ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ 1st ODI: ಭಾರತ vs ನ್ಯೂಜಿಲೆಂಡ್ ಸಂಭಾವ್ಯ 11ರ ಬಳಗ; ಗಾಯಾಳು ಶ್ರೇಯಸ್ ಬದಲಿಗೆ ಸೂರ್ಯ?

IND vs NZ 1st ODI: India vs New Zealand Probable Playing 11; Suryakumar To Replace Injured Shreyas Iyer?

ಬುಧವಾರ, ಜನವರಿ 18ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ.

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಭಾರತ ತಂಡಕ್ಕೆ ಹಿನ್ನಡೆಯಾಗಿದ್ದು, ಮೊದಲ ಪಂದ್ಯದ ಹಿಂದಿನ ದಿನ ಇನ್‌ಫಾರ್ಮ್ ಬ್ಯಾಟರ್ ಶ್ರೇಯಸ್ ಅಯ್ಯರ್ ಬೆನ್ನುನೋವಿಗಿ ತುತ್ತಾಗಿ ಕಾರಣದಿಂದಗಿ ಸರಣಿಯಿಂದ ಹೊರಗುಳಿದಿದ್ದಾರೆ.

IND vs NZ: ಈತನಿಗಾಗಿ ವಿರಾಟ್ ಕೊಹ್ಲಿ 3ನೇ ಸ್ಥಾನವನ್ನು ತ್ಯಾಗ ಮಾಡಬೇಕು ಎಂದ ಸಂಜಯ್ ಮಂಜ್ರೇಕರ್

ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಅಸಾಧಾರಣ ಮಧ್ಯಮ ಕ್ರಮಾಂಕವನ್ನು ಮುನ್ನಡೆಸುವ ನಿರೀಕ್ಷೆಯಿದೆ.

ಆದರೂ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ರಜತ್ ಪಾಟಿದಾರ್, ಪ್ರವಾಸಿ ಕಿವೀಸ್ ವಿರುದ್ಧದ ಸರಣಿಗೆ ಶ್ರೇಯಸ್ ಅಯ್ಯರ್ ಬದಲಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇಶಾನ್ ಕಿಶನ್ ಭಾರತದ ಮಧ್ಯಮ ಕ್ರಮಾಂಕದ ಭಾಗ

ಇಶಾನ್ ಕಿಶನ್ ಭಾರತದ ಮಧ್ಯಮ ಕ್ರಮಾಂಕದ ಭಾಗ

ಇದೇ ವೇಳೆ, ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರು ಭಾರತದ ಮಧ್ಯಮ ಕ್ರಮಾಂಕದ ಭಾಗವಾಗಲಿದ್ದಾರೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಇತ್ತೀಚಿಗೆ ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಮಾತ್ರ ಆಡಿದ್ದರು. ಆದರೆ, ವಿಕೆಟ್ ಕೀಪರ್- ಬ್ಯಾಟರ್ ಇಶಾನ್ ಕಿಶನ್ ಸರಣಿಯುದ್ದಕ್ಕೂ ಬೆಂಚ್ ಕಾಯಿಸಬೇಕಾಗಿತ್ತು.

ಕುಲದೀಪ್ ಮತ್ತು ಚಹಾಲ್ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್

ಕುಲದೀಪ್ ಮತ್ತು ಚಹಾಲ್ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್

ರಜತ್ ಪಾಟಿದಾರ್ ಈ ಹಿಂದೆ ಹಲವಾರು ಸರಣಿಗಳಿಗಾಗಿ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಕೆಎಲ್ ರಾಹುಲ್ ಹೊರತುಪಡಿಸಿ, ಅಕ್ಷರ್ ಪಟೇಲ್ ಅವರಿಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆಡುವ ಹನ್ನೊಂದರ ಬಳಗದಲ್ಲಿ ವಾಷಿಂಗ್ಟನ್ ಸುಂದರ್ ಕಾನಿಸಿಕೊಳ್ಳಬಹುದು.

ಇಲ್ಲಿಯವರೆಗೆ, ಭಾರತವು ಪ್ರತಿ ಆಡುವ ಹನ್ನೊಂದರ ಬಳಗದಲ್ಲಿ ಐದು ವರ್ಷಗಳ ನಂತರ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಜೊತೆಯಾಗಿ ಆಡಬಹುದೇ ಅಥವಾ ತಂಡದ ಮ್ಯಾನೇಜ್‌ಮೆಂಟ್ ಒಬ್ಬರಿಗೆ ಮಾತ್ರ ಅವಕಾಶ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಉಪನಾಯಕ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಪಾತ್ರ

ಉಪನಾಯಕ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಪಾತ್ರ

ಯುಜ್ವೇಂದ್ರ ಚಾಹಲ್ ಭುಜದ ನೋವಿನಿಂದಾಗಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡರು. ಆದರೆ ಕಿವೀಸ್ ವಿರುದ್ಧದ ಸರಣಿಗೆ ಲಭ್ಯವಿದ್ದ್ದಾರೆ. ಉಳಿದಂತೆ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಉಮ್ರಾನ್ ಮಲಿಕ್ ತಂಡದ ಸ್ಪೆಷಲಿಸ್ಟ್ ವೇಗದ ಬೌಲರ್‌ಗಳಾಗುವ ಸಾಧ್ಯತೆಯಿದೆ. ಉಪನಾಯಕ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಆಡಲಿದ್ದಾರೆ.

ಮತ್ತೊಂದೆಡೆ, ಪ್ರವಾಸಿ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಅವರು ಹಿರಿಯ ಸ್ಪಿನ್ನರ್ ಇಶ್ ಸೋಧಿಯನ್ನು ಮೊದಲ ಏಕದಿನ ಪಂದ್ಯದಿಂದ ಹೊರಗಿಡಲಾಗಿದೆ ಎಂದು ಖಚಿತಪಡಿಸಿದ್ದಾರೆ. ಇಶ್ ಸೋಧಿ ಮಂಗಳವಾರ ನೆಟ್ಸ್‌ನಲ್ಲಿ ತಲೆ ತಿರುಗಿಬಿದ್ದರು ಮತ್ತು ಬೌಲಿಂಗ್ ಅಭ್ಯಾಸ ಮಾಡಲಿಲ್ಲ.

"ದುರದೃಷ್ಟವಶಾತ್, ಇಶ್ ಸೋಧಿಗೆ ತಲೆಸುತ್ತು ಬಂತು. ಅವರು ಮೊದಲ ಪಂದ್ಯಕ್ಕೆ ಲಭ್ಯವಾಗುವುದಿಲ್ಲ. ಆದರೆ, ಮುಂದಿನ ಎರಡು ಪಂದ್ಯಗಳಿಗೆ ಲಭ್ಯವಿರುತ್ತಾರೆ," ಎಂದು ಟಾಮ್ ಲ್ಯಾಥಮ್ ತಿಳಿಸಿದರು.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಸಂಭಾವ್ಯ ಆಡುವ 11ರ ಬಳಗ

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಸಂಭಾವ್ಯ ಆಡುವ 11ರ ಬಳಗ

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ/ ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್, ಹೆನ್ರಿ ಶಿಪ್ಲೆರ್ಸನ್

Story first published: Tuesday, January 17, 2023, 22:08 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X