ ಅನುಭವಿಸಿತು. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಎಡವಿದ ಭಾರತ ನಿರೀಕ್ಷಿತ ಗುರಿ ನಿಗದಿಪಡಿಸುವಲ್ಲಿ ವಿಫಲವಾಯಿತು. ಬಳಿಕ ಬೌಲಿಂಗ್‌ನಲ್ಲಿಯೂ ಹಿನ್ನಡೆ ಅನುಭವಿಸುವುದರೊಂದಿಗೆ ಸೋಲು ಅನುಭವಿಸಿದೆ.

ಇತ್ತಂಡಗಳ ಪ್ಲೇಯಿಂಗ್ XI

ಇತ್ತಂಡಗಳ ಪ್ಲೇಯಿಂಗ್ XI

ಇಂಗ್ಲೆಂಡ್: ಝಾಕ್ ಕ್ರಾಲಿ, ಅಲೆಕ್ಸ್ ಲೀಸ್, ಆಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್

ಭಾರತ: ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ(ನಾಯಕ), ಮೊಹಮ್ಮದ್ ಸಿರಾಜ್

ಬೆಂಚ್: ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್

For Quick Alerts
ALLOW NOTIFICATIONS
For Daily Alerts
Story first published: Tuesday, July 5, 2022, 21:24 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X